ಸೋನಾ ಮಸೂರಿಗೆ ಜಿಯೋ ಟ್ಯಾಗ್ ಸಿಗುತ್ತಾ? ಸಿಕ್ಕಿದ್ರೆ ಮಾತ್ರ ರೈತರಿಗೆ ಬಂಪರ್!

ಸೋನಾ ಮಸೂರಿಗೆ ಜಿಯೋ ಟ್ಯಾಗ್ ಸಿಗುತ್ತಾ? ಸಿಕ್ಕಿದ್ರೆ ಮಾತ್ರ ರೈತರಿಗೆ ಬಂಪರ್!

ರಾಯಚೂರು: ಸೋನಾ ಮಸೂರಿ ಅಕ್ಕಿ. ಈ ಅಕ್ಕಿಯಿಂದ ಅನ್ನ ಮಾಡಿದ್ರೆ ಅದರ ರುಚಿ ಸೂಪರ್. ಇದರ ಬೆಲೆ ಗಗನಕ್ಕೇರಿದ್ರು ಕೆಲವರು ಈ ಅಕ್ಕಿಯನ್ನೇ ಇಷ್ಟ ಪಡೋದು. ಇದನ್ನೇ ದಿನ ನಿತ್ಯ ಬಳಸೋದು. ಹೀಗೆ ಸಾಕಷ್ಟು ಕಾರಣಗಳಿಂದ ಈ ಸೋನಾ ಮಸೂರಿ ಅಕ್ಕಿಗೇ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಇಷ್ಟು ಡಿಮ್ಯಾಂಡ್ ಇರುವ ಈ ಅಕ್ಕಿ ಅಂತಾರಾಷ್ಟ್ರೀಯ ಮಟ್ಟ ತಲುಪಲು ರಾಯಚೂರು ಕೃಷಿ ವಿವಿ  ಪ್ಲಾನ್ ಮಾಡುತ್ತಿದೆ. ಅಂದಹಾಗೇ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ 8 ಲಕ್ಷ ಎಕರೆಗೂ ಅಧಿಕ […]

sadhu srinath

|

Feb 28, 2020 | 6:25 PM

ರಾಯಚೂರು: ಸೋನಾ ಮಸೂರಿ ಅಕ್ಕಿ. ಈ ಅಕ್ಕಿಯಿಂದ ಅನ್ನ ಮಾಡಿದ್ರೆ ಅದರ ರುಚಿ ಸೂಪರ್. ಇದರ ಬೆಲೆ ಗಗನಕ್ಕೇರಿದ್ರು ಕೆಲವರು ಈ ಅಕ್ಕಿಯನ್ನೇ ಇಷ್ಟ ಪಡೋದು. ಇದನ್ನೇ ದಿನ ನಿತ್ಯ ಬಳಸೋದು. ಹೀಗೆ ಸಾಕಷ್ಟು ಕಾರಣಗಳಿಂದ ಈ ಸೋನಾ ಮಸೂರಿ ಅಕ್ಕಿಗೇ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಇಷ್ಟು ಡಿಮ್ಯಾಂಡ್ ಇರುವ ಈ ಅಕ್ಕಿ ಅಂತಾರಾಷ್ಟ್ರೀಯ ಮಟ್ಟ ತಲುಪಲು ರಾಯಚೂರು ಕೃಷಿ ವಿವಿ  ಪ್ಲಾನ್ ಮಾಡುತ್ತಿದೆ.

ಅಂದಹಾಗೇ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ 8 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಲಕ್ಷಾಂತರ ರೈತರು ಸೋನಾ ಮಸೂರಿ ಭತ್ತವನ್ನೇ ಬೆಳೆಯುತ್ತಾರೆ. ಅದರಲ್ಲೂ ಗಂಗಾವತಿ ಭಾಗದಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತದ ಅಕ್ಕಿಗೆ ಭಾರಿ ಬೇಡಿಕೆ ಇದೆ.

ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಪ್ಲಾನ್: ಹೀಗಾಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ ಈ ಸೋನಾ ಮಸೂರಿ ಅಕ್ಕಿಗೆ ಅಂತಾರಾಷ್ಟ್ರೀಯ ಮನ್ನಣೆ ಜಿಯೋ ಟ್ಯಾಗ್ ಪಡೆಯಲು ಪ್ಲಾನ್ ಮಾಡಿದೆ. ಒಂದು ವೇಳೆ ಸೋನಾ ಮಸೂರಿ ಅಕ್ಕಿಗೆ ಜಿಯೋ ಟ್ಯಾಗ್ ಮನ್ನಣೆ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋನಾ ಮಸೂರಿ ಅಕ್ಕಿ ಮಿಂಚಲಿದೆ. ಇಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಯುವ ಕೆಂಪು ಈರುಳ್ಳಿಗೂ ಸಹ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ವಿವಿ ಸಿದ್ಧತೆ ನಡೆಸ್ತಿದೆ.

ಇನ್ನು ಪ್ರತಿ ವರ್ಷವೂ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಸೋನಾ ಮಸೂರಿ ಅಕ್ಕಿ ಉತ್ಪತ್ತಿಯಾಗುತ್ತಿದೆ. ಪ್ರಸಕ್ತ ವರ್ಷ ಪ್ರತಿ ಕ್ವಿಂಟಲ್‌ಗೆ 4,500 ರೂ ವರೆಗೂ ಮಾರಾಟವಾಗ್ತಿದೆ. ಅದ್ರಲ್ಲೂ, ಗಂಗಾವತಿ ಸೋನಾ ಮಸೂರಿ ಅಕ್ಕಿಯಂತೂ ದೇಶದ ವಿವಿಧ ರಾಜ್ಯಗಳಿಗೆ ಭಾರಿ ಪ್ರಮಾಣದಲ್ಲಿ ಪೂರೈಕೆಯಾಗ್ತಿದೆ.

ಈ ನಡುವೆ ಸೋನಾ ಮಸೂರಿ ಅಕ್ಕಿಗೆ ಜಿಯೋ ಟ್ಯಾಗ್ ದೊರಕಿದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಈ ಅಕ್ಕಿ ಲಗ್ಗೆ ಇಡಲಿದೆ. ವಿದೇಶಗಳಲ್ಲೂ ಈ ಅಕ್ಕಿ ಮಾರಾಟ ಆರಂಭವಾದ್ರೆ ರೈತರಿಗೆ ಭರ್ಜರಿ ಲಾಭ ಆಗಲಿದೆ. ಒಟ್ನಲ್ಲಿ ಸೋನಾ ಮಸೂರಿ ಅಕ್ಕಿ ಮತ್ತು ಕೆಂಪು ಈರುಳ್ಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದ್ರೆ ರೈತರ ಭಾಗ್ಯದ ಬಾಗಿಲು ಓಪನ್ ಆಗೋದಂತು ಪಕ್ಕಾ.

Follow us on

Related Stories

Most Read Stories

Click on your DTH Provider to Add TV9 Kannada