Soldier Death: ನಿಮೋನಿಯಾದಿಂದ ಬಳಲುತ್ತಿದ್ದ ಕರ್ತವ್ಯ ನಿರತ ವಿಜಯಪುರದ ಯೋಧ ಸಾವು

| Updated By: ಆಯೇಷಾ ಬಾನು

Updated on: Jul 07, 2023 | 12:54 PM

ಕಳೆದ 2021ರಲ್ಲಿ ಕಾಶ್ಮೀರದ ಜಡಗಲ್ಲಿ ಉಂಟಾಗಿದ್ದ ಹಿಮಪಾತದಲ್ಲಿ ಸಿಲುಕಿ ಯೋಧ ರಾಜಶೇಖರ್ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದರು. ಇದೀಗಾ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ ನಿಮೋನಿಯಾದಿಂದ ಬಳಲುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ.

Soldier Death: ನಿಮೋನಿಯಾದಿಂದ ಬಳಲುತ್ತಿದ್ದ ಕರ್ತವ್ಯ ನಿರತ ವಿಜಯಪುರದ ಯೋಧ ಸಾವು
ಯೋಧ ರಾಜಶೇಖರ್ ಮುಜುಗೊಂಡ
Follow us on

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿ ಲಚ್ಯಾಣ ಗ್ರಾಮದ ಕರ್ತವ್ಯ ನಿರತ ಯೋಧ(Soldier) ರಾಜಶೇಖರ್ ಮುಜುಗೊಂಡ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆ ಮಹಾರಾಷ್ಟ್ರದ ಪುಣೆ ಆಸ್ಪತ್ರೆಗೆ ದಾಖಲಾಗಿದ್ದ ಯೋಧ ರಾಜಶೇಖರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಳೆದ 2021ರಲ್ಲಿ ಕಾಶ್ಮೀರದ ಜಡಗಲ್ಲಿ ಉಂಟಾಗಿದ್ದ ಹಿಮಪಾತದಲ್ಲಿ ಸಿಲುಕಿ ಯೋಧ ರಾಜಶೇಖರ್ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದರು. ಇದೀಗಾ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ ನಿಮೋನಿಯಾದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಪುಣೆಯ ಸೇನಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ನಿಮೋನಿಯಾ ಕಾರಣದಿಂದ ಉಸಿರಾಟದ ತೊಂದರೆಯಾಗಿ ಚಿಕಿತ್ಸೆ ಫಲಿಸದೆ ನಿನ್ನೆ(ಜುಲೈ 06) ರಾತ್ರಿ ನಿಧನರಾಗಿದ್ದಾರೆ. ಇಂದು ಪುಣೆಯಿಂದ‌ ಲಚ್ಯಾಣ ಗ್ರಾಮಕ್ಕೆ ಯೋಧನ ಮೃತದೇಹ ಆಗಮಿಸಲಿದೆ.

ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ. 2010 ರಲ್ಲಿ ಮಡ್ರಾಸ್ ಬಟಾಲಿಯನ್ ಗೆ ಸೇರ್ಪಡೆಯಾಗಿದ್ದ ಯೋಧ 3 ವರ್ಷದ ಹಿಂದಷ್ಟೆ ಮದುವೆಯಾಗಿದ್ರು. ಯೋಧನ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದೆ. ಲಚ್ಯಾಣ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Chikkamagaluru News: ಗಂಡನ ಮೇಲಿನ ಅನೈತಿಕ ಸಂಬಂಧಕ್ಕೆ 4 ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಯುವತಿ ದುರಂತ ಅಂತ್ಯ

ಹೃದಯಾಘಾತದಿಂದ ಕರ್ತವ್ಯನಿರತ ASI ಗಂಗಣ್ಣ(56) ಸಾವು

ತುಮಕೂರು ಜಿಲ್ಲೆಯ ಶಿರಾ ಠಾಣೆಯ ಸಹಾಯಕ ಸಬ್ ಇನ್ಸ್​ಪೆಕ್ಟರ್ ಆಗಿದ್ದ ಗಂಗಣ್ಣ(56) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಕರ್ತವ್ಯದಲ್ಲಿದ್ದ ವೇಳೆ ಗಂಗಣ್ಣ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಜೊತೆಯಿದ್ದ ಸಿಬ್ಬಂದಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆತನಿಗೆ ಮದ್ವೆಯಾದರೂ ಬಿಡದ ಪ್ರಿಯತಮೆ, ಪ್ರಿಯಕರನಿಗಾಗಿ ಹೆಂಡ್ತಿಯನ್ನೇ ಕೊಂದ ಮಹಿಳೆ

ಗಂಡನ ಮೇಲಿನ ಅನೈತಿಕ ಸಂಬಂಧಕ್ಕೆ 4 ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಯುವತಿ ದುರಂತ ಅಂತ್ಯ ಕಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮಂಜುನಾಥ್ ಎಂಬುವವನ ಜೊತೆ ಭಾರತಿ ಎಂಬ ಯುವತಿಗೆ ವಿವಾಹವಾಗಿತ್ತು. ಆದ್ರೆ ಮದುವೆಗೆ ಮುಂಚೆಯೇ ಮಂಜುನಾಥನಿಗೆ ಕಾಂತ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತು. ಮಂಜುನಾಥ್ ಮದುವೆಯಾದ ವಿಚಾರ ಕಾಂತಾಳಿಗೆ ತಿಳಿಯುತ್ತಿದ್ದಂತೆ ಆಕೆ ಯನ್ನ ಪ್ರಿಯತಮ ಮಂಜುವಿನ ಮನೆಗೆ ಹೋಗಿ ಆತನ ಹೆಂಡತಿ ಭರತಿಯನ್ನು ಮನೆಯ ಹಿಂಭಾಗದ ಹೊಲಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಹತ್ಯೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ