ಹಾಸನ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಕ್ಕಬೂವನಹಳ್ಳಿ ಬಳಿ ನಡೆದಿದೆ. ಗಾಯತ್ರಿ (30) ಎಂಬಾಕೆಯನ್ನು ಮದುವೆಯಾಗುವಂತೆ ಮಂಜುನಾಥ್ ಒತ್ತಾಯಿಸುತ್ತಿದ್ದ. ಅದಾಗಲೆ ಮದುವೆಯಾಗಿ ಮಕ್ಕಳಿದ್ದ ಗಾಯತ್ರಿ, ವಿವಾಹಿತನೊಬ್ಬ ಮುಂದಿಟ್ಟ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು.
ಇದೇ ಕಾರಣಕ್ಕಾಗಿ ಗಾಯತ್ರಿ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಅಡ್ಡಕಟ್ಟಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲ ವರ್ಷಗಳಿಂದ ಗಾಯತ್ರಿ ಹಾಗೂ ಮಂಜುನಾಥ್ ನಡುವೆ ಪರಿಚಯವಿತ್ತು ಎನ್ನಲಾಗಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆದರಲ್ಯಾಂಡ್ಸ್ನಿಂದ ಸಿಲಿಕಾನ್ ಸಿಟಿಗೆ.. ಬಟ್ಟೆಗಳಲ್ಲಿ ಮಾದಕ ವಸ್ತುಗಳನ್ನ ತರಿಸುತ್ತಿದ್ದ ಕಿಲಾಡಿ ಜೋಡಿ ಅರೆಸ್ಟ್