ಸ್ವಾತಂತ್ರ್ಯ ದಿನಾಚರಣೆ ದಿನವೇ ಪಟ್ಟಣ ಪಂಚಾಯಿತಿ ನೌಕರರಿಂದ ಗುಂಡು ತುಂಡಿನ ಪಾರ್ಟಿ, ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Aug 16, 2021 | 10:05 AM

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ನೌಕರರು ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್‌ನಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನವೇ ಪಟ್ಟಣ ಪಂಚಾಯಿತಿ ನೌಕರರಿಂದ ಗುಂಡು ತುಂಡಿನ ಪಾರ್ಟಿ, ವಿಡಿಯೋ ವೈರಲ್
ಸ್ವಾತಂತ್ರ್ಯ ದಿನಾಚರಣೆ ದಿನವೇ ಪಟ್ಟಣ ಪಂಚಾಯಿತಿ ನೌಕರರಿಂದ ಗುಂಡು ತುಂಡಿನ ಪಾರ್ಟಿ
Follow us on

ವಿಜಯಪುರ: ಆಗಸ್ಟ್ 15ರಂದು ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ದೇಶ ಭಕ್ತಿಯನ್ನು ಪ್ರದರ್ಶಿಸಿದೆ. ಆ ದಿನಕ್ಕಾಗಿ ತಮ್ಮ ಪ್ರಾಣವನ್ನು ಬಿಟ್ಟ ಹೋರಾಟಗಾರರನ್ನು ನೆನಪಿಸಿಕೊಂಡಿದೆ. ಆದ್ರೆ ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬೇರೆ ರೀತಿಯೇ ಆಚರಿಸಲಾಗಿದೆ. ಸ್ವಾತಂತ್ರ್ಯ ದಿನವೇ ನಾಲತವಾಡ ಪಟ್ಟಣ ಪಂಚಾಯಿತಿ ನೌಕರರು ಗುಂಡು ತುಂಡಿನ ಪಾರ್ಟಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿ ನೌಕರರು ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್‌ನಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿಯ ಎಫ್‌ಡಿಸಿ, ಎಸ್‌ಡಿಸಿ, ಕಿರಿಯ ಆರೋಗ್ಯ ನಿರೀಕ್ಷಕ, ಐಟಿ ಸಿಬ್ಬಂದಿ, ಡಿ ದರ್ಜೆ ಸಿಬ್ಬಂದಿ ಪಾರ್ಟಿಯಲ್ಲಿ ಮೋಜು-ಮಸ್ತಿ ಮಾಡಿದ್ದಾರೆ. ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಘಟಕದಲ್ಲೇ ನಾನ್ ವೆಜ್ ತಯಾರಿಸಿ, ಮದ್ಯ ತಂದು ಸೇವನೆ ಮಾಡಿದ ಫುಲ್ ಪಾರ್ಟಿ ಮಾಡಿದ್ದಾರೆ. ಸದ್ಯ ಈ ಪಾರ್ಟಿ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೆಷಲ್ ಎಣ್ಣೆ ಬದನೆಕಾಯಿ; ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ