ತುಮಕೂರು: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದೆ. ಮತಗಟ್ಟೆಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಮತದಾನ ಮಾಡಿದ್ದಾರೆ.
ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಗಂಗಾ ಮಠದಲ್ಲಿರುವ ಮತಗಟ್ಟೆ ಸಂಖ್ಯೆ 139ರಲ್ಲಿ ಶ್ರೀಗಳು ಮತದಾನ ಮಾಡಿದ್ದಾರೆ. ತುಮಕೂರು ಜಿಲ್ಲೆಯ 5 ತಾಲೂಕುಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು ತುಮಕೂರು, ಕುಣಿಗಲ್, ಕೊರಟಗೆರೆ, ಪಾವಗಡ ತಾಲೂಕುಗಳ ಒಟ್ಟು 168 ಗ್ರಾ.ಪಂ.ಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತೆ.
ಮತಗಟ್ಟೆಗೆ ಪೂಜೆ ಮಾಡಲು ಬಂದಿದ್ದ ಅಭ್ಯರ್ಥಿಗಳು ವಾಪಸ್
ಇನ್ನು ಮೈಸೂರಿನ ಹುಣಸೂರು ತಾಲೂಕಿನ ಮನುಗನಹಳ್ಳಿ ಮತಗಟ್ಟೆ ಬಳಿ ಅಭ್ಯರ್ಥಿಗಳು ಪೂಜೆ ಸಾಮಗ್ರಿಗಳೊಂದಿಗೆ ಆಗಮಿಸಿದ್ದು ಪೂಜೆ ಸಾಮಗ್ರಿ ತಂದವರನ್ನು ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ. ಪೂಜೆಯನ್ನು ದೇವಾಲಯಗಳಲ್ಲಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಕಳಿಸಿದ್ದಾರೆ.
ರಾಜ್ಯಾದ್ಯಂತ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದ್ದು ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಹಾಕುತ್ತಿದ್ದಾರೆ. ಈ ಮತದಾನದ ಫಲಿತಾಂಶ ಡಿ.30ಕ್ಕೆ ಹೊರ ಬೀಳಲಿದೆ.
ಕೈ ಕಾರ್ಯಕರ್ತನ ಮನೆಯಲ್ಲಿ ಹಂಚಲು ತಂದಿಟ್ಟಿದ್ದ 120 ಕುಕ್ಕರ್ ಜಪ್ತಿ.. ಎಲ್ಲಿ?
Published On - 7:36 am, Tue, 22 December 20