ವಿಜಯಪುರ: ಸಿಡಿ ಆಚರಣೆ ವೇಳೆ ಕೆಳಗೆ ಬಿದ್ದು ಮಹಿಳೆ ಸಾವು

|

Updated on: Apr 15, 2023 | 10:21 AM

ನಿಷೇಧಿತ ಸಿಡಿ ಆಚರಣೆ ವೇಳೆ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದೆ.

ವಿಜಯಪುರ: ಸಿಡಿ ಆಚರಣೆ ವೇಳೆ ಕೆಳಗೆ ಬಿದ್ದು ಮಹಿಳೆ ಸಾವು
ಸಿಡಿ ಉತ್ಸವ ವೇಳೆ ಕೆಳಗೆ ಬಿದ್ದ ಮಹಿಳೆ
Follow us on

ವಿಜಯಪುರ: ನಿಷೇಧಿತ ಸಿಡಿ ಆಚರಣೆ ವೇಳೆ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ (Indi) ತಾಲೂಕಿನ ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದೆ. ಲಕ್ಷ್ಮೀಬಾಯಿ ಪೂಜಾರಿ ಮೃತ ಮಹಿಳೆ. ಇನ್ನು ಮಹಿಳೆ ಕೆಳಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ​ಇಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಏನಿದು ಸಿಡಿ ಆಚರಣೆ ?

ಮೌಢ್ಯಾಚರಣೆ ವ್ಯಾಪ್ತಿಯಲ್ಲಿ ಬರುವ ‘ಸಿಡಿ’ ಆಚರಣೆ. ಬಾಯಿ, ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಮೇಲಕ್ಕೆ ಎತ್ತಿ ಸುತ್ತಿಸಲಾಗುತ್ತದೆ. ಇಂದು ಒಂದು ರೀತಿಯ ದೇವರ ಸೇವೆ ಮಾಡುವ ಆಚರಣೆ ಇದಾಗಿದೆ.

ಮೌಢ್ಯ ಪ್ರತಿಬಂಧಕ ಕಾಯ್ದೆಯಡಿ ನಿಷೇಧಿಸಿದ್ದ ಸರ್ಕಾರ

ಸಮಾಜದಲ್ಲಿನ ಕೆಲ ಅನಿಷ್ಟ ಪದ್ದತಿಗಳ ಆಚರಿಸುವುದನ್ನು ತಡೆಯುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ತರುವ ಪ್ರಸ್ತಾವ ಮುಂದಿಟ್ಟಿತ್ತು. ಇದನ್ನು 2020ರಲ್ಲಿ ಬಿಎಸ್​ ಯಡಿಯೂರಪ್ಪ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿತ್ತು. ಜನರಲ್ಲಿ ಭೀತಿ ಹುಟ್ಟಿಸುವ, ಮಾನಸಿಕ, ದೈಹಿಕ ದೌರ್ಜನ್ಯ ನಡೆಸುವ, ದೇಹವನ್ನು ಕೊಕ್ಕೆಯಿಂದ ನೇತು ಹಾಕುವುದು, ದೇಹಕ್ಕೆ ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವ ಆಚರಣೆಗಳು ನಿಷಿದ್ಧವಾಗಿವೆ. ಒಂದು ವೇಳೆ ನಿಯಮ ಮೀರಿ ಆಚರಣೆಗಳನ್ನು ಆಚರಿಸುವವರಿಗೆ ಶಿಕ್ಷೆ ವಿಧಿಸಲು ಈ ಕಾಯ್ದೆ ಅವಕಾಶ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Sat, 15 April 23