CET ಪರೀಕ್ಷೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ಏನು ಹೇಳಿದ್ರು?

|

Updated on: May 13, 2020 | 1:43 PM

ಬೆಂಗಳೂರು: ಕ್ರೂರಿ ಕೊರೊನಾದಿಂದ ನಿಗದಿಯಾಗಿದ್ದ ವಿದ್ಯಾರ್ಥಿಗಳ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೆಪ್ಟೆಂಬರ್ ಮೊದಲ ವಾರದಿಂದ ಪದವಿ ಕಾಲೇಜು ಆರಂಭಿಸಲಾಗುತ್ತೆ. ಮೇ 31ರೊಳಗೆ ಆನ್​ಲೈನ್ ಮೂಲಕ ಪಾಠ ಮುಗಿಸಬೇಕು. ಈ ಬಗ್ಗೆ ಪದವಿ, ಇಂಜಿನಿಯರಿಂಗ್ ಕಾಲೇಜುಗಳಿಗೆ ಸೂಚಿಸಲಾಗಿದೆ. ಪರೀಕ್ಷೆ, ಫಲಿತಾಂಶ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಜುಲೈ 30, 31ರಂದು ಸಿಇಟಿ ಪರೀಕ್ಷೆ: ಜುಲೈ 30, 31ರಂದು ಸಿಇಟಿ ಪರೀಕ್ಷೆ ನಡೆಯುತ್ತೆ. ಸಿಇಟಿ‌ ಪರೀಕ್ಷೆಗೆ ಅಗತ್ಯ ಮುಂಜಾಗ್ರತಾ ಕ್ರಮ […]

CET ಪರೀಕ್ಷೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ಏನು ಹೇಳಿದ್ರು?
Follow us on

ಬೆಂಗಳೂರು: ಕ್ರೂರಿ ಕೊರೊನಾದಿಂದ ನಿಗದಿಯಾಗಿದ್ದ ವಿದ್ಯಾರ್ಥಿಗಳ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೆಪ್ಟೆಂಬರ್ ಮೊದಲ ವಾರದಿಂದ ಪದವಿ ಕಾಲೇಜು ಆರಂಭಿಸಲಾಗುತ್ತೆ. ಮೇ 31ರೊಳಗೆ ಆನ್​ಲೈನ್ ಮೂಲಕ ಪಾಠ ಮುಗಿಸಬೇಕು. ಈ ಬಗ್ಗೆ ಪದವಿ, ಇಂಜಿನಿಯರಿಂಗ್ ಕಾಲೇಜುಗಳಿಗೆ ಸೂಚಿಸಲಾಗಿದೆ. ಪರೀಕ್ಷೆ, ಫಲಿತಾಂಶ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಜುಲೈ 30, 31ರಂದು ಸಿಇಟಿ ಪರೀಕ್ಷೆ:

ಜುಲೈ 30, 31ರಂದು ಸಿಇಟಿ ಪರೀಕ್ಷೆ ನಡೆಯುತ್ತೆ. ಸಿಇಟಿ‌ ಪರೀಕ್ಷೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ತೇವೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಕಡ್ಡಾಯ. ಕೊಠಡಿಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನ ಕೂರಿಸಬೇಕು. ಈ ಬಾರಿ ಸಿಇಟಿಗೆ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿರುತ್ತವೆ. ಇಂದಿನಿಂದ ಆಫ್ ಲೈನ್​ನಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತೆ.

ಆನ್​ಲೈನ್​ನಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ:

ಗೆಟ್ ಸಿಇಟಿ ಗೊ ಹೆಸರಿನಲ್ಲಿ ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಕೋರ್ಸ್ ಪ್ರಾರಂಭಿಸಲಾಗುತ್ತೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಸಹಾಯವಾಣಿಯನ್ನು ಕೂಡ ಪ್ರಾರಂಭ ಮಾಡಲಾಗಿದೆ.

ಸಿಇಟಿ, ನೀಟ್​ಗೆ ಅನುಕೂಲವಾಗುವ ವಿಡಿಯೋ, ಟೆಸ್ಟ್, ಪಠ್ಯಗಳ ವಿವರ ಕೋರ್ಸ್​ನಲ್ಲಿರುತ್ತೆ. ಈಗಾಗಲೇ ಆನ್​ಲೈನ್​ನಲ್ಲಿ ಕೋರ್ಸ್ ಪ್ರಾರಂಭ ಆಗಿದೆ. 1,60,510 ಜನ ಈವರೆಗೆ ಪೇಜ್ ನೋಡಿದ್ದಾರೆ. 76,913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ಆ್ಯಪ್ ಮೂಲಕ ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. 51,975 ವಿದ್ಯಾರ್ಥಿಗಳು ಈಗಾಗಲೇ ಟೆಸ್ಟ್ ತೆಗೆದುಕೊಂಡಿದ್ದಾರೆ.

ದ್ವೀತಿಯ PUC ಇಂಗ್ಲಿಷ್ ಪರೀಕ್ಷೆ ಆದಷ್ಟು ಬೇಗ ಮಾಡುತ್ತೇವೆ. ವೇಳಾಪಟ್ಟಿಯನ್ನು ಪಿಯು ಮಂಡಳಿ ಘೋಷಣೆ ಮಾಡುತ್ತೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.

Published On - 1:33 pm, Wed, 13 May 20