ಹಾಸನ: ಹಾಸನ ಜಿಲ್ಲೆ ಹೊಂಗೆರೆಯಲ್ಲಿ ಮಂಗನಿಗೂ ತಿಥಿ ಕಾರ್ಯ ನೆರವೇರಿಸಿದ ಪ್ರಸಂಗ ನಡೆದಿದೆ. ಕಳೆದ ಅಕ್ಟೋಬರ್ 14 ರಂದು ಗ್ರಾಮದಲ್ಲಿದ್ದ ಮಂಗ ಮೃತಪಟ್ಟಿತ್ತು. ಅಂದು ಸ್ಥಳೀಯರು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಿದ್ದರು. ಮೃತಪಟ್ಟ ಮಂಗ ಊರ ಜನರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟಿಕೊಂಡಿತ್ತು. ಆ ಆತ್ಮೀಯ ಬಾಂಧವ್ಯದಿಂದಲೇ ಇಂದು ಮಂಗನ 11 ನೇ ದಿನದ ತಿಥಿ ಕಾರ್ಯವನ್ನು ಜನರು ನೆರವೇರಿಸಿದ್ದಾರೆ.
ಊರಿನ ಜನರೊಂದಿಗೆ ಹೊಂಗೆರೆ, ಹೂವಿನಹಳ್ಳಿ, ಹಲಸಿನಹಳ್ಳಿ, ದಡದಹಳ್ಳಿ , ಬಂಡಿಹಳ್ಳಿ ಸುತ್ತಮುತ್ತಲ ಗ್ರಾಮದ ಜನರು ತಿಥಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯರಿಗೆ ಕಾರ್ಯ ನೆರವೇರಿಸುವಂತೆ ಎಡೆಇಟ್ಟು ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಗಿದೆ.
Published On - 1:08 pm, Sat, 26 October 19