ವಿಜಯೇಂದ್ರನಂಥ ಬೇಜವಾಬ್ದಾರಿ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷನಾಗಿರೋದು ಬೇಕಿಲ್ಲ: ರಮೇಶ್ ಜಾರಕಿಹೊಳಿ
ರಾಜ್ಯದ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನೂ ಸೋತಿದ್ದು ನಾಚಿಗ್ಗೇಡು, ಯತ್ನಾಳ್ ತಂಡದಿಂದಾಗೇ ಸೋಲುಂಟಾಯಿತು ಎಂದು ವಿಜಯೇಂದ್ರ ಹೇಳುತ್ತಾರೆ, ಮತ್ತೊಂದು ಕಡೆ ಅವರು ಉಪ ಚುನಾವಣೆಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುತ್ತಾರೆ, ಇದಕ್ಕಿಂತ ಬೇಜವಾಬ್ದಾರಿ ಹೇಳಿಕೆ ಬೇಕಾ? ಎಂದು ರಮೇಶ್ ಜಾರಕಿಹೊಳಿ ಕುಟುಕಿದರು
ಬೆಳಗಾವಿ: ವಿಜಯೇಂದ್ರನಂಥ ಒಬ್ಬ ಬೇಜವಾಬ್ದಾರಿ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷನಾಗಿರೋದು ಬೇಕಿಲ್ಲ, ವಕ್ಫ್ ಬೋರ್ಡ್ ಮಾಡುತ್ತಿರುವ ಭೂಕಬಳಿಕೆ ಕೇವಲ ರಾಜ್ಯವಲ್ಲ ಇಡೀ ದೇಶಕ್ಕೆ ಮಾರಕವಾಗಿದೆ, ವಿಜಯೆಂದ್ರ ಎರಡು ಸಲ ವಕ್ಫ್ ವಿರುದ್ಧ ಹೋರಾಟಕ್ಕೆ ಕರೆ ನೀಡಿ ಬೇರೆಲ್ಲೋ ಹೋಗಿ ಕುಳಿತರು, ಯಡಿಯೂರಪ್ಪ ಒಬ್ಬ ಹುಟ್ಟು ಹೋರಾಟಗಾರ, ಆದರೆ ವಿಜಯೇಂದ್ರ ನೀಟಾಗಿ ಬಟ್ಟೆ ಧರಿಸಿ ಶೋಕಿ ಮಾಡಲು ಲಾಯಕ್ಕಾದ ಮನುಷ್ಯ, ಪಕ್ಷದ ಅಧ್ಯಕ್ಷನಾಗಲು ಅವರಿಗೆ ಪರಿಪಕ್ವವಾದ ಸಮಯ ಇದಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 2028ರ ವಿಧಾನಸಭಾ ಚುನಾವಣೆ ವೇಳೆಗೆ ಬಂಡಾಯ ಏಳುತ್ತೇನೆಂದ ರಮೇಶ್ ಜಾರಕಿಹೊಳಿ: ಕಾರಣ ಇಲ್ಲಿದೆ