BPL Card: ಬಿಪಿಎಲ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ; ಮಾನದಂಡಗಳೇನು?

ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸುವವರಿಗೆ ಹಿಂದಿನ ಮಾನದಂಡಗಳನ್ನೇ ಅನುಸರಿಸಲಾಗುತ್ತದೆ. ಅವುಗಳ ವಿವರ ಇಲ್ಲಿದೆ.

BPL Card: ಬಿಪಿಎಲ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ; ಮಾನದಂಡಗಳೇನು?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jun 07, 2023 | 2:31 PM

ಬೆಂಗಳೂರು: ಬಿಪಿಎಲ್​ ಕಾರ್ಡ್​ಗೆ (BPL Card) ಹೊಸದಾಗಿ ಅರ್ಜಿ ಕರೆಯಲು ಕರ್ನಾಟಕ ರಾಜ್ಯ ಆಹಾರ ಇಲಾಖೆ ಮುಂದಾಗಿದ್ದು, ಈ ಕುರಿತು ಆಹಾರ ಇಲಾಖೆಯ ಹೆಚ್ಚುವರಿ ನಿರ್ಧೆಶಕ ಘನೇಂದ್ರ ಕುಮಾರ್ ಸೋಮವಾರ ಮಾಹಿತಿ ನೀಡಿದ್ದಾರೆ. ಸದ್ಯ ಆಹಾರ ಇಲಾಖೆಯ ವೆಬ್​​ಸೈಟ್ ಡೆವಲಪ್ ಮಾಡುತ್ತಿದ್ದೇವೆ. ಡೆವೆಲಪ್ ಆದ ತಕ್ಷಣ ಅರ್ಜಿ ಅಹ್ವಾನ ಮಾಡುತ್ತೇವೆ. ಅರ್ಜಿ ಸಲ್ಲಿಸುವವರಿಗೆ ಹೊಸದಾಗಿ ಯಾವುದೇ ಮಾನದಂಡ ಇಲ್ಲ. ಬದಲಾಗಿ ಈ ಹಿಂದೆ ಇದ್ದಂತಹ ಮಾನದಂಡಗಳನ್ನೇ ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್​​ಗೆ ಅರ್ಜಿ ಸಲ್ಲಿಸಲು ಮಾನದಂಡಗಳೇನು?

  • ಸರ್ಕಾರಿ ನೌಕರರಾಗಿರಬಾರದು
  • ಸರ್ಕಾರಕ್ಕೆ ಯಾವುದೇ ರೀತಿ ತೆರಿಗೆ ಪಾವತಿಸುವವರಾಗಿರಬಾರದು
  • ಮನೆಯ ಆದಾಯ ಒಂದು ಲಕ್ಷದ 20 ಸಾವಿರ ರೂ. ಮೀರಿರಬಾರದು
  • 3 ಹೆಕ್ಟೇರ್ ಗಿಂತ ಹೆಚ್ಚು ಜಮೀನು ಇರಬಾರದು
  • ಯಾವುದೇ ಕಮರ್ಷಿಯಲ್ ವಾಹನಗಳಿರಬಾರದು

ಪ್ರಸ್ತುತ ಈ ಹಿಂದೆ ಇದ್ದಂತಹ ಆಹಾರ ಇಲಾಖೆಯ ವೆಬ್​​ಸೈಟ್​​ನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುತ್ತದೆ. ಎಷ್ಟು ಅರ್ಜಿಗಳನ್ನು ಅಂತಿಮಗೊಳಿಸಬೇಕು ಎಂಬ ಬಗ್ಗೆ ಸರ್ಕಾರದಿಂದ ಒಪ್ಪಿಗೆ ಪಡೆಯಬೇಕಿದೆ. ಕಳೆದ ಫೆಬ್ರವರಿಯವರೆಗೆ 2 ಲಕ್ಷದ 95 ಸಾವಿರದಷ್ಡು ಅರ್ಜಿಗಳು ಬಂದಿದೆ. ಅವುಗಳನ್ನು ದೃಡೀಕರಣ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BPL Card: ಬಿಪಿಎಲ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಸ್ವೀಕರಿಸಲಿದೆ ಆಹಾರ ಇಲಾಖೆ

ದೃಢೀಕರಣ ಪ್ರಕ್ರಿಯೆಯ ನಂತರವಷ್ಟೇ ಪಡಿತರ ಚೀಟಿಗಳನ್ನ ಕೊಡಲಾಗುತ್ತದೆ. ಜುಲೈ 1 ರಿಂದ 10 ಕೆಜಿ ಅಕ್ಕಿ ಕೊಡುವುದಕ್ಕೆ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಅಕ್ಕಿಯನ್ನು ಐಎಫ್​ಸಿಎ ಯಿಂದ ತರಿಸಿಕೊಳ್ಳಲಾಗುತ್ತದೆ. ಒಂದು ತಿಂಗಳಿಗೆ 2 ಲಕ್ಷದ 30 ಸಾವಿರ ಮೆಟ್ರಿಕ್ ಟನ್ ನಷ್ಟು ಅಕ್ಕಿಬೇಕಾಗುತ್ತದೆ. ಇದಕ್ಕೆ ಸರಿಸುಮಾರು 600 ಕೋಟಿಯಷ್ಟು ಹಣ ಖರ್ಚಾಗುವ ಸಾಧ್ಯತೆ ಇದೆ. ಈ ಹಿಂದೆ 2 ಲಕ್ಷದ 17 ಲಕ್ಷ ಮೆಟ್ರಿಕ್ ಟನ್ ನಷ್ಟು ಅಕ್ಕಿಬೇಕಾಗುತ್ತಿತ್ತು. ಈ ಹಿಂದೆ 360 ಕೋಟಿಯಷ್ಟು ಹಣ ಖರ್ಚಾಗುತ್ತಿತ್ತು. ಇದೀಗಾ 240 ಕೋಟಿಯಷ್ಟು ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Mon, 5 June 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ