ಹಾವೇರಿ, ಶಿವಮೊಗ್ಗದಲ್ಲಿ ದೇವಿ ಜಾತ್ರೆ: ಬಬಲೇಶ್ವರದಲ್ಲಿ ದೇವರಿಗೆ ಮದ್ಯ ಸಮರ್ಪಣೆ

|

Updated on: Feb 28, 2020 | 8:14 PM

ಕಣ್ಣು ಹಾಯಿಸಿದ ಕಡೆಯಲ್ಲಾ ಜನಸಾಗರ. ಜನಸಾಗರದ ನಡುವೆ ದೇವಿಯ ಅದ್ಧೂರಿ ಮೆರವಣಿಗೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ವೈಭವ. ಮತ್ತೊಂದ್ಕಡೆ ಅಲಂಕಾರಗೊಂಡು ಕಂಗೊಳಿಸುತ್ತಿರುವ ಮಾರಿಕಾಂಬೆ. ತಾಯಿ ದರ್ಶನ ಪಡೆಯುತ್ತಾ, ಭಕ್ತಿಯಿಂದ ಹರಕೆ ತೀರಿಸುತ್ತಿರುವ ಭಕ್ತಸಾಗರ. ಇದೆಲ್ಲದರ ನಡುವೆ ಗಮನ ಸೆಳೆಯುತ್ತಿರುವ ದೇವರಿಗೆ ಮದ್ಯ ನೈವೈದ್ಯ ಮಾಡುತ್ತಿರುವ ದೃಶ್ಯ. ಹಾವೇರಿ: ಅಂದಹಾಗೇ ಹಾವೇರಿ ನಗರದಲ್ಲಿ 115 ವರ್ಷಗಳಿಂದ ಗ್ರಾಮದೇವಿಯ ಜಾತ್ರೆ ಆಗಿರ್ಲಿಲ್ಲ. ಆದ್ರೆ ಈ ವರ್ಷ ನಗರದಲ್ಲಿ ಗ್ರಾಮದೇವಿ ಜಾತ್ರೆಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ನಗರದ ಗ್ರಾಮದೇವಿ ಆಗಿರೋ […]

ಹಾವೇರಿ, ಶಿವಮೊಗ್ಗದಲ್ಲಿ ದೇವಿ ಜಾತ್ರೆ: ಬಬಲೇಶ್ವರದಲ್ಲಿ ದೇವರಿಗೆ ಮದ್ಯ ಸಮರ್ಪಣೆ
Follow us on

ಕಣ್ಣು ಹಾಯಿಸಿದ ಕಡೆಯಲ್ಲಾ ಜನಸಾಗರ. ಜನಸಾಗರದ ನಡುವೆ ದೇವಿಯ ಅದ್ಧೂರಿ ಮೆರವಣಿಗೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ವೈಭವ. ಮತ್ತೊಂದ್ಕಡೆ ಅಲಂಕಾರಗೊಂಡು ಕಂಗೊಳಿಸುತ್ತಿರುವ ಮಾರಿಕಾಂಬೆ. ತಾಯಿ ದರ್ಶನ ಪಡೆಯುತ್ತಾ, ಭಕ್ತಿಯಿಂದ ಹರಕೆ ತೀರಿಸುತ್ತಿರುವ ಭಕ್ತಸಾಗರ. ಇದೆಲ್ಲದರ ನಡುವೆ ಗಮನ ಸೆಳೆಯುತ್ತಿರುವ ದೇವರಿಗೆ ಮದ್ಯ ನೈವೈದ್ಯ ಮಾಡುತ್ತಿರುವ ದೃಶ್ಯ.

ಹಾವೇರಿ: ಅಂದಹಾಗೇ ಹಾವೇರಿ ನಗರದಲ್ಲಿ 115 ವರ್ಷಗಳಿಂದ ಗ್ರಾಮದೇವಿಯ ಜಾತ್ರೆ ಆಗಿರ್ಲಿಲ್ಲ. ಆದ್ರೆ ಈ ವರ್ಷ ನಗರದಲ್ಲಿ ಗ್ರಾಮದೇವಿ ಜಾತ್ರೆಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ನಗರದ ಗ್ರಾಮದೇವಿ ಆಗಿರೋ ದ್ಯಾಮವ್ವದೇವಿ ದೇವಸ್ಥಾನದಿಂದ ನಗರದಲ್ಲಿ ಸಂಭ್ರಮ ಸಡಗರದಿಂದ ಮೆರವಣಿಗೆ ನಡೆಸಲಾಯ್ತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಹೆಜ್ಜೆ ಹಾಕಿದ್ರೆ, ತಮಟೆ, ಡೊಳ್ಳು ಕುಣಿತ, ಬೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮತ್ತಷ್ಟು ರಂಗು ನೀಡಿದ್ವು.



ಶಿವಮೊಗ್ಗ: ಇದರಂತೆ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಕೂಡ ಸಡಗರ ಸಂಭ್ರಮದಿಂದ ನಡೆಯುತ್ತಿದೆ. 5 ದಿನಗಳ ಕಾಲದ ಜಾತ್ರಾ ಮಹೋತ್ಸವದಲ್ಲಿ, ನಿನ್ನೆ ಭಕ್ತರು ತಾಯಿಗೆ ವಿವಿಧ ಹರಿಕೆ ತಿರಿಸಿದ್ರು. ಜನ ಸಾಗರ ನಡುವೆ ಮಕ್ಕಳು ಮಹಿಳೆಯರು ಪುರುಷರು ಯುವಕ ಯುವತಿಯರು ದೇವಿಗೆ ಹರಿಕೆಯನ್ನು ತೀರಿಸಿದ್ರು.. ಕೆಲವರು ಮೈಗೆ ಬೇವಿನ ಸೊಪ್ಪು ಸುತ್ತಿಕೊಂಡು ದೇವಿಗೆ ಪ್ರದಕ್ಷಿಣೆ ಹಾಕಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ, ಮತ್ತೆ ಕೆಲ ಭಕ್ತರು ದೇವಿಗೆ ಕೋಳಿಯನ್ನು ಹರಿಕೆಯಾಗಿ ನೀಡಿದ್ರು.



ವಿಜಯಪುರ: ಹಾವೇರಿ ಮತ್ತು ಶಿವಮೊಗ್ಗದಲ್ಲಿ ದೇವಿಯ ಜಾತ್ರೆ ನಡೆದ್ರೆ, ವಿಜಯಪುರದಲ್ಲಿ ನಡೆದು ಜಾತ್ರೆ ಸಾಕಷ್ಟು ವಿಭಿನ್ನತೆಯಿಂದ ಕೂಡಿತ್ತು. ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಬಬಲಾದಿಯ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಭಕ್ತರು ಮದ್ಯವನ್ನು ಸಮರ್ಪಣೆ ಮಾಡುತ್ತಾರೆ. ಮಠದಲ್ಲಿರುವ ಸಾಲು ಸಾಲು ದೇವರ ಮೂರ್ತಿಗಳಿಗೆ ಮದ್ಯ ಹಾಕಿ ಭಕ್ತಿ ಮೆರೆದ್ರು.