ನಮ್ಮ ಮೆಟ್ರೋ ಪಿಂಕ್ಲೈನ್ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು
ಕೇಂದ್ರ ಸರ್ಕಾರವು ಬೆಂಗಳೂರು ಪಿಂಕ್ಲೈನ್ ಮೆಟ್ರೋದ ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಅನುಮೋದನೆ ನೀಡಿದೆ. ಸ್ಥಳೀಯರ ಬೇಡಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ. ಇನ್ನು ಈ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು, ನವೆಂಬರ್ 11: ನಮ್ಮ ಮೆಟ್ರೋ ಪಿಂಕ್ಲೈನ್ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 3 ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಮನವಿ ಬೆನ್ನಲ್ಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಮರ್ಥ ಪ್ರಾಧಿಕಾರದಿಂದ ಒಪ್ಪಿಗೆ ನೀಡಲಾಗಿದೆ. ಆ ಮೂಲಕ ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆ ಹಾಗೂ ಸಮಿತಿಯ ಶಿಫಾರಸ್ಸಿನ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಸ್ಥಳೀಯ ನಿವಾಸಿಗಳ ಬೇಡಿಕೆ ಹಾಗೂ ನಾನು ಸದಸ್ಯನಾಗಿದ್ದ ಸಮಿತಿಯ ಶಿಫಾರಸ್ಸಿನ ಮೇರೆಗೆ ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ’ ಎಂದು ಅವರು ತಿಳಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್
In response to the demands of local residents and the recommendations of the committee, of which I was a member, the Ministry has approved the renaming of the following Pink Line Metro stations:
•IIMB to Bilekahalli – IIMB •JP Nagar 4th Phase to NS Palya – JP Nagar 4th Phase •Tavarekere to SG Palya (Suddagunte Palya)
I had earlier submitted a formal request to @MoHUA through BMRCL seeking these changes, particularly the renaming of IIMB Metro Station, in response to the long-standing demand of residents of Bommanahalli Assembly Constituency.
@msrbommanahalli @krishnabgowda @RLR_BTM @OfficialBMRCL
— Tejasvi Surya (@Tejasvi_Surya) November 11, 2026
ಹೆಸರು ಬದಲಾವಣೆಯಾಗಲಿರುವ ಮೆಟ್ರೋ ನಿಲ್ದಾಣಗಳ ವಿವರ ಹೀಗಿದೆ
- IIMB ಮೆಟ್ರೋ ನಿಲ್ದಾಣ ಹೆಸರು ಬಿಳೇಕಹಳ್ಳಿ IIMB
- JP ನಗರ 4ನೇ ಹಂತ NS ಪಾಳ್ಯ JP ನಗರ 4ನೇ ಹಂತ
- ತಾವರೆಕೆರೆ ನಿಲ್ದಾಣ ಎಸ್.ಜಿ.ಪಾಳ್ಯ
‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಲಾಗಿದೆ. ವಿಶೇಷವಾಗಿ IIMB ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಸೇರಿದಂತೆ ಈ ಮೂರು ನಿಲ್ದಾಣಗಳ ಹೆಸರು ಬದಲಾಯಿಸುವಂತೆ ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತ ಮನವಿ ಸಲ್ಲಿಸಿದ್ದೆ. ಇದೀಗ ಆ ಮನವಿಗೆ ಅನುಮೋದನೆ ದೊರೆತಿದೆ’ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ದಿನವೇ ಸಿಎ ಪರೀಕ್ಷೆ: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಎಂದ ಸಚಿವ ಕೃಷ್ಣ ಬೈರೇಗೌಡ
ಇನ್ನು ಈ ಕುರಿತಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಅಧಿಕೃತ ಪತ್ರ ರವಾನಿಸಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
