AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಸಮಯದಲ್ಲಿ ಒಂಟಿ ಮನೆಗಳನ್ನ ಟಾರ್ಗೆಟ್ ಮಾಡ್ತಿದ್ದ ಖದೀಮ ಅಂದರ್​

ವಿಜಯಪುರ: ಇಡೀ ಮನುಷ್ಯ ಸಂಕುಲ ಕೊರೊನಾದಿಂದ ಜರ್ಜರಿತವಾಗಿದೆ. ಎಲ್ಲೆಡೆ ಲಾಕ್​ಡೌನ್ ಘೋಷಣೆಯಾಗಿ ಇದೀಗಾ ಸ್ವಲ್ಪ ಮಟ್ಟಿಗೆ ಸಡಲಿಕೆ ಆಗಿದೆ. ಎಲ್ಲರೂ ಮನೆಯಿಂದ ಆಚೆಬಾರದೇ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇಂಥದ್ದರಲ್ಲಿ ವಿಜಯಪುರ ನಗರದೊಲ್ಲೊಬ್ಬ ಮನೆಗಳ್ಳ ಖದೀಮ ರೋಹಿತ್ ಕಾಯಗೊಂಡ ಅಂದರ್ ಆಗಿದ್ದಾನೆ. ಖದೀಮನ ಬಂಧನಕ್ಕೆ ವಿಶೇಷ ತಂಡ: ಲಾಕ್​ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದರೂ ಸಹ ರೋಹಿತ್ ಕಾಯಗೊಂಡ ಕೆಲ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಕೆಲ ಮನೆಗಳಲ್ಲಿ ಒಂಟಿಯಾಗಿ ವಾಸಿಸುವವರ ಮನೆಗಳನ್ನೂ ಈತ ಲಿಸ್ಟ್ ಮಾಡುತ್ತಿದ್ದ. […]

ಲಾಕ್​ಡೌನ್ ಸಮಯದಲ್ಲಿ ಒಂಟಿ ಮನೆಗಳನ್ನ ಟಾರ್ಗೆಟ್ ಮಾಡ್ತಿದ್ದ ಖದೀಮ ಅಂದರ್​
ಸಾಧು ಶ್ರೀನಾಥ್​
| Edited By: |

Updated on:May 22, 2020 | 1:59 PM

Share

ವಿಜಯಪುರ: ಇಡೀ ಮನುಷ್ಯ ಸಂಕುಲ ಕೊರೊನಾದಿಂದ ಜರ್ಜರಿತವಾಗಿದೆ. ಎಲ್ಲೆಡೆ ಲಾಕ್​ಡೌನ್ ಘೋಷಣೆಯಾಗಿ ಇದೀಗಾ ಸ್ವಲ್ಪ ಮಟ್ಟಿಗೆ ಸಡಲಿಕೆ ಆಗಿದೆ. ಎಲ್ಲರೂ ಮನೆಯಿಂದ ಆಚೆಬಾರದೇ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇಂಥದ್ದರಲ್ಲಿ ವಿಜಯಪುರ ನಗರದೊಲ್ಲೊಬ್ಬ ಮನೆಗಳ್ಳ ಖದೀಮ ರೋಹಿತ್ ಕಾಯಗೊಂಡ ಅಂದರ್ ಆಗಿದ್ದಾನೆ.

ಖದೀಮನ ಬಂಧನಕ್ಕೆ ವಿಶೇಷ ತಂಡ: ಲಾಕ್​ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದರೂ ಸಹ ರೋಹಿತ್ ಕಾಯಗೊಂಡ ಕೆಲ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಕೆಲ ಮನೆಗಳಲ್ಲಿ ಒಂಟಿಯಾಗಿ ವಾಸಿಸುವವರ ಮನೆಗಳನ್ನೂ ಈತ ಲಿಸ್ಟ್ ಮಾಡುತ್ತಿದ್ದ. ಮನೆಯವರು ಆಚೆ ಹೋದ ಕೂಡಲೇ ತನ್ನ ಕೈಚಳಕ ಮಾಡುತ್ತಿದ್ದ. ಮನೆಯಲ್ಲಿ ಸಿಕ್ಕ ನಗ ನಾಣ್ಯ ಕದ್ದು ಎಸ್ಕೇಪ್ ಆಗುತ್ತಿದ್ದ. ಕೊರೊನಾ ಹಾವಳಿ ಮಧ್ಯೆಯೂ ಪೊಲೀಸರಿಗೆ ನಗರದಲ್ಲಿ ಮನೆಗಳ ಕಳ್ಳತನ ಆಗೋದು ತಲೆ ನೋವಾಗಿತ್ತು. ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮಾ, ಮನೆಗಳ್ಳತನ ಮಾಡುತ್ತಿದ್ದವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದರು.

ನಿನ್ನೆ ಸಾಯಂಕಾಲ ತನಿಖಾ ತಂಡದ ಕಣ್ಣಿಗೆ ಬಿದ್ದಿದ್ದೇ ಈ ಖದೀಮ ರೋಹಿತ್. ನಗರದ ಸರಾಫ್ ಬಜಾರಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ ಈತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ನಾನವನಲ್ಲಾ.. ನಾನವನಲ್ಲಾ.. ಎಂದು ಬಡಾಯಿ ಕೊಚ್ಚಿದ್ದನಂತೆ. ಈತನ ವರ್ತನೆ ಕಂಡು ಸಂಶಯ ಹೊಂದಿದ್ದ ಖಾಕಿ ಪಡೆ ತಮ್ಮದೇ ಶೈಲಿಯಲ್ಲಿ ಬಾಯಿ ಬಿಡಿಸಿದ್ದಾರೆ. ತಾನು ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಮನೆಗಳ್ಳ ಮೂಲತಃ ನಗರದ ಹೊರಭಾಗದ ಗಾಂಧಿನಗರದ ಮೂಲ ವಾಸಿ. ಸದ್ಯ ನಗರದ ಗ್ಯಾಂಗ್ ಬಾವಡಿ ಪ್ರದೇಶದಲ್ಲಿ ವಾಸವಿದ್ದಾನೆ. ಮನೆಗಳ್ಳತನ ಮಾಡಿ ಜೀವನ ಮಾಡುತ್ತಿದ್ದಾನಂತೆ.

ಆರೋಪಿ ನ್ಯಾಯಾಂಗ ಬಂಧನಕ್ಕೆ: ಮನೆಗಳ್ಳ ರೋಹಿತ್​ನನ್ನು ಬಂಧಿಸಿರುವ ಪೊಲೀಸರು ಈತನಿಂದ ಬರೋಬ್ಬರಿ 108 ಗ್ರಾಂ ಚಿನ್ನದ ಆಭರಣ ಹಾಗೂ 410 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 3,24,900 ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Published On - 1:59 pm, Fri, 22 May 20

ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ