ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಬಳಿಯಿರುವ ಖಾಸಗಿ ಗೆಸ್ಟ್ ಹೌಸ್ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಈ ಕುರಿತು, ಯುವತಿಯಿಂದ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಏನಿದು ಪ್ರಕರಣ?
ನೌಕಾಪಡೆಯ ಅಧಿಕಾರಿಯೊಬ್ಬರ ಬೀಳ್ಕೊಡುಗೆ ಪಾರ್ಟಿಗೆ ಯವತಿಯೊಬ್ಬಳು ಖಾಸಗಿ ಗೆಸ್ಟ್ ಹೌಸ್ಗೆ ಬಂದಿದ್ದಳು. ತಮ್ಮ ಸ್ನೇಹಿತರೊಟ್ಟಿಗೆ ಯುವತಿ ಬಂದಿದ್ದಳು. ಈ ವೇಳೆ, ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನಂತೆ.
ಸದ್ಯ, ಈ ಕುರಿತು, ಸಂತ್ರಸ್ತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ದೂರಿನನ್ವಯ ಅತ್ಯಾಚಾರ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಬಂಧನವಾಗಿದೆ.
Published On - 6:55 pm, Mon, 8 February 21