ಮೊದಲು ಕೋರ್ಟ್ನಲ್ಲಿ ಸಿಡಿ ಯುವತಿಯ ಹೇಳಿಕೆ ದಾಖಲಿಸಲು ಜಡ್ಜ್ ಆದೇಶ
ತನಿಖಾಧಿಕಾರಿ ಮತ್ತು ವಕೀಲ ಯುವತಿ ಪರ ವಕೀಲ ಕೆ.ಎನ್. ಜಗದೀಶ್ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದಾರೆ. ನ್ಯಾಯಾಧೀಶ ಬಾಲಗೋಪಾಲ್ ಅವರ ಆಗಮನದ ನಂತರ ವಕೀಲ ಜಗದೀಶ್ ತಮ್ಮ ವಾದ ಮಂಡಿಸಿದ್ದಾರೆ.
ಬೆಂಗಳೂರು: ಮೊದಲು ಸಿಆರ್‌ಪಿಸಿ 164 ಪ್ರಕಾರ ಹೇಳಿಕೆ ದಾಖಲು ಮಾಡುತ್ತೇವೆ. ನಂತರ ಯುವತಿಯ ಹೇಳಿಕೆ ಪಡೆಯುತ್ತೇವೆ. ಹೇಳಿಕೆ ಪಡೆದ ಬಳಿಕ ತನಿಖಾಧಿಕಾರಿಗೆ ಒಪ್ಪಿಸುತ್ತೇವೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ವೇಳೆ 24ನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದಾರೆ. ಈವೇಳೆ ಕೋರ್ಟ್ನಲ್ಲಿ ಯುವತಿ ಹೇಳಿಕೆ ದಾಖಲಿಸಲು ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗಿಲ್ಲ.
ಎಸ್ಐಟಿ ಹಾಗೂ ತನಿಖಾಧಿಕಾರಿ ಮೇಲೆ ಸಂತ್ರಸ್ಥೆಗೆ ನಂಬಿಕೆ ಇಲ್ಲ ಎಂದು ವಕೀಲ ಜಗದೀಶ್ ವಾದಿಸಿದ್ದಾರೆ. ಇದೇ ವೇಳೆ ತನಿಖಾಧಿಕಾರಿ ಕವಿತಾ ‘ನಾವು ಇದುವರೆಗೂ ಯುವತಿಯ ಮುಖ ನೋಡಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ಮೊದಲು ಯುವತಿಯ ಹೇಳಿಕೆ ಪಡೆಯುತ್ತೇವೆ, ನಂತರ ತನಿಖಾಧಿಕಾರಿಗಳು ಮುಂದಿನ ಹೇಳಿಕೆ ಪಡೆಯಲಿ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಸಂತ್ರಸ್ಥೆಯನ್ನು ಎಂದು ಹಾಜರುಪಡಿಸುತ್ತೀರಾ ಎಂದು ಯುವತಿ ಪರ ವಕೀಲ ಜಗದೀಶ್ಗೆ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಈ ವೇಳೆ ನ್ಯಾಯಾಲಯದಲ್ಲಿದ್ದ ಇತರ ಎಲ್ಲರನ್ನೂ ಹೊರಗೆ ಕಳುಹಿಸಿ, ಕೇವಲ ಯುವತಿ ಪರ ವಕೀಲರು, ತನಿಖಾಧಿಕಾರಿಗಳನ್ನು ಮಾತ್ರ ಕೋರ್ಟ್ ಹಾಲ್ನಲ್ಲಿ ಇರಿಸಿಕೊಂಡಿದ್ದಾರೆ. ಯುವತಿ ಹಾಜರಾಗುವ ಸಮಯದ ಬಗ್ಗೆ ಗೌಪ್ಯತೆ ಕಾಪಾಡಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಕ್ರಮ ಕೈಗೊಂಡಿದ್ದಾರೆ. ನಂತರ ಲಿಖಿತ ರೂಪದಲ್ಲಿ ನ್ಯಾಯಾಧೀಶರಿಗೆ ದಿನಾಂಕ ಸಮಯವನ್ನು ತಿಳಿಸಿ ವಕೀಲ ಜಗದೀಶ್ ಕೋರ್ಟ್ನಿಂದ ಹೊರಬಂದಿದ್ದಾರೆ.
ಪ್ರಕರಣ 24ನೇ ಎಸಿಎಂಎಂ ಕೋರ್ಟ್‌ಗೆ ರವಾನೆಯಾಗಿದೆ. ತನಿಖಾಧಿಕಾರಿ ಮತ್ತು ವಕೀಲ ಯುವತಿ ಪರ ವಕೀಲ ಕೆ.ಎನ್. ಜಗದೀಶ್ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದಾರೆ. ನ್ಯಾಯಾಧೀಶ ಬಾಲಗೋಪಾಲ್ ಅವರ ಆಗಮನದ ನಂತರ ವಕೀಲ ಜಗದೀಶ್ ತಮ್ಮ ವಾದ ಮಂಡಿಸಿದ್ದಾರೆ.
ಸಿಡಿ ಯುವತಿ ಪರ ವಕೀಲ ಜಗದೀಶ್, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಯುವತಿ ಹೇಳಿಕೆ ದಾಖಲಿಸಲು ಅನುಮತಿ ನೀಡಲು ಮನವಿ ಮಾಡಿದ್ದಾರೆ. ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಎಸ್‌ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ ಎಂದು ಯುವತಿ ಪರ ವಕೀಲರಾದ ಕೆ.ಎನ್.ಜಗದೀಶ್ ವಾದಿಸಿದ್ದಾರೆ.
ಇದನ್ನೂ ಓದಿ: ವಿಚಾರಣೆ ವೇಳೆ ತಡಬಡಾಯಿಸಿದ ರಮೇಶ್ ಜಾರಕಿಹೊಳಿ; ಕೆಲ ಪ್ರಶ್ನೆಗಳಿಗೆ ಉತ್ತರಿಸಲು 4 ದಿನಗಳ ಕಾಲಾವಕಾಶ ಕೋರಿಕೆ
ಕೋರ್ಟ್‌ಗೆ ಯುವತಿಯ ಕರೆತರುವುದಕ್ಕೆ ಅನುಮತಿ ಕೋರಿ ಕೋರ್ಟ್ ರಿಜಿಸ್ಟ್ರಾರ್‌ಗೆ ವಕೀಲ ಜಗದೀಶ್ ಮನವಿ
Published On - 12:43 pm, Tue, 30 March 21