ಜಮೀನು ಪಡೆದ ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಶೇ 40 ಪಾಲು: ಮುಖ್ಯಮಂತ್ರಿ BSY ಹೇಳಿಕೆ
ಬಡಾವಣೆ ನಿರ್ಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಬದಲಾಗಿ ಅಭಿವೃದ್ಧಿ ಪಡಿಸಿದ ನಿವೇಶನಗಳಲ್ಲಿ ಶೇ.40 ರಷ್ಟು ಕೊಡಬೇಕು. ಇದಕ್ಕಾಗಿ, ಸರ್ಕಾರದಿಂದ ಅನುಮೋದನೆ ಬೇಕು. ನಮ್ಮ ಮುಖ್ಯ ಕಾರ್ಯದರ್ಶಿಗಳು ಈ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರು: ಬಡಾವಣೆ ನಿರ್ಮಾಣಕ್ಕೆ ರೈತರಿಂದ ಜಮೀನು ಪಡೆದರೆ, ಅದಕ್ಕೆ ಬದಲಾಗಿ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ಶೇ 40ರಷ್ಟು ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇನ್ನುಮುಂದೆ 2 ತಿಂಗಳಿಗೊಮ್ಮೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಭೆ ಮಾಡಲಿದ್ದೇವೆ. ರೈತರು ಬಿಡಿಎ ಕಚೇರಿಗೆ ಅಲೆಯುವ ಪರಿಸ್ಥಿತಿ ಇರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಬಡಾವಣೆ ನಿರ್ಮಾಣಕ್ಕೆ ರೈತರಿಂದ ಪಡೆದ ಜಮೀನಿಗೆ ಬದಲಾಗಿ ಅಭಿವೃದ್ಧಿ ಪಡಿಸಿದ ನಿವೇಶನಗಳಲ್ಲಿ ಶೇ.40 ರಷ್ಟು ಕೊಡಬೇಕು. ಇದಕ್ಕಾಗಿ, ಸರ್ಕಾರದಿಂದ ಅನುಮೋದನೆ ಬೇಕು. ನಮ್ಮ ಮುಖ್ಯ ಕಾರ್ಯದರ್ಶಿಗಳು ಈ ವ್ಯವಸ್ಥೆ ಮಾಡಿಕೊಡಲಿದ್ದಾರೆ. ರೈತರು ಬಿಡಿಎ ಕಚೇರಿಗೆ ಅಲೆಯುವುದಕ್ಕೆ ಆಸ್ಪದ ಕೊಡುವುದಿಲ್ಲ. ಬಿಡಿಎನಲ್ಲಿ ಸರಿಯಾಗಿ ಇರುವವರನ್ನು ಮಾತ್ರ ಉಳಿಸಿಕೊಂಡು, ಬೇರೆಯವರನ್ನು ಕೈ ಬಿಡುತ್ತೇವೆ. ಅನಗತ್ಯವಾಗಿ ಇರುವವರನ್ನು ವಾಪಸ್ ಕಳುಹಿಸುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಸೂಚಿಸಿದ್ದಾರೆ.
PRR ರಸ್ತೆ ಮಾಡೋದಕ್ಕೆ Maz ಕಂಪನಿ ಮುಂದೆ ಬಂದಿದೆ. 21 ಸಾವಿರ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಚರ್ಚಿಸಿದ್ದೇವೆ. ಸಾವಿರಾರು ಫ್ಲಾಟ್ಗಳನ್ನು ಮಾರಾಟ ಮಾಡಲು ನಿರಂತರವಾಗಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ವಿಶ್ವನಾಥ್, ಬಿಡಿಎ ಅಧ್ಯಕ್ಷರಾಗಿ ಬಂದ ಬಳಿಕ ಅಭಿವೃದ್ಧಿ ಆಗುತ್ತಿದೆ ಎಂದು ಯಡಿಯೂರಪ್ಪ ವಿವರಣೆ ನೀಡಿದ್ದಾರೆ.
ಪಾರ್ಕಿಂಗ್ ಸೌಕರ್ಯವಿದ್ದರೆ ಮಾತ್ರ ವಾಹನ ಖರೀದಿಗೆ ಅನುಮತಿ: ಬಿಡಿಎ ಚಿಂತನೆ
Published On - 7:02 pm, Mon, 18 January 21