ದೊರೆಸ್ವಾಮಿ ಮನೆಗೆ ಅಮೂಲ್ಯ ಹೋಗಿದ್ದು ಏಕೆ? ಈಶ್ವರಪ್ಪ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್​ ತಾಳಕ್ಕೆ ತಕ್ಕಂತೆ ದೊರೆಸ್ವಾಮಿ ಕುಣಿಯುತ್ತಿದ್ದಾರೆ. ದೊರೆಸ್ವಾಮಿ ಅವರ ಮನೆಗೆ ಅಮೂಲ್ಯಾ ಹೋಗಿದ್ದು ಏಕೆ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯಾ ದೊರೆಸ್ವಾಮಿ ಅವರ ಮನೆಗೆ ಹೋಗಿದ್ದು ಏಕೆ? ಯಾಕೆ ಅಂತ ಅವರು ಸ್ಪಷ್ಟಪಡಿಸಲಿ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕ್ಷಮೆ ಕೇಳ್ತಾರಾ? ಮೋದಿ ಕೊಲೆಗಡುಕ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆಗೆ ಪಕ್ಷ ಸಿದ್ದರಾಮಯ್ಯ ಬಗ್ಗೆ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸುವ ಮೂಲಕ ಈಶ್ವರಪ್ಪ […]

ದೊರೆಸ್ವಾಮಿ ಮನೆಗೆ ಅಮೂಲ್ಯ ಹೋಗಿದ್ದು ಏಕೆ? ಈಶ್ವರಪ್ಪ ಪ್ರಶ್ನೆ
ಸಾಧು ಶ್ರೀನಾಥ್​

Updated on: Feb 28, 2020 | 4:18 PM

ಬೆಂಗಳೂರು: ಕಾಂಗ್ರೆಸ್​ ತಾಳಕ್ಕೆ ತಕ್ಕಂತೆ ದೊರೆಸ್ವಾಮಿ ಕುಣಿಯುತ್ತಿದ್ದಾರೆ. ದೊರೆಸ್ವಾಮಿ ಅವರ ಮನೆಗೆ ಅಮೂಲ್ಯಾ ಹೋಗಿದ್ದು ಏಕೆ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಪಾಕ್ ಪರ ಘೋಷಣೆ ಕೂಗಿ ಜೈಲು ಸೇರಿರುವ ಅಮೂಲ್ಯಾ ದೊರೆಸ್ವಾಮಿ ಅವರ ಮನೆಗೆ ಹೋಗಿದ್ದು ಏಕೆ? ಯಾಕೆ ಅಂತ ಅವರು ಸ್ಪಷ್ಟಪಡಿಸಲಿ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕ್ಷಮೆ ಕೇಳ್ತಾರಾ? ಮೋದಿ ಕೊಲೆಗಡುಕ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆಗೆ ಪಕ್ಷ ಸಿದ್ದರಾಮಯ್ಯ ಬಗ್ಗೆ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸುವ ಮೂಲಕ ಈಶ್ವರಪ್ಪ ಚಾಟಿ ಬೀಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us