ಆ ಯುವ-ನವ ಜೋಡಿಯ ಜೀವನ ಸುಂದರವಾಗಿತ್ತು, ನವೋಲ್ಲಾಸವಿತ್ತು: ಆದರೆ ನೇಣಿಗೆ ಶರಣಾದರು -ಯಾಕೆ

| Updated By: ಸಾಧು ಶ್ರೀನಾಥ್​

Updated on: May 15, 2024 | 12:54 PM

ನವ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆ ಬಳಿಕ ಪತಿ-ಪತ್ನಿ ಆತ್ಮಹತ್ಯೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ಆ ಯುವ-ನವ ಜೋಡಿಯ ಜೀವನ ಸುಂದರವಾಗಿತ್ತು, ನವೋಲ್ಲಾಸವಿತ್ತು: ಆದರೆ ನೇಣಿಗೆ ಶರಣಾದರು -ಯಾಕೆ
ಆ ಯುವನವ ಜೋಡಿಯ ಜೀವನ ಸುಂದರವಾಗಿತ್ತು ನವೋಲ್ಲಾಸವಿತ್ತು, ಆದರೆ ನೇಣಿಗೆ ಶರಣು
Follow us on

ವಿಜಯಪುರ: ಆ ಯುವ ನವ ಜೋಡಿ ಜೀವನ ಸುಂದರವಾಗಿತ್ತು, ನವೋಲ್ಲಾಸದಿಂದ ಇದ್ದರು. ಆದರೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾರೆ. ಅವರ ಪೋಷಕರು ಹಿತೈಷಿಗಳನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದ್ದಾರೆ. ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ಆ ಯುವ ದಂಪತಿ ನೇಣಿಗೆ ಕೊರಳೊಡ್ಡಿದ್ದಾರೆ. ಮನೋಜಕುಮಾರ ಪೋಳ (30) ಮತ್ತು ರಾಖಿ (23) ನೇಣಿಗೆ ಶರಣಾದ ಜೋಡಿ.

ಜಸ್ಟ್​​ ನಾಲ್ಕು ತಿಂಗಳ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಿನ್ನೆ ಮಂಗಳವಾರ ತಡರಾತ್ರಿ ಊಟ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜಕುಮಾರ ಹಾಗೂ ರಾಖಿ ದಂಪತಿ ತಾವಿಬ್ಬರೇ ಮನೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಮನೋಜಕುಮಾರ ಅವರ ತಾಯಿ ಭಾರತಿ ಅವರು ತಮ್ಮ ಮಗಳ ಊರಿಗೆ ಹೋಗಿದ್ದರು. ಇಂದು‌ ಬುಧವಾರ ಬೆಳಿಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!

ನವ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆ ಬಳಿಕ ಪತಿ-ಪತ್ನಿ ಆತ್ಮಹತ್ಯೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Wed, 15 May 24