ವಿಜಯಪುರ: ಲಾಯರ್ ಸೈಯದ್ ಆಸೀಫುಲ್ಲಾ ಖಾದ್ರಿ ಗಡಿಪಾರು ಮಾಡಿ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಆದೇಶ ಹೊರಡಿಸಿದ್ದಾರೆ. 2022 ಮೇ 10 ರಿಂದ 2023 ಮೇ 9 ರವರೆಗೆ ವಿಜಯಪುರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರಿಗೆ ಆದೇಶಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಿಸಿ ಗಡಿಪಾರು ಮಾಡಲಾಗಿದೆ. ಆರೋಪಿ ಸೈಯದ್ ಆಸೀಫುಲ್ಲಾ ಖಾದ್ರಿ ನಿತ್ಯ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ಹಾಜರಾತಿ ಹಾಕಬೇಕು. ಗಡಿಪಾರು ಆದೇಶದಲ್ಲಿ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಿತ್ಯ ಹಾಜರಾತಿ ಹಾಕಲು ನಿರ್ದೇಶನ ನೀಡಲಾಗಿದೆ. ಆರೋಪಿ ಸೈಯದ್ ವಿರುದ್ಧ ಸಾಮಾಜಿಕ ಸ್ವಾಸ್ತ್ಯ ಹಾಳು ಮಾಡುವ ಆರೋಪ, ಕೋಮು ಗಲಭೆ, ಕಾನೂನು ಸುವ್ಯವಸ್ಥೆ ಹಾಳು ಮಾಡೂ ಸಾಧ್ಯತೆ ಆರೋಪ ಕೇಳಿ ಬಂದಿದ್ದು ಪೊಲೀಸರ ತನಿಖಾ ಹಂತದಲ್ಲಿ ಮೂರು ಪ್ರಕರಣಗಳಿವೆ. ನ್ಯಾಯಾಲಯದ ವಿಚಾರಣೆಯಲ್ಲಿರೋ ಒಂದು ಪ್ರರಕಣದಲ್ಲಿ ಸೈಯದ್ ಆಸೀಫುಲ್ಲಾ ಖಾದ್ರಿ ಆರೋಪಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕೇರಳದಲ್ಲಿ ಅರೆಸ್ಟ್ ಆದ ಇಬ್ಬರು ನಕ್ಸಲರನ್ನ 10 ದಿನ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ ನ್ಯಾಯಾಲಯ
ಉಡುಪಿ: ಶೃಂಗೇರಿ ಭುವನಹಕ್ಲು ನಿವಾಸಿ, ನಕ್ಸಲ್ ನಾಯಕ ಬಿ.ಜೆ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಸೇರಿ ಇಬ್ಬರು ನಕ್ಸಲರನ್ನು ಮೇ 20ರವರೆಗೆ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಉಡುಪಿ ಜಿಲ್ಲೆಯ ಕುಂದಾಪುರ ನ್ಯಾಯಾಲಯ ಆದೇಶ ಹೊರಡಿಸಿದೆ. ಕೇರಳದಲ್ಲಿ ಬಂಧಿತರಾದ ನಕ್ಸಲ್ ನಾಯಕರನ್ನು ಮೇ 20 ರವರೆಗೆ ಅಂದರೆ 10 ದಿನಗಳ ಕಾಲ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.
ನಕ್ಸಲ್ ಚಟುವಟಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿ ಆಗಿರುವ ಆರೋಪ ಸಂಬಂಧ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಬ್ಬರನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಕೇರಳದಲ್ಲಿ ಬಿ.ಜೆ.ಕೃಷ್ಣಮೂರ್ತಿ, ಸಾವಿತ್ರಿಯನ್ನು ಕೇರಳ ಭಯೋತ್ಪಾದನಾ ನಿಗ್ರಹ ಪಡೆ ಕಳೆದ ನವೆಂಬರ್ 10ರಂದು ವಯನಾಡಿನಲ್ಲಿ ಬಂಧಿಸಿತ್ತು. ಫೆ.24ರಂದು ಇಬ್ಬರನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹಲವು ಪ್ರಕರಣ ಸಂಬಂಧ ವಿಚಾರಣೆಗಾಗಿ ಕೇರಳ ಪೊಲೀಸರು ಕೃಷ್ಣಮೂರ್ತಿ, ಸಾವಿತ್ರಿ ಹಸ್ತಾಂತರಿಸಿದ್ದರು. ಸದ್ಯ 10 ದಿನಗಳ ಕಾಲ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ.
ಸದ್ಯ ಈಗಾಗಲೆ ಹೆಬ್ರಿ, ಕಾರ್ಕಳ ಮತ್ತು ಅಜೆಕಾರು ಠಾಣಾ ವ್ಯಾಪ್ತಿಯ ಪ್ರಕರಣದ ಮಹಜರು ಮುಕ್ತಾಯಗೊಂಡಿದೆ. 2006 ರಲ್ಲಿ ಕುಂದಾಪುರ ಅಮಾಸೆಬೈಲ್ ನಡೆದ ಪ್ರಕರಣ ವಿಚಾರಣೆ ನಡೆಸಬೇಕಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳದ ಹತ್ಯೆ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪವಿಭಾಗದ ಪೊಲೀಸರು ಕೃಷ್ಣಮೂರ್ತಿ, ಸಾವಿತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೇಲೆ ಅಮಾಸೆಬೈಲು ಠಾಣೆಯಲ್ಲಿ 4, ಶಂಕರನಾರಾಯಣ 6, ಕೊಲ್ಲೂರಿನಲ್ಲಿ 1 ಪ್ರಕರಣ ದಾಖಲಾಗಿದೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮತ್ತು ತಂಡದಿಂದ ನಕ್ಸಲ್ ವಾದಿಗಳ ವಿಚಾರಣೆ ನಡೆಯಲಿದೆ.
Published On - 8:01 pm, Thu, 12 May 22