ಪಾಕ್ ಪರ ಟ್ವೀಟ್ ಮಾಡಿದ ಹುಂಡೈ; ಇದೊಂದು ದೇಶ ವಿರೋಧಿ ಕಂಪನಿ ಎಂದು ಕಾರಿಗೆ ಸ್ಟಿಕರ್ ಅಂಟಿಸಿ ಯುವಕ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Feb 13, 2022 | 12:29 PM

ವಿಜಯಪುರ ನಗರ ನಿವಾಸಿ ಸಂತೋಷ ಚೌಧರಿ ಎಂಬ ಯುವಕ ವಿಭಿನ್ನವಾದ ರೀತಿಯಲ್ಲಿ ಹುಂಡೈ ಕಂಪನಿ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ. ಹುಂಡೈ ಕಂಪನಿ ದೇಶ ವಿರೋಧಿ ಟ್ವಿಟ್ ಮಾಡಿದೆ. ಆದ ಕಾರಣ ಭಾರತ ದೇಶ ಪ್ರೇಮಿಯಾದ ನಾನು ಹುಂಡೈ ಕಂಪನಿ ವಿರೋಧ ಮಾಡುತ್ತೇನೆ ಎಂದಿದ್ದಾನೆ.

ಪಾಕ್ ಪರ ಟ್ವೀಟ್ ಮಾಡಿದ ಹುಂಡೈ; ಇದೊಂದು ದೇಶ ವಿರೋಧಿ ಕಂಪನಿ ಎಂದು ಕಾರಿಗೆ ಸ್ಟಿಕರ್ ಅಂಟಿಸಿ ಯುವಕ ಪ್ರತಿಭಟನೆ
ಪಾಕ್ ಪರ ಟ್ವೀಟ್ ಮಾಡಿದ ಹುಂಡೈ ಕಂಪನಿ ವಿರುದ್ಧ ಇದೊಂದು ದೇಶ ವಿರೋಧಿ ಕಂಪನಿ ಎಂದು ಸ್ಟಿಕರ್ ಅಂಟಿಸಿ ಯುವಕ ಪ್ರತಿಭಟನೆ
Follow us on

ವಿಜಯಪುರ: ವಿವಿಧ ಬ್ರ್ಯಾಂಡ್ ಕಾರುಗಳ ಉತ್ಪಾದನೆ ಮಾಡುವ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರೋ ಹುಂಡೈ ಕಂಪನಿಯು ಪಾಕ್ ಪರ ಟ್ವೀಟ್ ಮಾಡಿದ ಹಿನ್ನೆಲೆ ಹುಂಡೈ ಕಂಪನಿ ವಿರುದ್ಧ ಗ್ರಾಹಕನೋರ್ವ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಹುಂಡೈ ಕಂಪನಿ ಟ್ವಿಟ್ ಮಾಡಿದೆ ಎಂದು ಆರೋಪಿಸಿ ಕಂಪನಿ ವಿರುದ್ದ ವಿಜಯಪುರ ನಗರದ ಯುವಕನೋರ್ವ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

ವಿಜಯಪುರ ನಗರ ನಿವಾಸಿ ಸಂತೋಷ ಚೌಧರಿ ಎಂಬ ಯುವಕ ವಿಭಿನ್ನವಾದ ರೀತಿಯಲ್ಲಿ ಹುಂಡೈ ಕಂಪನಿ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ. ಹುಂಡೈ ಕಂಪನಿ ದೇಶ ವಿರೋಧಿ ಟ್ವಿಟ್ ಮಾಡಿದೆ. ಆದ ಕಾರಣ ಭಾರತ ದೇಶ ಪ್ರೇಮಿಯಾದ ನಾನು ಹುಂಡೈ ಕಂಪನಿ ವಿರೋಧ ಮಾಡುತ್ತೇನೆ ಎಂದಿದ್ದಾನೆ. ಹುಂಡ್ರೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗುತ್ತಿದೆ ಎಂದು ಕಾರ್‌ಗೆ ಬೋರ್ಡ್ ಹಾಕಿ ಆಕ್ರೋಶವನ್ನು ಹೊರ ಹಾಕಿದ್ದಾನೆ. ಕಾರಿನಲ್ಲಿ ಇರುವ ಹುಂಡೈ ಹೆಸರಿನ ಸ್ಟೀಕರ್ ಗಳಿಗೆ ಕಪ್ಪು ಪಟ್ಟಿ ಅಂಟಿಸಿ ಈ ಕಾರ್ ಓಡಿಸಲು ನನಗೆ ನಾಚಿಕೆ ಆಗುತ್ತಿದೆ. ಇದೊಂದು ದೇಶ ವಿರೋಧಿ ಕಂಪನಿ #ಜೈಹಿಂದ್ ಎಂದು ಸ್ಟಿಕ್ಕರ್ ಅಂಟಿಸಿದ್ದಾನೆ. I AM ASHAMED TO DRIVE THIS CAR WHICH IS AN ANTI-NATIONAL COMPANY #JAI HIND ಎಂದು ಬರೆದ ಸ್ಟಿಕರನ್ನು ಕಾರಿಗೆ ಅಂಟಿಸಿದ್ದಾನೆ. ಅವಶ್ಯಕತೆ ಬಂದರೆ ಯಾವುದೇ ಹಣ ಪಡೆಯದೇ ಹುಂಡೈ ಕಾರನ್ನು ಉಚಿತವಾಗಿಯೇ ಕಂಪನಿಗೆ ವಾಪಸ್ ನೀಡೋದಾಗಿಯೂ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸಾವಿರ ಲೆಕ್ಕದಲ್ಲಿ ಹುಂಡೈ ಕಾರು ಮಾರಾಟವಾಗಿದ್ದರೆ, ಭಾರತದಲ್ಲಿ ಇದೇ ಹುಂಡೈ ಕಂಪನಿ ಕಾರುಗಳು ಲಕ್ಷಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿದೆ. ಇಷ್ಟರ ಮಧ್ಯೆ ಹುಂಡೈ ಕಂಪನಿ ಜಮ್ಮು ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದು ಸರಿಯಲ್ಲಾ ಎಂದು ಇಂಥ ಭಾರತ ದೇಶ ವಿರೋಧಿ ಕಂಪನಿಗಳ ವಿರುದ್ಧ ವಿಜಯಪುರ ನಗರದ ಯುವಕ ಸಂತೋಷ ಗುಡುಗಿದ್ದಾನೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇದನ್ನೂ ಓದಿ: ಕಾಶ್ಮೀರ ಬಗ್ಗೆ ಪೋಸ್ಟ್: ಹುಂಡೈ ಬೆನ್ನಲ್ಲೇ ಕೆಎಫ್‌ಸಿ, ಪಿಜ್ಜಾ ಹಟ್ ವಿರುದ್ಧ ಸಿಡಿದೆದ್ದ ನೆಟ್ಟಿಗರು

Published On - 12:26 pm, Sun, 13 February 22