ಬೆಂಗಳೂರು: ದಿನೇದಿನೆ ಮಹಾಮಾರಿ ಕೊರೊನಾ ಮತ್ತೊಂದು ರೌಂಡು ತನ್ನ ಆಟ ಶುರುವಿಟ್ಟುಕೊಂಡಿದೆ. ಈ ಮಧ್ಯೆ ಆಯಾ ಸರ್ಕಾರಗಳೂ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಸೋಂಕನ್ನು ಕಟ್ಟಿಹಾಕಲು ಸಜ್ಜಾಗಿ ನಿಂತಿವೆ. ಈ ಮಧ್ಯೆ ನಗರ ಪ್ರದೇಶಗಳಲ್ಲಿನ ಜನತೆ ಸರ್ಕಾರದ ಒಂದು ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಬ್ಬು, ಬಾರು, ಬೀರಿಗೆ ಕಡಿವಾಣ ಹಾಕುವುದು ಸಮಂಜಸ. ಮಾಲ್, ಮಾರ್ಕೆಟ್, ಸಿನಿಮಾ ಅಂತಹ ಜನಜಂಗುಳಿ ಪ್ರದೇಶಗಳಿಗೆ ಬೇಲಿ ಹಾಕುವುದು ಸೂಕ್ತ. ಅದರೆ ಕೊರೊನಾ ಕಾಲದಲ್ಲಿ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ಪಾರ್ಕ್ಗಳಿಗೆ ಬೀಗ ಹಾಕುವುದು ಸರ್ವತಾ ಸಾಧುವಲ್ಲ ಎಂದು ಧನುರ್ಮಾಸದ ನಡುಗುವ ಚಳಿಯಲ್ಲೂ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಹೌದು, ವೀಕೆಂಡ್ ಕರ್ಫ್ಯೂಗೆ ವಾಕರ್ಸ್ ವಿರೋಧ ವ್ಯ್ತಪಡಿಸಿದ್ದು, ಪಾರ್ಕ್ ಗಳನ್ನೂ ಕ್ಲೋಸ್ ಮಾಡಿದ್ರೆ ಹೇಗೆ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಬಿಪಿ, ಶುಗರ್ ಅಂತಹ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿರುತ್ತವೆ. ದಿನಾವೂ ವಾಕಿಂಗ್, ಜಾಗಿಂಗ್ ಮಾಡಿ ಜನ ತಮ್ಮಾರೋಗ್ಯವನ್ನು ಸುಸ್ಥಿತಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಅಂತಹುದರಲ್ಲಿ ವಾರಕ್ಕೆ ಎರಡು ದಿನ ಕಂಪ್ಲೀಟ್ ಬಂದ್ ಮಾಡಿದ್ರೆ ಕಷ್ಟ ಕಷ್ಟವಾಗುತ್ತದೆ. ಇದರಿಂದ ಇತರೆ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತವೆ. ಮನೆ ಸುತ್ತಮುತ್ತ ಪಾರ್ಕ್ ಗಳು ಇರೋಲ್ಲ, ದೂರದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಅಂತಹ ವಿಶಾಲ ಪಾರ್ಕುಗಳೂ ಕೂಡ ಕ್ಲೋಸ್ ಮಾಡಿಬಿಟ್ಟರೆ ಹೇಗೆ ಎಂದು ಜನ ಪ್ರಶ್ನಿಸಿತೊಡಗಿದ್ದಾರೆ.
ವಾಕರ್ಸ್ ಗಳಿಗಂತಾನೇ ಒಂದು ಸಮಯಾವಕಾಶ ಕೊಡಿ. ಬೆಳಗ್ಗೆ 6 ರಿಂದ 9 ಗಂಟೆ ಹಾಗೂ ಸಂಜೆ ವಾಕಿಂಗ್ ಗೆ ಅವಕಾಶ ಕೊಡ್ಬೇಕು. ಇದರಿಂದ ಆರೋಗ್ಯ ಸಮಸ್ಯೆ ಇರೋರಿಗೆ ವಾಕಿಂಗ್, ಜಾಗಿಂಗ್ ಮಾಡಲು ತುಂಬಾ ಅನುಕೂಲ ಆಗುತ್ತೆ. ಈಗ ಯಾರೂ ಮೊದಲಿನ ರೀತಿ ಒಟ್ಟಿಗೆ ಸೇರೊಲ್ಲ. ಜನರಿಗೆ ಗುಂಪು ಸೇರಬಾರದು ಅನ್ನೊ ಅರಿವಿದೆ. ಹಾಗಾಗಿ ಪಾರ್ಕ್ಗಳನ್ನು ವಾಕಿಂಗ್ಗಾಗಿ ಮುಕ್ತವಾಗಿರಿಸಿ ಎಂದು ವಾಕರ್ಸ್ ಮೊರೆಯಿಟ್ಟಿದ್ದಾರೆ.
ಇದನ್ನು ಓದಿ:
ಚಿತ್ರಮಂದಿರ, ಮಾಲ್, ಬಾರ್, ಪಬ್ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ
ಇದನ್ನು ಓದಿ:
Karnataka Weekend Curfew: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಬೆಂಗಳೂರಿನಲ್ಲಿ 10, 12ನೇ ತರಗತಿಗೆ ಮಾತ್ರ ಆಫ್ಲೈನ್ ಕ್ಲಾಸ್
Published On - 9:27 am, Wed, 5 January 22