Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!

Veerapuram Bird Sanctuary: ಜನವರಿಯಿಂದ ಆಗಸ್ಟ್​​ ತಿಂಗಳಿನವರೆಗೂ ಆ ಪ್ರದೇಶದಲ್ಲಿ ಕಣ್ಣುಹಾಯಿಸಿದಷ್ಟೂ ವಿದೇಶಿ ಅತಿಥಿಗಳದ್ದು ಕಲರ್​ಫುಲ್​ ಕಲರವ. ಸಂತಾನೊತ್ಪತ್ತಿಗಾಗಿ ಅಂತಾನೇ ದೂರದ ವಿದೇಶಗಳಿಂದ ಬರುವ ಈ ಅತಿಥಿಗಳು... ಆಗಸ್ಟ್​​ ತಿಂಗಳು ಬರುತ್ತಿದ್ದಂತೆ ಆ ಜಾಗದಿಂದ ಯಾರಿಗೂ ಹೇಳದೆ-ಕೇಳದೆ ಕುಟುಂಬ ಸಮೇತರಾಗಿ ಮಾಯವಾಗಿಬಿಡುತ್ತಾರೆ!

ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!
ಸಂತಾನೊತ್ಪತ್ತಿಗಾಗಿ ವಿದೇಶದಿಂದ ಬಾಗೇಪಲ್ಲಿಗೆ ಬರುವ ವಿಶೇಷ ಅತಿಥಿಗಳು ಇವರು!
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on:May 14, 2024 | 6:23 PM

ಜನವರಿಯಿಂದ ಆಗಸ್ಟ್​​ ತಿಂಗಳಿನವರೆಗೂ ಆ ಪ್ರದೇಶದಲ್ಲಿ ಕಣ್ಣುಹಾಯಿಸಿದಷ್ಟೂ ವಿದೇಶಿ ಅತಿಥಿಗಳದ್ದು ಕಲರ್​ಫುಲ್​ ಕಲರವ. ಸಂತಾನೊತ್ಪತ್ತಿಗಾಗಿ ಅಂತಾನೇ ದೂರದ ವಿದೇಶಗಳಿಂದ ಬರುವ ಈ ಅತಿಥಿಗಳು…(Bird migration and honeymoon) ಆಗಸ್ಟ್​​ ತಿಂಗಳು ಬರುತ್ತಿದ್ದಂತೆ ಆ ಜಾಗದಿಂದ ಯಾರಿಗೂ ಹೇಳದೆ-ಕೇಳದೆ ಕುಟುಂಬ ಸಮೇತರಾಗಿ ಮಾಯವಾಗಿಬಿಡುತ್ತಾರೆ! ಅವರು ಅಲ್ಲಿ ಇರುವವರೆಗೂ ಆ ಗ್ರಾಮದ ಜನ ಅವರಿಗೆ ವಿಶೇಷ ಆಶ್ರಯ ರಕ್ಷಣೆ ನೀಡಿ ಸಂತೋಷದಿಂದ ಬೀಳ್ಕೊಡುತ್ತಾರೆ. ಅಷ್ಟಕ್ಕೂ ಆ ವಿಶೇಷ ಅತಿಥಿಗಳು ಯಾರು ಅಂತೀರಾ? ಈ ಸ್ಟೋರಿ ನೋಡಿ…!

ಇದು ಆಂದ್ರ ಕರ್ನಾಟಕ ಗಡಿನಾಡು ವೀರಾಪುರ ಗ್ರಾಮ. ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಿಂದ ಕೇವಲ 10 ಕಿಲೋ ಮೀಟರ್ ದೂರವಿರುವ ಈ ಗ್ರಾಮಕ್ಕೆ (veerapuram bagepalli) ವಿದೇಶಿ ಮೂಲದ ಸೈಬೇರಿಯನ್ ಪಕ್ಷಿಗಳು ಅನ್ನೊ ವಿಶೇಷ ಅತಿಥಿಗಳು ಬರುತ್ತವೆ. ವಿದೇಶಗಳಿಂದ ಬರುವ ಪಕ್ಷಿಗಳು ಸಾಮಾನ್ಯವಾಗಿ ಇಲ್ಲಿಗೆ ಬಂದ ಮೇಲೆ, ಇಲ್ಲಿಯ ಗಿಡ ಮರಗಳ ಮೇಲೆ ಮೊಟ್ಟೆಯನ್ನು ಇಡುತ್ತವೆ. ಆ ಮೇಲೆ  ಮರಿಗಳನ್ನು ಮಾಡಿಕೊಂಡು ಅವು ಚೆನ್ನಾಗಿ ಹಾರಾಡುವಂತೆ ಆದ ಮೇಲೆ ತಮ್ಮ ಸಂತಾನೊತ್ಪತ್ತಿಗಳ ಜೊತೆ ಆಗಸ್ಟ್ ತಿಂಗಳಲ್ಲಿ ಇಲ್ಲಿಂದ ತವರೂರು ಕಡೆ ಹೊರಡುತ್ತವೆ. ಸಂತಾನೊತ್ಪತ್ತಿಗೆಂದೇ ಸೈಬೇರಿಯನ್ ಪಕ್ಷಿಗಳು ಇಲ್ಲಿಗೆ ಬರುತ್ತಿವೆ ಎನ್ನುತ್ತಾರೆ ಡಾ. ಜ್ಞಾನೇಶ, ಉಪ ನಿರ್ದೇಶಕರು ಪಶುಸಂಗೋಪನೆ ಇಲಾಖೆ.

ಹೀಗೆ ಬಂದು ಹಾಗೆ ಹೋಗುವ ಈ ವಿದೇಶಿ ಪಕ್ಷಿಗಳಲ್ಲಿ- ಪೇಂಟೆಡ್ ಸ್ಟಾಕ್ಸರ್, ಗೆಹರನ್, ವ್ಹೈಟಾವಿಸ್, ಬ್ಲಾಕಾವಿಸ್, ಪಾಂಡ್ ಹೆರಾನ್, ಪೆಲಕಿನ್, ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೇರಿವೆ. ಸೈಬೇರಿಯಾ, ನೈಜಿರಿಯಾ, ದಕ್ಷಿಣ ಆಫ್ರಿಕಾದಿಂದ ವಿವಿಧ ತಳಿಯ ಪಕ್ಷಿಗಳು ಇಲ್ಲಿಗೆ ಬಂದು ಹನಿಮೂನ್ ಮಾಡಿಕೊಳ್ಳುತ್ತವೆ. ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿದ ನಂತರ ಆಗಸ್ಟ್​​ ತಿಂಗಳಲ್ಲಿ ವಾಪಸ್ಸು ತವರಿನ ಕಡೆ ಮುಖ ಮಾಡುತ್ತವೆ. ಆದ್ರೆ ಸಂತಾನೋತ್ಪತ್ತಿಗೆ ಬಂದ ಪಕ್ಷಿಗಳಿಗೆ ಗ್ರಾಮಸ್ಥರು ಯಾವುದೆ ತೊಂದರೆ ಮಾಡದೆ ಅವುಗಳ ರಕ್ಷಣೆಗೆ ಮುಂದಾಗುತ್ತಾರೆ ಡಾ. ರಮೇಶ, ಸಹಾಯಕ ಉಪ ನಿರ್ದೇಶಕರು, ಪಶು ಸಂಗೊಪನೆ ಇಲಾಖೆ.

Also Read: PF Bonus Scheme- 20 ವರ್ಷಕ್ಕಿಂತ ಹೆಚ್ಚು ಕಾಲ ಭವಿಷ್ಯ ನಿಧಿ ಕಟ್ಟಿದ್ದರೆ ನೀವು ಬೋನಸ್ ಹಣ​ ಪಡೆಯಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಇನ್ನು ವಿದೇಶಿ ಪಕ್ಷಿಗಳ ಅಂದ-ಚೆಂದ, ಒನಪು ವೈಯಾರ, ಹಾರಾಟದ ರೀತಿ-ನೀತಿಯ ಸೊಬಗು ನೋಡಲು ತುಂಬಾ ಸುಂದರವಾಗಿರುತ್ತೆ. ಅದೆ ಕಾರಣಕ್ಕೆ ಇಲ್ಲಿರುವ ಪಕ್ಷಿಗಳನ್ನು ನೋಡಲು ಪ್ರವಾಸಿಗರು ಸಹ ಬರುತ್ತಾರೆ. ಇಂಥ ಗ್ರಾಮವನ್ನು ಅಧಿಕೃತ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ದಿಪಡಿಸಿ, ಪಕ್ಷಿಧಾಮವನ್ನಾಗಿ ಮಾಡಿದ್ರೆ… ಈ ವಿದೇಶಿ ಹಕ್ಕಿಗಳು ಇಲ್ಲಿಯೇ ಶಾಶ್ವತವಾಗಿ ಇರುವಂತೆ ಮಾಡಬಹುದು ಎನ್ನುತ್ತಾರೆ ಸ್ಥಳೀಯರು (World Migratory Bird Day 2024).

ಆದರೆ ಇದಕ್ಕೆ ವಿರುದ್ಧವಾಗಿ ಸ್ಥಳೀಯ ಹಿರಿಯರೊಬ್ಬರು ಹೇಳಿದ ಈ ಮಾತು ಮಾರ್ಮಿಕವಾಗಿದೆ ಎನಿಸುತ್ತದೆ. ಜೊತೆಗೆ, ಅರೆ ಪಕ್ಷಿಗಳ ವಲಸೆ ನೀತಿಯೇ ಅದಾಗಿದೆ ಅಲ್ಲವಾ? ಎನಿಸುತ್ತದೆ. ನೀವು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಸ್ವರ್ಗ ಸಮಾನ ಪ್ರಶಸ್ತ ಜಾಗ ಮಾಡಿಕೊಟ್ಟರೂ ಅವು ನಾ ಒಲ್ಲೆ ಎನ್ನುತ್ತಾ ಪುರ್​ ಅಂತಾ ಹಾರಿಹೋಗುತ್ತವೆ. ಅದೇ ಅದರ ಜಾಯಮಾನ/ ಅದರ ಲಾಜಿಕ್ ಆಗಿದೆ. ಇನ್ನು ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವುದೂ ಅಪಾಯಕಾರಿಯಾಗಿದೆ. ನಮ್ಮ ಜನಕ್ಕೆ ಪ್ರವಾಸದ ಸೆನ್ಸ್​ ಸ್ವಲ್ಪ ಕಡಿಮೆಯೇ. ಸ್ವೇಚ್ಚಾಚಾರಿಯಾದ ಮನುಷ್ಯ ಆ ಪ್ರಾಣಿಪಕ್ಷಿಗಳಿಗೆ ಎಲ್ಲಿ ಅಪಾಯ ತಂದೊಡ್ಡುತ್ತಾನೋ ಎಂಬುದು ನನ್ನ ಆತಂಕವಾಗಿದೆ ಎಂದು ಆ ಹಿರಿಯರು ಹೇಳಿದ ಮಾತಿಗೆ ಏನನ್ನೋಣ!?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Tue, 14 May 24

ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ಹಸುವನ್ನು ಓಡಿಸಿಕೊಂಡು ಬೆಡ್ ರೂಂಗೆ ನುಗ್ಗಿದ ಗೂಳಿ; ವಿಡಿಯೋ ವೈರಲ್
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ದರ್ಶನ್ ತೆರೆಮೇಲೆ ಕಾಣಿಸಿದ ಕೂಡಲೇ ಮೈಮರೆತು ಕುಣಿದಾಡಿದ ಫ್ಯಾನ್ಸ್
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ