ಫೆಂಗಲ್ ಕಾಟ: ಮಂಗಳೂರಿನಲ್ಲಿ ಅಲೆಗಳ ಅಬ್ಬರ, ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶ, ಕೊಡಗಿನಲ್ಲೂ ಆತಂಕ

ಫೆಂಗಲ್‌ ಸೈಕ್ಲೋನ್ ಪರಿಣಾಮ ಸುರಿಯುತ್ತಿರುವ ಅಕಾಲಿಕ ಮಳೆ ಕರ್ನಾಟಕದ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಮಂಗಳೂರಿನಲ್ಲಿ ಅರಬ್ಬೀ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶವಾಗಿದೆ. ಕೋಲಾರದಲ್ಲಿ ರಾಗಿ ಪೈರು ಹೊಲದಲ್ಲೇ ಕೊಳೆಯುತ್ತಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಏನೇನಾಯ್ತು ಎಂಬ ವಿವರ ಇಲ್ಲಿದೆ.

ಫೆಂಗಲ್ ಕಾಟ: ಮಂಗಳೂರಿನಲ್ಲಿ ಅಲೆಗಳ ಅಬ್ಬರ, ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶ, ಕೊಡಗಿನಲ್ಲೂ ಆತಂಕ
ಕೋಲಾರದಲ್ಲಿ ರಾಗಿ ಪೈರು ನಾಶವಾಗಿರುವುದು
Follow us
TV9 Web
| Updated By: Ganapathi Sharma

Updated on: Dec 02, 2024 | 2:51 PM

ಬೆಂಗಳೂರು, ಡಿಸೆಂಬರ್ 2: ಫೆಂಗಲ್‌ ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಮೈಸೂರಿನಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮೈಸೂರಿನ ಜನರು ಹೈರಾಣಾಗಿದ್ದಾರೆ. ಮೈಸೂರಿನಲ್ಲಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ಆದರೆ, ಮೈಸೂರು ವಿವಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಉಂಟಾಗಿತ್ತು.

ಮಂಗಳೂರಿನಲ್ಲಿ ಅಲೆಗಳ ಅಬ್ಬರ

ಬಂಗಾಳಕೊಲ್ಲಿಯ ಫೆಂಗಲ್ ಚಂಡಮಾರುತದ ಪರಿಣಾಮ ಅರಬ್ಬೀ ಸಮುದ್ರಕ್ಕೂ ತಟ್ಟಿದೆ. ದಕ್ಷಿಣ ಕನ್ನಡದ ಸೋಮೇಶ್ವರ, ಬಟ್ಟಪಾಡಿಯ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಗಂಟೆಗೆ 30ರಿಂದ 35 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ರಾಗಿ ಬೆಳೆ ನಾಶ

ಚಿಕ್ಕಬಳ್ಳಾಪುರದಲ್ಲಿ ಹಾಸುಹೊಕ್ಕಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ಮಳೆ ನಾಶಪಡಿಸಿದೆ. ನಿರಂತರವಾಗಿ ಮಳೆಯಾಗುತ್ತಿದ್ದು, ರಾಗಿ ಬೆಳೆ ಜಮೀನಿನಲ್ಲೇ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತದ ಸ್ಥಿತಿ ನಿರ್ಮಾಣವಾಗಿದೆ.

ಜಿಟಿ ಜಿಟಿ ಮಳೆಯಿಂದ ಕ್ಯಾರೆಟ್, ಬೀಟ್‌ರೂಟ್, ಹೂಕೋಸು, ಆಲೂಗಡ್ಡೆಯೂ ಕೊಳೆಯುವ ಸ್ಥಿತಿಗೆ ಬಂದಿದೆ. ಹಿರೇಕಾಯಿ, ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಬೀನ್ಸ್‌ಗೆ ರೋಗಬಾಧೆ ತಟ್ಟುವ ಆತಂಕ ಎದುರಾಗಿದೆ. ತಂಪಾದ ವಾತಾವರಣ ಇರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ. ಹೂವಿನ ತೋಟವೂ ಜಲಯಮವಾಗಿದ್ದು, ರೋಜ, ಸೇವಂತಿ, ಚೆಂಡು ಹೂವು ಬೆಳೆ ಮಳೆಯಿಂದ ನಾಶವಾಗಿವೆ.

ಕೋಲಾರದಲ್ಲೂ ಕೊಳೆಯುತ್ತಿದೆ ರಾಗಿ ಪೈರು

ಕೋಲಾರದಲ್ಲೂ ಭಾರಿ ಮಳೆಯಿಂದಾಗಿ ರಾಗಿ ಪೈರು ಹೊಲದಲ್ಲೇ ಕೊಳೆಯುತ್ತಿದೆ. ಮಳೆಯಿಂದ ರಾಗಿ ತೆನೆ ಮೊಳಕೆಯೊಡೆಯುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ಕೊಡಗಿನಲ್ಲಿ ಕಾಫಿ, ಭತ್ತ ನಾಶದ ಆತಂಕ

ಕೊಡಗಿನಲ್ಲೂ ತುಂತುರು ಮಳೆಯಾಗುತ್ತಿದ್ದು, ಕಾಫಿ ಮತ್ತು ಭತ್ತದ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ಕೊಯ್ಲಿಗೆ ಬಂದಿರುವ ಕಾಫಿ ಮತ್ತು ಭತ್ತ ಗದ್ದೆಯಲ್ಲೇ ಮೊಳಕೆ ಒಡೆಯುತ್ತಿದ್ದು, ರೋಗದ ಆತಂಕ ಬಂದೊದಗಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ಕೆಲವಡೆ ಇನ್ನೂ 2 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಸೇರಿ ಕರ್ನಾಟಕದ ಕೆಲವಡೆ ಇನ್ನೂ 2 ದಿನ ಮಳೆ ಮುನ್ಸೂಚನೆ ನೀಡಿದ್ದು, ರೈತರನ್ನು ಕಂಗಾಲಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ನದಿಪಾತ್ರದಲ್ಲಿ ಪ್ರತಿವಾರ ಗುಡ್ಡೆಬೀಳುತ್ತಿದೆ ಬೆಟ್ಟದಷ್ಟು ತ್ಯಾಜ್ಯ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ: ವಿಡಿಯೋ ಇಲ್ಲಿದೆ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಹರ್ಷವರ್ಧನ್​ರನ್ನು ಉಳಿಸಲು 4 ತಾಸು ಶ್ರಮಪಟ್ಟೆವು: ಖಾಸಗಿ ಅಸ್ಪತ್ರೆ ವೈದ್ಯ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಫೆಂಗಲ್ ಚಂಡಮಾರುತ, ತಿರುವಣ್ಣಾಮಲೈನಲ್ಲಿ ಭೂಕುಸಿತ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಉಲ್ಟಾ ಹೊಡೆದ ಶೋಭಾ ಶೆಟ್ಟಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ
ಅಯ್ಯಪ್ಪಸ್ವಾಮಿ ದೇವಾಲಯದ 18 ಮೆಟ್ಟಿಲುಗಳ ಮಹತ್ವ ತಿಳಿಯಿರಿ