ಪತ್ನಿ ಹಾಗೂ ಮಕ್ಕಳ ಕಣ್ಣಿಗೆ ಮಣ್ಣೆರಚಿ ಪರಸ್ತ್ರೀ ಸಹವಾಸ.. ತಗಲಾಕ್ಕೊಂಡ್ರಾ ಇಂಜಿನಿಯರ್?

|

Updated on: Jan 07, 2021 | 9:43 AM

ಕೊಪ್ಪಳದ ಬಿ.ಟಿ. ಪಾಟೀಲ್ ನಗರದಲ್ಲಿ ಜಡೆ ಜಗಳ.. ಪತ್ನಿ ಹಾಗೂ ಮಕ್ಕಳಿಂದ ಬಯಲಾಯ್ತಾ ಕಾರ್ಯನಿರ್ವಾಹಕ ಇಂಜಿನಿಯರ್​ನ ಅಕ್ರಮ ಸಂಬಂಧ.

ಪತ್ನಿ ಹಾಗೂ ಮಕ್ಕಳ ಕಣ್ಣಿಗೆ ಮಣ್ಣೆರಚಿ ಪರಸ್ತ್ರೀ ಸಹವಾಸ.. ತಗಲಾಕ್ಕೊಂಡ್ರಾ ಇಂಜಿನಿಯರ್?
ಭಾಗ್ಯಲಕ್ಷ್ಮೀ ಮತ್ತು ಶೀಲಾಳ ಜಡೆಜಗಳ
Follow us on

ಕೊಪ್ಪಳ: ಪತ್ನಿ ಹಾಗೂ ಮಕ್ಕಳ ಕಣ್ಣಿಗೆ ಮಣ್ಣೆರಚಿ ಪರಸ್ತ್ರೀ ಸಹವಾಸ ಮಾಡಿದ್ದ ಕಾರ್ಯನಿರ್ವಾಹಕ ಇಂಜನಿಯರ್​ನ ಅನೈತಿಕ ಸಂಬಂಧ ಬಯಲಾಗಿದೆ. ಕೊಪ್ಪಳದ ಸಣ್ಣ ನೀರವಾರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ್ ಕುಮಾರ್ ಗುಪ್ತಾ ಮೇಲೆ ಇಂತಹದೊಂದು ಆರೋಪ ಕೇಳಿ ಬಂದಿದೆ.

ಕೊಳದ ಬಿ.ಟಿ. ಪಾಟೀಲ್ ನಗರದ ವಿನೋದ್ ಕುಮಾರ್ ಗುಪ್ತಾ ಮನೆಯಲ್ಲಿ ಜಡೆ ಜಗಳ ನಡೆದಿದೆ. ವಿನೋದ್ ಮತ್ತೊಬ್ಬ ಮಹಿಳೆಯೊಂದಿಗೆ ಇರೋದನ್ನ ಪತ್ನಿ ಭಾಗ್ಯಲಕ್ಷ್ಮೀ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ವಿನೋದ್​ನೊಂದಿಗೆ ಶೀಲಾ ಎಂಬ ಮಹಿಳೆ ಸಿಕ್ಕಿಹಾಕಿಕೊಂಡಿದ್ದಾಳೆ.

ಮಹಿಳೆಯನ್ನು ನೋಡಿ ಭಾಗ್ಯಲಕ್ಷ್ಮೀ ಚಪ್ಪಲಿ ಏಟು ನೀಡಿದ್ದಾಳೆ. ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಈ ವೇಳೆ ಶೀಲಾ ನಂದೇನು ತಪ್ಪಿಲ್ಲ ಎಂದು ಗೋಳಾಡಿದ್ದಾಳೆ. ಬಳಿಕ ವಿನೋದ್ ಪತ್ನಿ ಮತ್ತು ಮಕ್ಕಳು, ಶೀಲಾಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪತ್ನಿ ಮನೆಗೆ ಬರುತ್ತಿದ್ದಂತೆ ವಿನೋದ್ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಪತ್ನಿ ಹಾಗೂ ಮಕ್ಕಳಿಂದ ಕಾರ್ಯನಿರ್ವಾಹಕ ಇಂಜಿನಿಯರ್ ಬಣ್ಣ ಬಯಲಾಗಿದೆ.

ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು