ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಮಗಳ ಮದುವೆ ವ್ಯಾಲೆಂಟೈನ್ ಡೇಗೆ ಆಗಲಿ ಎಂದು ಈ ಹಿಂದೆ ತಮಾಷೆ ಮಾಡಿದ್ದೆ. ಈಗ ನೋಡಿದ್ರೇ, ಅದೇ ವ್ಯಾಲೆಂಟೈನ್ ಡೇ ದಿನದಂದು ಮದುವೆ ನಿಗದಿಯಾಗಿದೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿ ಪ್ರತಿಕ್ರಿಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪುತ್ರಿಯ ವಿವಾಹದ ಆಮಂತ್ರಣ ಪತ್ರವನ್ನು ನೀಡಲು ಬಂದ ವೇಳೆ ವಿನಯ್ ಗುರೂಜಿ ಮಾತನಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳ ಮದುವೆಗೆ ಕರೆಯಲು ಬಂದಿದ್ದರು. ನನಗೆ ಎರಡು ಕುಟುಂಬದ ಜೊತೆ ನಿಕಟ ಸಂಪರ್ಕವಿದೆ. ಅವರ ಮದುವೆ ಆಶ್ರಮದ ಮದುವೆ ಇದ್ದಂತೆ. ಇಬ್ರು ಮಕ್ಕಳಲ್ಲೂ ಒಂದೇ ಥಿಂಕಿಂಗ್ ಇದೆ. ಭವಿಷ್ಯದಲ್ಲಿ ಅವರಿಬ್ಬರು ತುಂಬಾ ಚೆನ್ನಾಗಿ ಇರ್ತಾರೆ ಎಂದು ವಿನಯ್ ಗುರೂಜಿ ಹೇಳಿದರು.
ಸಿದ್ದಾರ್ಥ್ ಅವರು ಎಲ್ಲೇ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅವರು ಮಕ್ಕಳ ಮದುವೆ ಕಂಡು ಅಲ್ಲಿಂದಲೇ ಖುಷಿ ಪಡುತ್ತಾರೆ ಎಂದು ಸಹ ಹೇಳಿದರು.
ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಡಿ.ಕೆ.ಶಿವಕುಮಾರ್
ಇದಕ್ಕೂ ಮುನ್ನ, ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದರು. ಜೊತೆಗೆ, ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಯಿಟ್ಟು ಪೂಜೆ ಸಹ ಮಾಡಿಸಿದರು.
ದೇವರ ಎದುರು ಆಮಂತ್ರಣ ಪತ್ರಿಕೆಯಿಟ್ಟು ಪೂಜೆ ಮಾಡಿಸಿದ ಬಳಿಕ ಡಿಕೆಶಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ, ಡಿ.ಕೆ.ಶಿವಕುಮಾರ್ಗೆ ಶಾಸಕ ಟಿ.ಡಿ.ರಾಜೇಗೌಡ ಸಾಥ್ ಕೊಟ್ಟರು.
60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ
Published On - 5:17 pm, Tue, 26 January 21