AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದ ಬಾರ್​ವೊಂದರ ಬಳಿ ಯುವಕನ ಶವ ಪತ್ತೆ; ಒಡೆದ ಬಿಯರ್ ಬಾಟಲಿನಿಂದ ಚುಚ್ಚಿ ಕೊಂದರಾ ದುರುಳರು?

ಆತ ಇನ್ನೂ ಹದಿಹರಿಯದ ಯುವಕ, ಮದುವೆಯಿಲ್ಲ ಆದರೆ ಅಯ್ಯಪ್ಪ ಸ್ವಾಮಿ ಭಕ್ತನಾಗಿದ್ದ ಆತ, ಕುಡಿತಕ್ಕೆ ದಾಸನಾಗಿದ್ದ. ಆತನ ವೀಕ್​ನೆಸ್ ಮನಗಂಡಿದ್ದ ಆತನ ಸಂಬಂಧಿಕರು. ಅಯ್ಯಪ್ಪ ಮಾಲೆ ಇದ್ರೆ ಕುಡಿಯಲ್ಲ ಎಂದು ಯಾವಾಗಲೂ ಅಯ್ಯಪ್ಪ ಮಾಲೆ ಹಾಕಿಸಿದ್ರು. ಒಂದೆಡೆ ಅಯ್ಯಪ್ಪ ಮಾಲೆ ಸೆಂಟಿಮೆಂಟ್, ಮತ್ತೊಂದೆಡೆ ಮದ್ಯವ್ಯಸನ. ಎರಡರ ಮಧ್ಯೆ ಇಕ್ಕಟ್ಟಿಗೆ ಸಿಲುಕಿದ ಯುವಕ, ಕತ್ತಲ್ಲಿದ್ದ ಅಯ್ಯಪ್ಪ ಮಾಲೆ ತೆಗೆದು ಬಾರ್ ಒಂದರ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

ಚಿಕ್ಕಬಳ್ಳಾಪುರದ ಬಾರ್​ವೊಂದರ ಬಳಿ ಯುವಕನ ಶವ ಪತ್ತೆ; ಒಡೆದ ಬಿಯರ್ ಬಾಟಲಿನಿಂದ ಚುಚ್ಚಿ ಕೊಂದರಾ ದುರುಳರು?
ಮೃತ ಗಜೇಂದ್ರ
ಕಿರಣ್ ಹನುಮಂತ್​ ಮಾದಾರ್
|

Updated on:Apr 15, 2023 | 9:54 AM

Share

ಚಿಕ್ಕಬಳ್ಳಾಪುರ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಗಜೇಂದ್ರ(30) ಎನ್ನುವ ಯುವಕ ವಾಸವಿದ್ದ. ವೃತ್ತಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ಬಡತನ ಇದ್ದರೂ ಅಯ್ಯಪ್ಪ ಸ್ವಾಮಿಯ ಭಕ್ತಿ ಕಡಿಮೆಯಾಗಿರಲಿಲ್ಲ. ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಕೊಂಡು ಬರುತ್ತಿದ್ದ. ಹೀಗೆ ಏಪ್ರಿಲ್ 10 ರ ರಾತ್ರಿ 2 ಗಂಟೆ ಸಮಯ ಮನೆಯಿಂದ ಆಚೆ ಬಂದ ಗಜೇಂದ್ರ ತಾನು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗೋದಾಗಿ ಹೇಳಿದ್ದನಂತೆ. ಇನ್ನು ಬೆಳಕು ಹರಿಯುತ್ತಿದ್ದಂತೆ ಆತನ ಸಹೋದರ ಹಾಗೂ ತಾಯಿ ಮನೆಯಿಂದ ಆಚೆ ಬಂದಿದ್ದಾರೆ. ಸಹೋದರನ ಆಟೋದ ಚಾಲಕನ ಸೀಟ್​ನಲ್ಲಿ ಗಜೇಂದ್ರ ಧರಿಸಿದ್ದ ಅಯ್ಯಪ್ಪನ ಮಾಲೆ ಹಾಗೂ ಟವಲ್ ಕಾಣಿಸಿದೆ. ಇದರಿಂದ ಅನುಮಾನಗೊಂಡ ಆತನ ಸಂಬಂಧಿಕರು ಶಬರಿಮಲೆಗೆ ಹೋಗುತ್ತೇನೆ ಅಂದವನು ಮಾಲೆ, ಟವಲ್ ಇಲ್ಲಿ ಯಾಕೆ ಇಟ್ಟು ಹೋದ ಎಂದು ಹುಡುಕಾಡಿದಾಗ ಚಿಂತಾಮಣಿಯ ವಿನಾಯಕ ಬಾರ್​ನ ಹಿಂಬಾಗ ಖಾಲಿ ಜಾಗದಲ್ಲಿ ಗಜೇಂದ್ರ ಬಿದ್ದಿದ್ದ. ಉಸಿರಾಡುತ್ತಿದ್ದ ಕಾರಣ ಆತನ ಸಂಬಂಧಿಗಳು ತಕ್ಷಣ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ರು, ವೈದ್ಯರು ಬಂದು ಪರೀಕ್ಷೆ ಮಾಡುವಷ್ಟರಲ್ಲಿ ಗಜೇಂದ್ರ ಕೊನೆಯುಸಿರೆಳೆದಿದ್ದ.

ಗಜೇಂದ್ರ ಇದ್ದ ಜಾಗದಲ್ಲಿ ರಕ್ತ ಮಡುಗಟ್ಟಿತ್ತು. ಅಲ್ಲೆ ಪಕ್ಕದಲ್ಲಿ ಒಡೆದ ಬಿಯರ್ ಬಾಟಲ್ ಒಂದು ರಕ್ತಮಯವಾಗಿತ್ತು. ಇದರಿಂದ ಅನುಮಾನಗೊಂಡ ಚಿಂತಾಮಣಿ ನಗರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ರಂಗಸ್ವಾಮಯ್ಯ, ಹಾಗೂ ಸಹಾಯಕ ಎಸ್ಪಿ ಕುಶಾಲ್ ಚೌಕ್ಸೆ ಪರಿಶೀಲನೆ ನಡೆಸಿ ಇದೊಂದು ಕೊಲೆನಾ ಅಥವಾ ಕುಡಿದ ಅಮಲಿನಲ್ಲಿ ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡನಾ ಎಂದು ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಈಶ್ವರಪ್ಪ ಕೊಲೆಗೆ ಸಂಚು ರೂಪಿಸಿದ್ದ ಪಿಎಫ್​ಐ: ಜಯೇಶ್​ ಪೂಜಾರಿ ಅಲಿಯಾಸ್​ ಶಾಹಿರ್​ನಿಂದ ಸ್ಫೋಟಕ ಮಾಹಿತಿ

ಮತ್ತೊಂದೆಡೆ ಮೃತ ಯುವಕ ಗಜೇಂದ್ರನ ಬಗ್ಗೆ ಅವರ ಸಂಬಂಧಿಕರನ್ನು ಕೇಳಿದ್ರೆ ಒಬ್ಬೊರದೊಂದು ಉತ್ತರ ನೀಡುತ್ತಿದ್ದು, ಗಜೇಂದ್ರ ಅವಿವಾಹಿತನಾಗಿದ್ದ, ಅಲ್ಲಿ ಇಲ್ಲಿ ಹಮಾಲಿ ಕೆಲಸ ಮಾಡಿ ತಿರುಗಾಡಿಕೊಂಡಿರೋದು ಈತನ ಕಾಯಕ, ಯಾವಾಗಲೂ ಕುಡಿದು ತೂರಾಡುತ್ತಿದ್ದ. ಇದರಿಂದ ಅಯ್ಯಪ್ಪ ಮಾಲೆಹಾಕಿಸಿ ಕುಡಿತದ ಚಟ ಬಿಡಿಸಲು ಮುಂದಾಗಿದ್ದೆವು, ಏಪ್ರಿಲ್ 10 ರಾತ್ರಿ 2 ಗಂಟೆಗೆ ಮನೆಯಿಂದ ಹೋದವನು ವಾಪಸ್ ಬಂದಿಲ್ಲ ಎಂದಿದ್ದಾರೆ. ಮಧ್ಯವ್ಯಸನಿಯಾಗಿದ್ದ ಗಜೇಂದ್ರ ಅಯ್ಯಪ್ಪ ಮಾಲೆ ಹಾಕಿದ್ರೆ ಮಧ್ಯ ಕುಡಿಯುತ್ತಿರಲಿಲ್ಲ. ಹಾಗೂ ಕುಡಿಯಬೇಕೆನಿಸಿದ್ರೆ ಮಾಲೆ ತೊರೆದು ಕಂಠಪೂರ್ತಿ ಕುಡಿಯುತ್ತಿದ್ದ. ಆಗಾಗ ತನ್ನ ಸಹೋದರ ಹಾಗೂ ತಾಯಿ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದನಂತೆ.. ಏಪ್ರಿಲ್ 9 ರ ರಾತ್ರಿಯೂ ಹಣಕ್ಕಾಗಿ ತಾಯಿ ಹಾಗೂ ಸಹೋದರನ ಬಳಿ ಪೀಡಿಸಿ ಗಲಾಟೆ ಮಾಡಿದ್ದಾನೆ. ನಂತರ ತಾನು ಮನೆಬಿಟ್ಟು ಅಯ್ಯಪ್ಪ ಸ್ವಾಮಿಗೆ ಹೋಗುವುದಾಗಿ ತಿಳಿಸಿದ್ದನಂತೆ.

ಕುಡಿಯಲೆಂದೇ ಮಾಲೆ ತೆಗೆದು ಹೋಗಿದ್ದನಾ?

ಹೌದು ಕುಡಿಯಲೆಂದೇ ಮಾಲೆ ತೆಗೆದು ಹೋಗಿದ್ದನಾ. ಇಲ್ಲ ಮನೆಯಲ್ಲಿ ಗಲಾಟೆ ಮಾಡುವ ವೇಳೆ ಹೆಚ್ಚು ಕಡಿಮೆ ಏನಾದರೂ ಆಗಿದ್ಯಾ? ಅಥವಾ ಕುಡಿಯಲು ಬಾರ್ ಬಳಿ ಬಂದಾಗ ಗಲಾಟೆ ಆಗಿ ಕೊಲೆಯತ್ನ ನಡೆದಿದ್ಯಾ? ಹತ್ತಾರು ಅನುಮಾನ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 am, Sat, 15 April 23