ವಿಜಯೇಂದ್ರ ಚಿಕ್ಕವನು ಅಂತೇಳಿ ಬೈದ್ರೆ ಹೇಗೆ? ಯತ್ನಾಳ್ಗೆ ನೋಟಿಸ್ ಬಗ್ಗೆ ರೇಣುಕಾಚಾರ್ಯ ಹೇಳಿದ್ದಿಷ್ಟು
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ವಿಜಯೇಂದ್ರ ಚಿಕ್ಕವನು ಅಂತೇಳಿ ಬೈದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ನೋಟೀಸ್ ಕೊಟ್ಟಿದ್ದಕ್ಕೆ ಖುಷಿ ಪಡುವಷ್ಟು ವಿಕೃತ ಮನಸ್ಸು ನಮ್ಮದಲ್ಲ. ಭಿನ್ನಮತಗಳನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ದಾವಣಗೆರೆ, ಡಿಸೆಂಬರ್ 02: ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಹೇಳಿಕೆಗಳು ಮತ್ತು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ (Yatnal) ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಸದ್ಯ ಈ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ, ನೋಟಿಸ್ ಕೊಟ್ಟಿದ್ದಕ್ಕೆ ನನಗೆ ನೋವು ಇಲ್ಲ, ಖುಷಿನೂ ಇಲ್ಲ. ವಿಜಯೇಂದ್ರ ಚಿಕ್ಕವನು ಅಂತೇಳಿ ಬೈದರೆ ಹೇಗೆ ಎಂದಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನಿಂದ ನನ್ನಿಂದಲೇ ಎನ್ನುವ ಮನೋಭಾವ ಇಟ್ಟುಕೊಳ್ಳಬಾರದು. ಯತ್ನಾಳ್ ಹೊಂದಾಣಿಕೆ ರಾಜಕಾರಣದ ಅರೋಪ ಮಾಡುತ್ತಿದ್ದಾರೆ. ಕೇಂದ್ರ ನಾಯಕರ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಿಸ್ತು ಸಮಿತಿ ನೋಟಿಸ್: ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಪ್ರತಿಕ್ರಿಯೆ
ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಮುಖ್ಯವಾಗಿರುತ್ತಾರೆ. ಕಳೆದ ಚುನಾವಣೆಯ ಸೋಲಿಗೆ ಕೆಲವರು ಕಾರಣವಾಗಿದ್ದಾರೆ. ನಮ್ಮ ಒಳ ಜಗಳಗಳೇ ಸೋಲಿಗೆ ಕಾರಣವಾಯ್ತು. ಯಡಿಯೂರಪ್ಪ ಸಿಎಂ ಆಗಿ ಪಕ್ಷದ ಬಗ್ಗೆ ನಿರ್ಣಯ ಮಾಡಿದರು. ಏನೇ ಭಿನ್ನಮತ ಇದ್ದರೂ 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ಯತ್ನಾಳ್ ಹೇಳಿಕೆಗೆ ಮಾಜಿ ಶಾಸಕ ರೇಣುಕಾಚಾರ್ಯ ತಿರುಗೇಟು
ವಿಜಯೇಂದ್ರ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದರೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಪ್ರಧಾನಿ ಮೋದಿರನ್ನೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ, ಹಾಗಂದ ಮಾತ್ರಕ್ಕೆ ಇದು ಅಡ್ಜಸ್ಟ್ಮೆಂಟ್ ರಾಜಕಾರಣ ಆಗುತ್ತಾ? ಅಭಿವೃದ್ಧಿ ಕೆಲಸಕ್ಕೆ ಚರ್ಚಿಸಲು ಸಿಎಂ, ಡಿಸಿಎಂ ಭೇಟಿ ಮಾಡಿರ್ತಾರೆ. ಸಿಡಿ, ಫೋಟೋ ಇದೆ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪಸಿಂಹ ಏಕೆ ಟಿಕೆಟ್ ಸಿಗಲಿಲ್ಲ, ಆತ್ಮಾವಲೋಕನ ಮಾಡಿಕೊಳ್ಳಲಿ. ಡಿ.10ರಂದು ದಾವಣಗೆರೆಯಲ್ಲಿ ಮಾಜಿ ಸಚಿವರು, ಶಾಸಕರ ಸಭೆ ಮಾಡುತ್ತೇವೆ. ಡಿ.11ರಂದು ಪೂರ್ವಭಾವಿ ಸಭೆ ಮಾಡಿ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಇದು ಯಾವುದೇ ವ್ಯಕ್ತಿಯ ಪರ ಸಮಾವೇಶ ಅಲ್ಲ. ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಮಾವೇಶ ಮಾಡುತ್ತೇವೆ. ಬಿ.ವೈ.ವಿಜಯೇಂದ್ರರ ಶಕ್ತಿ ಪ್ರದರ್ಶನದ ಸಮಾವೇಶ ಇಲ್ಲ. ನಾನು ಅಂತಾ ಹೋದವರು ಯಾರೂ ಕೂಡ ಉಳಿದಿಲ್ಲ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಿಸ್ತು ಸಮಿತಿಯ ಶೋಕಾಸ್ ನೋಟಿಸ್ ಬಗ್ಗೆ ಅನುಮಾವಿದೆ, ವಿಜಯೇಂದ್ರ ವಿರುದ್ಧ ಹೋರಾಟ ನಿರಂತರ: ಯತ್ನಾಳ್
ನೋಟೀಸ್ ಕೊಟ್ಟಿದ್ದಕ್ಕೆ ಖುಷಿ ಪಡುವಷ್ಟು ವಿಕೃತ ಮನಸ್ಸು ನಮ್ಮದಲ್ಲ. ಭಿನ್ನಮತೀಯರ ಸಮವೇಶ ಮಾಡಲು ಕೋಟಿ ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಅದೇ ಹಣವನ್ನು ಕೊಡಿ ಪಕ್ಷದ ಅಡಿಯಲ್ಲಿ ಸಮಾವೇಶ ಮಾಡೋಣ. ಸರ್ಕಾರವನ್ನು ಕೆಡವಿ ನಾವು ಅಧಿಕಾರ ನಡೆಸುತ್ತೇವೆ ಎಂದು ಹೇಳಿಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.