ರಾಜ್ಯದಲ್ಲಿ ಇಂದು ಮೊದಲ ಹಂತದ ಲೋಕಲ್ ಫೈಟ್! ನಿರ್ಧಾರವಾಗಲಿದೆ 1,17,383 ಅಭ್ಯರ್ಥಿಗಳ ಹಣೆಬರಹ
ಮೊದಲ ಹಂತದ ಲೋಕಲ್ ಫೈಟ್‌ಗೆ ಕರುನಾಡು ಸಜ್ಜಾಗಿದೆ. ಪಕ್ಷ ಮತ್ತು ಚಿಹ್ನೆ ಹಂಗಿಲ್ಲದಿದ್ರೂ ಗ್ರಾಮಪಂಚಾಯತಿ ಚುನಾವಣೆ ಕೈ, ಕಮಲ ಮತ್ತು ದಳಕ್ಕೆ ಪ್ರತಿಷ್ಠೆ ಕಣವಾಗಿದೆ. (ಡಿ.22) ಇಂದು ಮೊದಲ ಹಂತದಲ್ಲಿ ಅಖಾಡದಲ್ಲಿ ಅಭ್ಯರ್ಥಿಗಳು ಸೋಲು ಗೆಲುವಿನ ಭವಿಷ್ಯ ನಿರ್ಧಾರವಾಗಲಿದೆ.
ಬೆಂಗಳೂರು: ಕೊರೊನಾ ನಡುವೆ ಕರುನಾಡು ಲೋಕಲ್ ಫೈಟ್‌ಗೆ ಸಿದ್ಧವಾಗಿದೆ. ರಾಜ್ಯದ ಅತಿ ದೊಡ್ಡ ಚುನಾವಣೆ ಅಂತಲೇ ಕರೆಸಿಕೊಳ್ಳುವ ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂದು 117 ತಾಲೂಕುಗಳಲ್ಲಿ ಮತದಾನ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲವಾದ್ರೂ, ಅಧಿಕಾರದಲ್ಲಿರೋ ಬಿಜೆಪಿಗೆ ಇದು ಪ್ರತಿಷ್ಠೆಯ ಸಮರವಾಗಿದೆ ಜತೆಗೆ, ಕ್ಷೇತ್ರದ ಶಾಸಕರಿಗೆ ಹಾಗೂ ಆಯಾ ಪಕ್ಷದ ಸ್ಥಳೀಯ ಮುಖಂಡರಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
ಒಟ್ಟು 1,17,383 ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಇಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಕೊರೊನಾ ಇರೋದ್ರಿಂದ ರಾಜ್ಯ ಚುನಾವಣೆ ಆಯೋಗ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಕೊವಿಡ್ ಪಾಸಿಟಿವ್ ಇರೋರಿಗೆ ಕೊನೆಯ ಒಂದು ಗಂಟೆಯಲ್ಲಿ ಮತದಾನದ ಅವಕಾಶ ಕಲ್ಪಿಸಲಾಗಿದೆ.
ಇಂದು 3,019 ಗ್ರಾ.ಪಂಚಾಯಿತಿಗಳಿಗೆ ಚುನಾವಣೆ ಇಂದು ಒಟ್ಟು 3,019 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದ್ದು, 48,048 ಸ್ಥಾನಗಳಿಗೆ ಹಣಾಹಣಿ ನಡೆಯಲಿದೆ. ಈ ಪೈಕಿ 24 ಗ್ರಾಮ ಪಂಚಾಯತಿಗಳಲ್ಲಿ ನಾನಾ ಕಾರಣದಿಂದ ಚುನಾವಣೆ ಬಹಿಷ್ಕಾರ ಮಾಡಿದ್ರೆ, 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 23,706 ಮತಕೇಂದ್ರಗಳಲ್ಲಿ 1,17,383 ಅಭ್ಯರ್ಥಿಗಳ ಹಣೆಬರಹ ಇಂದು ತೀರ್ಮಾನ ಆಗಲಿದೆ.
ಬಿಗಿ ಭದ್ರತೆಯಲ್ಲಿ ನಡೆಯಲಿದೆ ಪಂಚಾಯಿತಿ ಫೈಟ್! ಇನ್ನು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂತೆ ಎಚ್ಚರಿಕೆ ವಹಿಸಲಾಗಿದೆ. ಶಾಂತಿಯುತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಇವತ್ತು ಮೊದಲ ಹಂತದ ಮತದಾನ ನಡೆದ್ರೆ ಈ ತಿಂಗಳ 27 ರಂದು ಎರಡನೇ ಹಂತದ ಮತದಾನ ನಡೆಯಲಿದೆ. 30 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಒಟ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ವೀಲಿನದ ಮಾತು ಕೇಳಿ ಬಂದಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಈ ಲೋಕಲ್ ಫೈಟ್‌ನಲ್ಲಿ ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.
Published On - 6:30 am, Tue, 22 December 20