AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ

ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂಬುದನ್ನು ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್ ಸಂಶೋಧನೆಯ ಮೂಲಕ ತಿಳಿಸಿದೆ. ಈ ಕುರಿತಾದ ನಕ್ಷೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ
ಪ್ರಾತಿನಿಧಿಕ ಚಿತ್ರ
shruti hegde
| Edited By: |

Updated on: Apr 26, 2021 | 6:49 AM

Share

ಕಚೇರಿ ಬಿಟ್ಟು ದೂರದಲ್ಲಿ ಕೆಲಸ ಮಾಡುವುದರಿಂದ ಕಚೇರಿ ಮತ್ತು ಮನೆಗೆ ಓಡಾಡುವ ಸಮಯವನ್ನು ಸಾಕಷ್ಟು ಉಳಿಸಬಹುದು. ಆದರೆ ಈ ಹೊಸ ಯೋಚನೆಯ ಒಂದು ದೊಡ್ಡ ನ್ಯೂನ್ಯತೆ ಎಂದರೆ ಜನರು ವಿರಾಮವಿಲ್ಲವೇ ಅದೆಷ್ಟೋ ಕಚೇರಿಗೆ ಸಂಬಂಧಿಸಿದ ಮೀಟಿಂಗ್​ಗಳನ್ನು ಸಹಿಸಿಕೊಳ್ಳುವುದು. ಈ ಕುರಿತಂತೆ ಹೊಸ ಅಧ್ಯಯನವೊಂದು ನಡೆದಿದ್ದು, ಹಗಲಿನಲ್ಲಿ ಬೇಕಾದ ವಿರಾಮದ ಮಹತ್ವವನ್ನು ತಿಳಿಸಿದೆ. ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್​ ನಡೆಸಿದ ಸಂಶೋಧನೆಯನ್ನು ಪ್ರಮುಖ ವೃತ್ತಿಪರರು ಉಲ್ಲೇಖಿಸಿದ್ದಾರೆ. ಮತ್ತು ದೂರದಿಂದ ಕೆಲಸ ಮಾಡುವ ಜನರು ಮೆದುಳಿಗೆ ಒಡ್ಡುತ್ತಿರುವ ಒತ್ತಡವನ್ನು ಸುಧಾರಿಸಿಕೊಳ್ಳಲು ಕೆಲಸದ ಸಮಯದಲ್ಲಿ ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂದು ಪ್ರತಿಪಾದಿಸಿದ್ದಾರೆ.

ದಿ ಹಸ್ಟಲ್​ ನ್ಯೂಸ್​ ಔಟ್​ಲೆಟ್​ನಲ್ಲಿ ವಿಷಯ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಸ್ಟೈಫ್​ ಸ್ಮಿತ್​ ಹೇಳಿದಂತೆ, ಅವರು ದೂರದಿಂದಲೆ ಕೆಲಸ ಮಾಡುವುದನ್ನು ಪ್ರೀತಿಸುತ್ತಾರೆ. ಮತ್ತು ಅದರ ಕುರಿತಾಗಿ ತನ್ನ ಬ್ಲಾಗ್​ನಲ್ಲಿ ಬರೆದಿದ್ದಾರೆ. ಹಾಗೆಯೇ ಅವರು ಟ್ವೀಟ್​ ಮಾಡಿದ ಪೋಸ್ಟ್​ ಮೈಕ್ರೋಸಾಫ್ಟ್​ ಸಂಶೋಧನೆಯದ್ದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್​ ತಿಳಿಸುವಂತೆ ಕಚೇರಿಯ ಮೀಟಿಂಗ್​ನಲ್ಲಿ ಕಚೇರಿ ಸಿಬ್ಬಂದಿಯ ಮೆದುಳು ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಮತ್ತು ಬ್ರೇಕ್​ ತೆಗೆದುಕೊಂಡಾಗ ಮೆದುಳಿನ ಕಾರ್ಯ ಹೇಗಿರುತ್ತದೆ ಎಂಬುದನ್ನು ನಕ್ಷೆಯ ಮೂಲಕ ತಿಳಿಸಲಾಗಿದೆ. ನೆಟ್ಟಿಗರು ಈ ವಿಷವನ್ನು ಒಪ್ಪಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಹೌದು. ದಯವಿಟ್ಟು ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳನ್ನು ನಿಲ್ಲಿಸಿ ಎಂದು ನೆಟ್ಟಿಗರು ಸ್ಮಿತ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

ಸಣ್ಣ ವಿರಾಮದ ಸಮಯದಲ್ಲಿ ಕಿಟಕಿಗಳನ್ನು ತೆರೆಯಬೇಕು. ತಮ್ಮ ಕೆಲಸಕ್ಕೆ ಅನುಗುಣವಾಗಿ ಸೂರ್ಯನ ಬೆಳಕನ್ನು ಸ್ಪರ್ಶಿಸಿ ಎಂದು ಇನ್ನೋರ್ವರು ಸೂಚನೆ ನೀಡಿದ್ದಾರೆ. ಯೋಜನೆಯನ್ನು ಮೇಲ್ವಿಚಾರಣೆ ಮಾಡಿದ ಮೈಕ್ರೊಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ ಎಂಜಿನಿಯರಿಂಗ್​ ಸಮೂಹದ ಹಿರಿಯ ನಿರ್ದೇಶಕ ಮೈಕಲ್​ ಬೋಹನ್​, ತಮ್ಮ ಸಂಶೋಧನೆಯು ಮೆದುಳಿಗೆ ವಿರಾಮ ನೀಡುವಲ್ಲಿ ಪ್ರಮುಖವಾಗಿದೆ. ಮೀಟಿಂಗ್​ನಲ್ಲಿ ಒಬ್ಬರು ಕಡಿಮೆ ದಣಿದಂತೆ ಅನಿಸಬಹುದು. ಆ ಸಮಯದಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ. ಮತ್ತು ಮೀಟಿಂಗ್​ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳು ಸುಲಭವಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು