ಪಂಚಮಸಾಲಿ 3ನೇ ಪೀಠಕ್ಕೆ 60 ಸ್ವಾಮೀಜಿಗಳ ಬೆಂಬಲವಿದೆ: ಸುರೇಶ್ ಬಿರಾದಾರ್

| Updated By: preethi shettigar

Updated on: Jan 23, 2022 | 5:10 PM

ನಿರಾಣಿ ಅವರ ಪೀಠ ಎನ್ನುವುದು ತಪ್ಪು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂರನೇ ಪೀಠಕ್ಕೆ ಸಮಾಜದ ಮುಖಂಡರು ಹಾಗೂ ಜನರು ಬೆಂಬಲ ನೀಡಿದ್ದಾರೆ. ಮೂರನೇ ಪೀಠದ ಬಗ್ಗೆ ಯಾವುದೇ ಗೊಂದಲ ಬೇಡ. ಇದರ ವಿರುದ್ಧ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪಂಚಮಸಾಲಿ 3ನೇ ಪೀಠಕ್ಕೆ 60 ಸ್ವಾಮೀಜಿಗಳ ಬೆಂಬಲವಿದೆ: ಸುರೇಶ್ ಬಿರಾದಾರ್
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ
Follow us on

ವಿಜಯಪುರ: ವೀರಶೈವ ಲಿಂಗಾಯತ ಪಂಚಮಸಾಲಿ (Veerashaiva panchamasali Lingayat) ಸಮಾಜದ ಮೂರನೇ ಪೀಠ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸ್ಥಾಪನೆಯಾಗುವುದಕ್ಕೆ 60 ಸ್ವಾಮೀಜಿಗಳ ಬೆಂಬಲ ಇದೆ. ಮುಂದುವರಿದು ಮಾತನಾಡಿದ ಅವರು, ಹರಿಹರ ಪೀಠ ಹಾಗೂ ಮೂರನೇ ಪೀಠ ಸಚಿವ ಮುರುಗೇಶ ನಿರಾಣಿ (murugesh nirani) ಪರಿವಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಇದು ಸುಳ್ಳು, ಮೂರನೇ ಪೀಠದಲ್ಲಿ 60 ಸ್ವಾಮೀಜಿಗಳ ಬೆಂಬಲವಿದೆ. ಸಮಾಜದ ಜನರಿಗೆ ಉತ್ತಮ ಸಂಸ್ಕಾರ ನೀಡಲು ಮೂರನೇ ಪೀಠ ಅಸ್ತಿತ್ವಕ್ಕೆ ಬರಲಿದೆ. ಪಂಚಮಸಾಲಿ ಸಮುದಾಯದ (panchamasali community) ಜನರಿಗೆ ಧಾರ್ಮಿಕ ಶಿಕ್ಷಣ ಸಿಗಲಿ ಎನ್ನುವ ಕಾರಣಕ್ಕೆ ಪೀಠ ಸ್ಥಾಪನೆ ಮಾಡಲಾಗುತ್ತಿದೆ. ಕೂಡಲಸಂಗಮ ಪೀಠ ಆಸಂವಿಧಾನಿಕವಾಗಿ ಸ್ಥಾಪನೆಯಾಗಿದೆ. ಕೂಡಲಸಂಗಮ ‌ಪೀಠ ಸ್ಥಾಪನೆಗೆ ಯಾವುದೇ ಶ್ರೀಗಳು ಮುಖಂಡರು ಬೆಂಬಲ ನೀಡಿರಲಿಲ್ಲ. ಆದರೆ ಅಸಂವಿಧಾನಿಕವಾಗಿ ಕೂಡಲ ಸಂಗಮ ಪೀಠ ಸ್ಥಾಪನೆ ಮಾಡಲಾಗಿದೆ. ಮೂರನೇ ಪೀಠದ ಸ್ಥಾಪನೆಗೆ ಎಲ್ಲರ ಸಹಕಾರ ನೀಡಿದ್ದಾರೆ. ಪಂಚಮಸಾಲಿ ಮೂರನೇ ಪೀಠ ಪಂಚ ತತ್ವಗಳ ಆಧಾರದಲ್ಲಿ ಸ್ಥಾಪನೆಯಾಗುತ್ತಿದೆ ಎಂದು ವಿಜಯಪುರ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡ ಸುರೇಶ್ ಬಿರಾದಾರ್ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಪಂಚಮಸಾಲಿ ಸಮುದಾಯದ ಒಕ್ಕೂಟದ ಶ್ರೀಗಳು ಹಾಗೂ ಮುಖಂಡರು ಇಂದು ಸುದ್ದಿಗೋಷ್ಟಿ ನಡೆಸಿದ್ದು, ಈ ವೇಳೆ ಪಂಚಮಸಾಲಿ ಸಮುದಾಯದ ಮುಖಂಡ ಸುರೇಶ ಬಿರಾದಾರ ಮಾತನಾಡಿದ್ದಾರೆ. ಮೂರನೇ ಪೀಠ ಪರ್ಯಾಯ ಪೀಠವೂ ಅಲ್ಲ. ಸಮಾಜ ಒಡೆಯುವ ಕೆಲಸವನ್ನು ಮಾಡಿಲ್ಲ. ಇದು ಪಂಚಮಸಾಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡಲು ಮಾಡಲಾಗುತ್ತಿದೆ. ಇದು ನಿರಾಣಿ ಅವರ ಪೀಠ ಎನ್ನುವುದು ತಪ್ಪು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂರನೇ ಪೀಠಕ್ಕೆ ಸಮಾಜದ ಮುಖಂಡರು ಹಾಗೂ ಜನರು ಬೆಂಬಲ ನೀಡಿದ್ದಾರೆ. ಮೂರನೇ ಪೀಠದ ಬಗ್ಗೆ ಯಾವುದೇ ಗೊಂದಲ ಬೇಡ. ಇದರ ವಿರುದ್ಧ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 3ನೇ ಪೀಠ ಅಗತ್ಯವಿದೆ: ಮಹಾದೇವ ಶಿವಾಚಾರ್ಯ

ಜಮಖಂಡಿ ಭಾಗದಲ್ಲಿ ಕಳೆದ ಒಂದು ವರ್ಷದಿಂದ 60 ಸ್ವಾಮೀಜಿಗಳು ಸೇರಿ ಹಲವುಬಾರಿ ಸಭೆಗಳನ್ನು ಮಾಡಿದ್ದೇವೆ. ಈಗಾಗಲೇ ಎರಡು ಪೀಠಗಳು ಇದ್ದರೂ ಮೂರನೇ ಪೀಠ ಅವಶ್ಯಕತೆ ಇದೆ ಎಂದು ಮನಗಂಡೆವು. ಎರಡೂ ಪೀಠಗಳು ಸಮಾಜ ಪರ ಧರ್ಮ ರಕ್ಷಣೆ, ಸಂಸ್ಕಾರ ಕಲಿಸುವುದು, ಧಾರ್ಮಿಕ ಭೋದನೆ ಮಾಡಿಲ್ಲ. ಹಾಗಾಗಿ ಮೂರನೇ ಪೀಠ ಮಾಡುವ ಯೋಜನೆ ಮಾಡಿದ್ದೇವೆ. ಈ ಹಿಂದೆ ಹರಿಹರ ಪೀಠಕ್ಕೆ ನಮ್ಮನ್ನೇ ಪೀಠಾಧ್ಯಕ್ಷರನ್ನಾಗಿಸಲಿದ್ದೇವೆ ಎಂದು ಹರಿಹರದಿಂದ ಬಂದಿದ್ದ ಹಲವು ಹಿರಿಯರು ಹೇಳಿದ್ದರು. ಬಳಿಕ ಹರಿಹರ ಪೀಠದಿಂದ ನಮ್ಮನ್ನು ಕೈ ಬಿಡಲಾಗಿತ್ತು. ಹಾಗಾಗಿ ನಾವು ಸುಮ್ಮನಾಗಿದ್ದೇವು. ಇದೀಗ ಮೂರನೇ ಪೀಠದ ಅವಕಾಶ ಬಂದಿದೆ. ಈಗ ನಾನು ಪೀಠಾಧ್ಯಕ್ಷರಾಗಲು ನಾವು ಒಪ್ಪಿಗೆಯನ್ನು ನೀಡಿದ್ದೇವೆ ಎಂದು ವಿಜಯಪುರ ನಗರದಲ್ಲಿ ಬಬಲೇಶ್ವರ ಗುರುಪಾದೇಶ್ವರ ಬ್ರಹನ್ಮಠದ ಪೀಠಾದೀಪತಿ ಹಾಗೂ ಮೂರನೇ ಪಂಚಮಸಾಲಿ ಪೀಠದ ನಿಯೋಜಿತ ಪೀಠಾಧಿಪತಿ ಮಹಾದೇವ ಶಿವಾಚಾರ್ಯ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಗಳಿಗೆ ಸಹಾಯ ಮಾಡುವ ಮನಸ್ಸು ನಿರಾಣಿಗೆ ಇದೆ: ಸಂಗನಬಸವ ಸ್ವಾಮೀಜಿ

ಪಂಚ ಪೀಠ ಮಾಡಿದರೂ ಏನು ತಪ್ಪು ಎಂದು ಹರಿಹರ ಪೀಠದ ಹಿಂದಿನ ಜಗದ್ಗುರು ಡಾ.ಮಹಾಂತ ಶ್ರೀಗಳು ಕೇಳಿದ್ದರು. ಹೀಗಾಗಿ ಅಗತ್ಯತೆಗೆ ಅನುಗುಣವಾಗಿ 3ನೇ ಪೀಠ ಮಾಡುತ್ತಿದ್ದೇವೆ. ಇನ್ನೂ ಸಚಿವ ನಿರಾಣಿ ಎಲ್ಲಾ ಸಮುದಾಯಗಳಿಗೆ ಸಹಾಯ ಮಾಡಿದ್ದಾರೆ. ನಾವು ಇದುವರೆಗೆ ಸಚಿವ ನಿರಾಣಿಯವರ ಸಂಪರ್ಕದಲ್ಲಿ ಇಲ್ಲ. ಸ್ವಾಮೀಜಿಗಳಿಗೆ ಸಹಾಯ ಮಾಡುವ ಮನಸ್ಸು ನಿರಾಣಿಗೆ ಇದೆ. ಆದರೆ ಇದು ಸಚಿವ ನಿರಾಣಿ ಕುಮ್ಮಕ್ಕಿನಿಂದ ಆಗಿರುವ ಪೀಠವಲ್ಲ ಎಂದು ವಿಜಯಪುರದಲ್ಲಿ ಮನಗೂಳಿಯ ಸಂಗನಬಸವ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಪಂಚಮಸಾಲಿ 3ನೇ ಗುರುಪೀಠ ಸ್ಥಾಪನೆಗೆ ನಮ್ಮ ವಿರೋಧವಿಲ್ಲ: ವಚನಾನಂದ ಸ್ವಾಮೀಜಿ

ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

 

Published On - 5:00 pm, Sun, 23 January 22