ಮುರುಡೇಶ್ವರ ಕಡಲತೀರದಲ್ಲಿ ಕೋಟ್ಯಾಂತರ ಬೆಲೆ ಬಾಳುವ ತಿಮಿಂಗಿಲದ ಅಂಬರ್ ಗ್ರಿಸ್ ಪತ್ತೆ

|

Updated on: Apr 26, 2021 | 9:00 AM

ಕಲ್ಲಿನ ಆಕಾರದಲ್ಲಿ ಇದ್ದ ವಸ್ತುವನ್ನು ಏನೆಂದು ತಿಳಿಯುವ ಉದ್ದೇಶದಿಂದ ಮನೆಗೆ ತಂದು ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿತ್ತು. ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ವಸ್ತು ಇದಾಗಿದ್ದು, ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.

ಮುರುಡೇಶ್ವರ ಕಡಲತೀರದಲ್ಲಿ ಕೋಟ್ಯಾಂತರ ಬೆಲೆ ಬಾಳುವ ತಿಮಿಂಗಿಲದ ಅಂಬರ್ ಗ್ರಿಸ್ ಪತ್ತೆ
ತಿಮಿಂಗಿಲದ ವಾಂತಿ
Follow us on

ಕಾರವಾರ: ಕೋಟ್ಯಾಂತರ ಬೆಲೆ ಬಾಳುವ ಹಾಗು ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿ ಸುಮಾರು ಒಂದು ಕೆ.ಜಿ ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದೆ. ಸದ್ಯ ದೇಶದಲ್ಲಿ ತಿಮಿಂಗಿಲ ವಾಂತಿ ಮಾರಾಟಕ್ಕೆ ಅವಕಾಶ ಇಲ್ಲದ ಕಾರಣ ಸಿಕ್ಕ ವಸ್ತುವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ತಿಮಿಂಗಿಲ ವಾಂತಿ ಆಳ ಸಮುದ್ರದಲ್ಲಿ ಸಿಗುವ ಬೆಲೆ ಬಾಳುವ ವಸ್ತು. ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಬಳಕೆಯಾಗುವ ಈ ವಸ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎನ್ನುವವರಿಗೆ ಸಿಕ್ಕಿತ್ತು.

ಕಲ್ಲಿನ ಆಕಾರದಲ್ಲಿ ಇದ್ದ ವಸ್ತುವನ್ನು ಏನೆಂದು ತಿಳಿಯುವ ಉದ್ದೇಶದಿಂದ ಮನೆಗೆ ತಂದು ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿತ್ತು. ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ವಸ್ತು ಇದಾಗಿದ್ದು, ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.

ಎಲ್ಲಾ ಮೀನುಗಳ ವಾಂತಿ ಬೆಲೆಬಾಳದು
ಅಂಬರ್ ಗ್ರಿಸ್ ಎಂದು ಇಂಗ್ಲೀಷ್​ನಲ್ಲಿ ಹೇಳುವ ಹಾಗೂ ಕನ್ನಡದಲ್ಲಿ ಇದನ್ನು ತಿಮಿಂಗಿಲ ವಾಂತಿ ಎನ್ನುತ್ತಾರೆ. ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬರ್ ಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ. ಎಲ್ಲಾ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು. ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬರ್ ಗ್ರಿಸ್ ಹೊರ ಬರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಸುಗಂಧ ದ್ರವ್ಯ ಬಳಕೆಗೆ ಇದನ್ನ ಬಳಕೆ ಮಾಡುವುದರಿಂದ ಇದಕ್ಕೆ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಕಡಲ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶಿವಕುಮಾರ್ ಹರಗಿ.

ಒಂದು ತಿಮಿಂಗಿಲ ಒಂದು ಕೆ.ಜಿಯಿಂದ ಹತ್ತು ಕೆ.ಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗದಲ್ಲಿ ಇವು ರಾಸಾಯನಿಕಕ್ಕೆ ಒಳಗಾಗುವುದರಿಂದ ಇದರ ವಾಂತಿಯಲ್ಲಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್​ನಂತೆ ಕರಗಿ ಕೆಟ್ಟ ವಾಸನೆ ಬರುತ್ತದೆ. ನಂತರ ಸುಂಗಂಧ ಬರಿತವಾಗಿರುತ್ತದೆ. ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಬೇಡಿಕೆ ಇರುವುದರಿಂದ ಹೊರ ದೇಶದಲ್ಲಿ ಇದಕ್ಕೆ ಒಂದು ಕೆ.ಜಿ.ಗೆ ಕೋಟಿ ಬೆಲೆ ಇರುತ್ತದೆ ಎನ್ನಲಾಗಿದೆ. ಹೀಗಾಗಿ ವೇಲ್ ತಿಮಿಂಗಿಲಗಳ ಮಾರಣ ಹೋಮವು ಸಹ ನಡೆಯುತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಬ್ಲ್ಯೂಡಬ್ಲ್ಯೂಎಫ್ (WWF) ಹಾಗೂ ನಮ್ಮ ದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು, ಮಾರುವುದು ಕಾನೂನು ಬಾಹಿರವಾಗಿದೆ.

ಇದನ್ನೂ ಓದಿ

ಹುಬ್ಬಳ್ಳಿ: ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆಯಾಗುತ್ತಿದೆ ರೈಲ್ವೆ ಬೋಗಿಗಳು; ಮಹತ್ವದ ಕಾರ್ಯಕ್ಕೆ ಮುಂದಾದ ರೈಲ್ವೆ ಇಲಾಖೆ

ಆಕ್ಸಿಜನ್ ಕೊರತೆಯಿಂದ ದಿನ 30 ಜೀವಗಳು ಬಲಿಯಾಗುತ್ತಿವೆ, ಆಕ್ಸಿಜನ್ ಕೊರತೆಗೆ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ

(Whale Amber Gris found in murudeshwar beach)