ನನ್ನ ಹೆಸರಲ್ಲಿ ಸಿನಿಮಾ ಮಾಡ್ತಿರೋದೇಕೆ?: ‘ಕಾಲಾಪತ್ಥರ್’ ಟೈಟಲ್ ವಿರುದ್ಧ ಮಾಜಿ ರೌಡಿಶೀಟರ್ ಗರಂ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2021 | 7:30 PM

ನನ್ನ ಹೆಸರು ಬಳಸಿಕೊಂಡು ಸಿನಿಮಾ ಮಾಡುತ್ತಿರುವುದು ತಪ್ಪು. ಟೈಟಲ್ ಹಿಂಪಡೆಯಲು ಫಿಲಂ ಚೇಂಬರ್​ಗೆ ಮನವಿ ಮಾಡುತ್ತೇನೆ ಎಂದು ಕಾಲಾಪತ್ಥರ್ ಹೇಳಿದ್ದಾರೆ. 

ನನ್ನ ಹೆಸರಲ್ಲಿ ಸಿನಿಮಾ ಮಾಡ್ತಿರೋದೇಕೆ?: ‘ಕಾಲಾಪತ್ಥರ್’ ಟೈಟಲ್ ವಿರುದ್ಧ ಮಾಜಿ ರೌಡಿಶೀಟರ್ ಗರಂ
ವಿಕ್ಕಿ ವರುಣ್ ನಟನೆಯ ಕಾಲಾಪತ್ಥರ್ ಪೋಸ್ಟರ್
Follow us on

ಬೆಂಗಳೂರು: ನಟ ವಿಕ್ಕಿ ಅಭಿನಯದ ಹೊಸ ಸಿನಿಮಾ ‘ಕಾಲಾಪತ್ಥರ್’ ವಿರುದ್ಧ ಅದೇ ಹೆಸರಿನ ಮಾಜಿ ರೌಡಿಶೀಟರ್ ಕಾಲಾಪತ್ಥರ್ ಸಿಟ್ಟಾಗಿದ್ದಾರೆ. ಬೆಳಗ್ಗೆಯಷ್ಟೇ ನಟ ವಿಕ್ಕಿ ಕಾಲಾಪತ್ಥರ್ ಸಿನಿಮಾದ ಟೈಟಲ್ ಪ್ರಕಟಿಸಿದ್ದರು. ಸಿನಿಮಾ ಹೆಸರು ಹಾಗೂ ಮಾಜಿ ರೌಡಿ ಶೀಟರ್​ ಎರಡೂ ಹೆಸರು ಒಂದೇ ಇದೆ. ಇದಕ್ಕಾಗಿ ಕಾಲಾಪತ್ಥರ್ ಅಸಮಾಧಾನ ಹೊರ ಹಾಕಿದ್ದಾರೆ.

ನನ್ನ ಹೆಸರು ಬಳಸಿಕೊಂಡು ಸಿನಿಮಾ ಮಾಡುತ್ತಿರುವುದು ತಪ್ಪು. ಟೈಟಲ್ ಹಿಂಪಡೆಯಲು ಫಿಲಂ ಚೇಂಬರ್​ಗೆ ಮನವಿ ಮಾಡುತ್ತೇನೆ ಎಂದು ಕಾಲಾಪತ್ಥರ್ ಹೇಳಿದ್ದಾರೆ.

ವಿಕ್ಕಿ ಈ ಮೊದಲು ಕೆಂಡ ಸಂಪಿಗೆ ಹಾಗೂ ಕಾಲೇಜ್​ ಕುಮಾರ ಚಿತ್ರದಲ್ಲಿ ನಟಿಸಿದ್ದರು.

ಪೆರೋಲ್ ಮೇಲೆ ಹೊರಬಂದ ರೌಡಿ ಶೀಟರ್​ ದರ್ಬಾರ್​ ಕಂಡು ಪೊಲೀಸರೇ ಕಂಗಾಲು!