ಸಂಬಂಧಿಕರ ಮನೆಗೆ ಬಂದಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

ಮಾನಸಿಕ ಖಿನ್ನತೆ ಮತ್ತು ಅನಾರೋಗ್ಯ ಹಿನ್ನೆಲೆಯಲ್ಲಿ ನದಿಗೆ ಹಾರಿ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ನಂಜನಗೂಡಿನ ಹೆಜ್ಜಿಗೆ ಬ್ರಿಡ್ಜ್ ಬಳಿ ನಡೆದಿದೆ.

ಸಂಬಂಧಿಕರ ಮನೆಗೆ ಬಂದಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ
ಹೆಜ್ಜಿಗೆ ಬ್ರಿಡ್ಜ್‌ನಿಂದ ಕಪಿಲಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Updated on: Dec 22, 2020 | 8:13 AM

ಮೈಸೂರು: ಜಿಲ್ಲೆಯ ನಂಜನಗೂಡಿನ ಹೆಜ್ಜಿಗೆ ಬ್ರಿಡ್ಜ್‌ನಿಂದ ಕಪಿಲಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸವಿತಾ(48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಮೈಸೂರಿನ ವಿಜಯನಗರ ನಿವಾಸಿ ಸವಿತಾ ನಂಜನಗೂಡಿನ ಕಾಳಿಹುಂಡಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ರು. ಆದ್ರೆ ಏಕಾಏಕಿ ದೃಢ ನಿರ್ಧಾರ ಮಾಡಿ ನದಿಗೆ ಹಾರಿದ್ದಾರೆ. ಈ ವೇಳೆ ಸ್ಥಳೀಯರು ಆಕೆಯನ್ನು ರಕ್ಷಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಸ್ಥಳೀಯರ ಪ್ರಯತ್ನ ವಿಫಲವಾಗಿದೆ.

ಹೆಜ್ಜಿಗೆ ಬ್ರಿಡ್ಜ್‌ನಿಂದ ಕಪಿಲಾ ನದಿಗೆ ಹಾರಿ ಸವಿತಾ ಪ್ರಾಣ ಕಳೆದುಕೊಂಡಿದ್ದಾರೆ. ಇವರ ಈ ನಿರ್ಧಾರಕ್ಕೆ ಮಾನಸಿಕ ಖಿನ್ನತೆ ಮತ್ತು ಅನಾರೋಗ್ಯ ಕಾರಣ ಎನ್ನಲಾಗಿದೆ. ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಶಾಲಾ ಬಾಲಕಿ, ಸ್ಥಳೀಯರಿಂದ ರಕ್ಷಣೆ..