ಮಂಡ್ಯ: ಕೊರೂನಾ ಕಾಟದಿಂದ ಮಾನಸಿಕ ಕ್ಷೋಭೆಯಂತಹ ದುರ್ಭರ ಪ್ರಸಂಗಗಳೂ ನಡೆಯುತ್ತಿವೆ. ಸೋಂಕಿತ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ತಾನು ಸಾಯಬಹುದೆಂದು ಹೆದರಿ ನೇಣಿಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಈ ದುರ್ಘಟನೆ ನಡೆದಿದೆ. ಜಯಕುಮಾರ್(45) ಮೃತ ಸೋಂಕಿತ ವ್ಯಕ್ತಿ.
ಮೃತ ಜಯಕುಮಾರ್ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರು. ಕರೊನಾ ದೃಢಪಟ್ಟಿದ್ರಿಂದ ನಿನ್ನೆ ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜಯಕುಮಾರ್ ಒಮ್ಮೆ ಆಕ್ಸಿಜನ್ ಪಡೆದಿದ್ದರು. ಮತ್ತೆ ಉಸಿರಾಟದ ಸಮಸ್ಯೆ ಎದುರಾಗಿ ತಾನು ಸಾಯಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆ ಹಿಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಜಯಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈದ್ಯಾಧಿಕಾರಿಗಳು ಮತ್ತು ಪೊಲೀಸರಿಂದ ಪರಿಶೀಲನೆ ನಡೆದಿದೆ. ಶ್ರೀರಂಗಪಟ್ಟಣ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಾವು:
ತುಮಕೂರಿನಲ್ಲಿಯೂ ಕ್ರೂರಿ ಕೊರೊನಾ ಅಟ್ಟಹಾಸ ನಡೆಸಿದೆ. ತುಮಕೂರು ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಸೆಂಟರ್ನಲ್ಲಿ ಡಯಾಲಿಸಿಸ್ ಸೆಂಟರ್ ಮುಖ್ಯಸ್ಥ ಕೊರೊನಾಗೆ ಬಲಿಯಾಗಿದ್ದಾರೆ. 6 ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು. ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ 27 ವರ್ಷದ ವ್ಯಕ್ತಿ ಸಾವಿಗೀಡಾದವರು.
ಕಳೆದ ವಾರ ಸೋಂಕು ತಗುಲಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸಂಜೆ ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಮಧ್ಯೆ ರಾತ್ರಿ 1.30 ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ. ಲಿವರ್ ಡ್ಯಾಮೇಜ್ ನಿಂದ ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 27 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿರೋದು ತುಮಕೂರು ಜನರಲ್ಲಿ ಆತಂಕ ತಂದಿದೆ.
(coronavirus infected person committed suicide in srirangapatna, 6 months back married person died due to covid 19 in tumkur)
ಇದನ್ನೂ ಓದಿ:
Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ
Published On - 9:31 am, Mon, 26 April 21