ತಾರಕಕ್ಕೇರಿದ ಲಂಚ ಆರೋಪ ಪ್ರಕರಣ: ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ ವಿರುದ್ಧ ಜೆಡಿಎಸ್ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದೆ. ಡಿಸಿ ಪಿಎ ಹೆಸರಿನಲ್ಲಿ ನಡೆದ ವಾಟ್ಸಾಪ್ ಚಾಟ್‌ಗಳಲ್ಲಿ ಲಂಚ ವಸೂಲಿ ಮತ್ತು 75 ಲಕ್ಷ ರೂ. ಡೀಲ್ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆಗೆ ಜೆಡಿಎಸ್ ಆಗ್ರಹಿಸಿದೆ. ಡಿಸಿ ಪಿಎ ಕೂಡ ತಮ್ಮ ಹೆಸರಿನ ದುರ್ಬಳಕೆ ಕುರಿತು ಪ್ರತ್ಯಾರೋಪ ಮಾಡಿದ್ದಾರೆ.
ಹಾಸನ, ನವೆಂಬರ್ 11: ಲಂಚ ಆರೋಪ ಪ್ರಕರಣ ಇದೀಗ ಹಾಸನ ಜಿಲ್ಲಾಧಿಕಾರಿ ಮತ್ತು ಜೆಡಿಎಸ್ ಮಧ್ಯೆ ತಾರಕಕ್ಕೇರಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ಗೆ ಜೆಡಿಎಸ್ ದೂರು ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಪಿಎ ಹೆಸರಿನಲ್ಲಿ ನಡೆದಿದೆ ಎನ್ನಲಾದ ವಾಟ್ಸಾಪ್ ಸಂಭಾಷಣೆಗಳ ಕುರಿತು ತನಿಖೆ ನಡೆಸುವಂತೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಒತ್ತಾಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಸುರೇಶ್ ಬಾಬು, ‘ಈ ಸರ್ಕಾರದ ವ್ಯವಸ್ಥೆನಲ್ಲಿ ಕೆಲ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಲ್ಲೋ ಒಂದು ಕಡೆ ಇದಕ್ಕೆ ಕುಮ್ಮಕ್ಕು ರಾಜ್ಯ ಸರ್ಕಾರ ಕೊಡುತ್ತಿದೆ. ಮುಖ್ಯಮಂತ್ರಿಗಳು ಅವತ್ತೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರು. ಡಿಸಿ ಅವರಿಗೆ ತಖೆಕೆ ಮಾಡಿಸುತ್ತೇನೆ ಅಂತಾನೂ ಸೌಜನ್ಯಕ್ಕೆ ಹೇಳಲಿಲ್ಲ ಸಿಎಂ’ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

