ಕೈ ಕಾರ್ಯಕರ್ತನ ಮನೆಯಲ್ಲಿ ಹಂಚಲು ತಂದಿಟ್ಟಿದ್ದ 120 ಕುಕ್ಕರ್ ಜಪ್ತಿ.. ಎಲ್ಲಿ?
ಗ್ರಾಮ ಪಂಚಾಯತಿ ಚುನಾವಣೆ 2020 ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿಟ್ಟಿದ್ದ 120 ಕುಕ್ಕರ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತ ನಾಗು ಮನೆಯಿಂದ ಜಪ್ತಿ ಮಾಡಲಾಗಿದೆ.
ತುಮಕೂರು: ರಾಜ್ಯದ ಅತಿ ದೊಡ್ಡ ಚುನಾವಣೆ ಅಂತಲೇ ಕರೆಸಿಕೊಳ್ಳುವ ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಇದಕ್ಕಾಗಿ ಅಭ್ಯರ್ಥಿಗಳು ಭರ್ಜರಿ ಸಿದ್ಧತೆಯನ್ನೂ ಸಹ ಮಾಡಿಕೊಂಡಿದ್ದಾರೆ. ಈ ನಡುವೆ ಮತದಾರರಿಗೆ ಹಂಚಲು ತಂದಿಟ್ಟಿದ್ದ 120 ಕುಕ್ಕರ್ ಜಪ್ತಿ ಮಾಡಲಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಪಡುವಗೆರೆ ಗ್ರಾಮದ ಮನೆಯೊಂದರಲ್ಲಿ ಇಟ್ಟಿದ್ದ 120 ಕುಕ್ಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಮತದಾರರಿಗೆ 30 ಕುಕ್ಕರ್‌ಗಳನ್ನು ಹಂಚಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಕಾಂಗ್ರೆಸ್ ಕಾರ್ಯಕರ್ತ ನಾಗು ಮನೆಯಲ್ಲಿ ಈ ಕುಕ್ಕರ್ಗಳು ಸಿಕ್ಕಿದ್ದು ಇದರ ಹಿಂದೆ ಇರುವ ಕೈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ನಾಗುನನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಇಂದು ಮೊದಲ ಹಂತದ ಲೋಕಲ್ ಫೈಟ್! ನಿರ್ಧಾರವಾಗಲಿದೆ 1,17,383 ಅಭ್ಯರ್ಥಿಗಳ ಹಣೆಬರಹ