AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಗಜ ಕಾರ್ಯಾಚರಣೆಗೆ ಹಿನ್ನಡೆ​​: 15 ಕಾಡಾನೆಗಳ ಗುಂಪು ಸೇರಿಕೊಂಡ ಒಂಟಿ ಸಲಗ

ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡ ಒಂಟಿ ಸಲಗ 22 ಕಿ.ಮೀ ಕ್ರಮಿಸಿ ಮಾಕೋನಹಳ್ಳಿ ಬಳಿ 15 ಕಾಡಾನೆಗಳ ಹಿಂಡನ್ನು ಸೇರಿಕೊಂಡಿದೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 16 ಕಾಡಾನೆಗಳ ಹಿಂಡಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಯುವಕರು ಕಾಡಾನೆ ಕೆಣಕಿ ಹುಚ್ಚಾಟ ಮೆರೆದಿದ್ದಾರೆ.

ಆಪರೇಷನ್ ಗಜ ಕಾರ್ಯಾಚರಣೆಗೆ ಹಿನ್ನಡೆ​​: 15 ಕಾಡಾನೆಗಳ ಗುಂಪು ಸೇರಿಕೊಂಡ ಒಂಟಿ ಸಲಗ
15 ಕಾಡಾನೆಗಳ ಗುಂಪು ಸೇರಿಕೊಂಡ ಒಂಟಿ ಸಲಗ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Nov 29, 2026 | 11:21 AM

Share

ಚಿಕ್ಕಮಗಳೂರು, ನವೆಂಬರ್​​ 29: ಮತ್ತಾವರ ಪ್ಲಾಂಟೇಶನ್​​ ಮತ್ತು ನೆಲ್ಲೂರು ಗುಡ್ಡ ಪ್ರದೇಶದಲ್ಲಿ ಓಡಾಟ ನಡೆಸಿದ್ದ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ನಡೆಸಿದ್ದ ಆಪರೇಷನ್ ಗಜ ಕಾರ್ಯಚರಣೆಗೆ ಹಿನ್ನಡೆಯಾಗಿದ್ದು, ಮಾಕೋನಹಳ್ಳಿ ಬಳಿ ಬೀಡುಬಿಟ್ಟಿರುವ 15 ಕಾಡಾನೆಗಳ ಹಿಂಡನ್ನು ಒಂಟಿ ಸಲಗ ಸೇರಿಕೊಂಡಿದೆ. 22 ಕಿಲೋ ಮೀಟರ್​​ ಕ್ರಮಿಸಿ ತನ್ನ ಗುಂಪು ಸೇರುವಲ್ಲು ಯಶಸ್ವಿಯಾಗಿದೆ. ಈಗ ಒಟ್ಟು 16 ಆನೆಗಳ ಹಿಂಡು ಚಿಕ್ಕಮಗಳೂರು ಹೊರವಲಯದ ಮಾಕೋನಹಳ್ಳಿ , ತುದಿಯಲ ಗ್ರಾಮದಲ್ಲಿ ಸಂಚಾರ ನಡೆಸುತ್ತಿವೆ.

ಸೆರೆ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಪುಂಡಾನೆ ಮತ್ತಾವರ ಪ್ಲಾಂಟೇಶನ್​​ ಮತ್ತು ನೆಲ್ಲೂರು ಗುಡ್ಡ ಪ್ರದೇಶದಿಂದ ಮೊನ್ನೆ ರಾತ್ರಿಯೇ ಕಾಲ್ಕಿತ್ತಿತ್ತು. ನಾಪತ್ತೆಯಾಗಿರುವ ಆನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದಾಗ ಮೂಡಿಗೆರೆ ತಾಲೂಕಿನ ನಂದೀಪುರ ಕಾಫಿತೋಟದಲ್ಲಿ ಕಂಡುಬಂದಿತ್ತು. ಇದ್ದ ಜಾಗದಿಂದ ಸುಮಾರು 20 ಕಿಲೋಮೀಟರ್ ದೂರವನ್ನು ಸಾಗಿದ್ದ ಒಂಟಿ ಸಲಗದ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಟ್ಟಿದ್ದರು. ಹೀಗಿದ್ದರೂ ತನ್ನ ಗುಂಪನ್ನು ಮರಳಿ ಸೇರುವಲ್ಲಿ ಆನೆ ಯಶಸ್ಸು ಕಂಡಿದೆ. ಇನ್ನು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 16 ಕಾಡಾನೆಗಳ ಹಿಂಡಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಸೆರೆ ಕಾರ್ಯಾಚರಣೆ ಸುಳಿವು ಸಿಗುತ್ತಿದ್ದಂತೆ ಒಂಟಿ ಸಲಗ ಎಸ್ಕೇಪ್​​: ಸುಮಾರು 20 ಕಿ.ಮೀ. ದೂರದಲ್ಲಿ ಪತ್ತೆ

ಬಿಳಿಗಿರಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಕಿಡಿಗೇಡಿಗಳಿಂದ ಕುಚೇಷ್ಟೆ

ಬಿಳಿಗಿರಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಕಿಡಿಗೇಡಿಗಳು ಕುಚೇಷ್ಟೆ ನಡೆಸಿದ್ದು, ಚಾಮರಾಜನಗರ ತಾಲೂಕಿನ ಪುಣಜನೂರು ರಸ್ತೆಯಲ್ಲಿ ಆನೆಯನ್ನ ಚೇಡಿಸಿದ್ದಾರೆ. ರಾತ್ರಿ 9 ಗಂಟೆಗೆ ಪುಣಜನೂರು ಚೆಕ್ ಪೋಸ್ಟ್ ಬಂದ್ ಆಗಲಿದೆ. ಹೀಗಾಗಿ ಆ ಬಳಿಕ ಅನಧಿಕೃತ ಪ್ರವೇಶ ಮಾಡಿರುವ ಆರೋಪವೂ ಕೇಳಿಬಂದಿದೆ. ಕಾಡಾನೆಯನ್ನು ಕೆಣಕಿದ್ದಲ್ಲದೆ, ಆ ದೃಶ್ಯವನ್ನು ಯುವಕರು ಮೊಬೈಲ್​​ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಅವರ ಹುಚ್ಚಾಟದ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಬೆನ್ನಲ್ಲೇ ಯುವಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಮರ; ನಾಳೆ ದಕ್ಷಿಣ ಭಾರತದ ಸಿಎಂಗಳ ಸಭೆ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌