ಶಾಲೆಯ ಎಲ್ಲಾ ಶಿಕ್ಷಕರು ಗೈರು, ಬೀಗ ಹಾಕಿ ಪ್ರತಿಭಟನೆಗೆ ನಿಂತ ಗ್ರಾಮಸ್ಥರು

|

Updated on: Dec 11, 2019 | 2:00 PM

ವಿಜಯಪುರ: ಶಾಲೆಗೆ ಶಿಕ್ಷಕರು ನಿರಂತರ ಗೈರು ಆಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯ ನೆಪದಲ್ಲಿ ಬಹಳ ದಿನಗಳಿಂದ ಗೈರಾಗುತ್ತಿರುವ ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದ ಶಾಲೆಯಲ್ಲಿ ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂರು ಜನ ಖಾಯಂ, ಓರ್ವ ಹೆಚ್ಚುವರಿ ಶಿಕ್ಷಕ ಶಾಲೆಯಲ್ಲಿ ಕಾರ್ಯ ನಿರ್ವಹಣೆಗೆಂದು ನಿಯೋಜಿಸಲಾಗಿದೆ. ಆದರೆ ಕಳೆದ ಒಂದು ವಾರದಿಂದ ಶಾಲೆಯ ಮುಖ್ಯ ಶಿಕ್ಷಕರೊಬ್ಬರಿಂದಲೇ […]

ಶಾಲೆಯ ಎಲ್ಲಾ ಶಿಕ್ಷಕರು ಗೈರು, ಬೀಗ ಹಾಕಿ ಪ್ರತಿಭಟನೆಗೆ ನಿಂತ ಗ್ರಾಮಸ್ಥರು
Follow us on

ವಿಜಯಪುರ: ಶಾಲೆಗೆ ಶಿಕ್ಷಕರು ನಿರಂತರ ಗೈರು ಆಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ನಡೆದಿದೆ.

ಅನಾರೋಗ್ಯ ನೆಪದಲ್ಲಿ ಬಹಳ ದಿನಗಳಿಂದ ಗೈರಾಗುತ್ತಿರುವ ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದ ಶಾಲೆಯಲ್ಲಿ ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂರು ಜನ ಖಾಯಂ, ಓರ್ವ ಹೆಚ್ಚುವರಿ ಶಿಕ್ಷಕ ಶಾಲೆಯಲ್ಲಿ ಕಾರ್ಯ ನಿರ್ವಹಣೆಗೆಂದು ನಿಯೋಜಿಸಲಾಗಿದೆ.

ಆದರೆ ಕಳೆದ ಒಂದು ವಾರದಿಂದ ಶಾಲೆಯ ಮುಖ್ಯ ಶಿಕ್ಷಕರೊಬ್ಬರಿಂದಲೇ 90 ವಿದ್ಯಾರ್ಥಿಗಳಿಗೆ ಪಾಠ ನಡೆಸಲಾಗುತ್ತಿದೆ. ನಿನ್ನೆ ಮುಖ್ಯ ಶಿಕ್ಷಕ ಸೇರಿ ಎಲ್ಲ ಶಿಕ್ಷಕರು ಗೈರಾಗಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

Published On - 1:57 pm, Wed, 11 December 19