ಕೋಲಾರ: ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಎಸ್ಎಫ್ಐ ಸಂಘಟನೆಯ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ಎದುರು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆ ಶ್ರೀಕಾಂತ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ನರಸಾಪುರ ಬಳಿಯಿರುವ ಕಂಪನಿಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸಂಬಳ ನೀಡದ ಕಾರಣಕ್ಕೆ ಕಂಪನಿಗೆ ಸಂಬಂಧಿಸಿದ ವಸ್ತುಗಳನ್ನು ಇತ್ತೀಚೆಗೆ ಹಾಳು ಮಾಡಿದ್ದರು. ಈ ದಾಂಧಲೆಗೆ ಮೂಲ ಕಾರಣ ಎಸ್ಎಫ್ಐ ಸಂಘಟನೆಯ (Student Federation of India- SFI) ಅಧ್ಯಕ್ಷನೆಂದು ಕೇಳಿಬಂದಿದ್ದು, ಪೊಲೀಸರು ಆತನನ್ನು ಅರೆಸ್ಟ್, ಮಾಡಿದ್ದಾರೆ.
ಒಂದು ಗಂಟೆ ಗಲಾಟೆಗೆ 437 ಕೋಟಿ ರೂ. ನಷ್ಟ