ಅಪ್ರಾಪ್ತ ಬಾಲಕಿಯ ಮದುವೆಯಾಗಿ ಹತ್ಯೆಗೈದು.. ಮನೆಯಲ್ಲೇ ಬಚ್ಚಿಟ್ಟ ನರ ಹಂತಕ ಪತಿ!
ಪತ್ನಿಯನ್ನು ಹತ್ಯೆಗೈದು ಮನೆಯಲ್ಲಿ ಹೂತಿಟ್ಟಿದ್ದ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ನಡೆದಿದೆ. ನರಸಿಂಹಮೂರ್ತಿ ಪತ್ನಿಯನ್ನು ಹತ್ಯೆಗೈದ ಪತಿ.
ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿ, ಬಳಿಕ ಪಾಪಿ ಪತಿರಾಯ ಆಕೆಯನ್ನು ಹತ್ಯೆಗೈದು ಮನೆಯಲ್ಲಿ ಹೂತಿಟ್ಟಿದ್ದ ಅಮಾನುಷ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ನಡೆದಿದೆ. ನರಸಿಂಹಮೂರ್ತಿ ಪತ್ನಿಯನ್ನು ಹತ್ಯೆಗೈದವ.
ಗಾರೆ ಕೆಲಸ ಮಾಡಿಕೊಂಡಿದ್ದ ನರಸಿಂಹಮೂರ್ತಿ, 9 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ನಲ್ಲಿ 16 ವರ್ಷದ ಅಪ್ರಾಪ್ತೆ, ಸ್ವಂತ ಅಕ್ಕನ ಮಗಳನ್ನೇ ಓಡಿಸಿಕೊಂಡು ಹೋಗಿ ವಿವಾಹವಾಗಿದ್ದ. ಅಪ್ರಾಪ್ತೆಯ ತಂದೆ ಹನುಮಂತರಾಯಪ್ಪ ನಾಪತ್ತೆ ದೂರು ದಾಖಲಿಸಿದ್ದರು.
ಈ ಮಧ್ಯೆ, 15 ದಿನಗಳ ಹಿಂದೆ ಪತ್ನಿ ಹತ್ಯೆಗೈದು ಮನೆಯಲ್ಲಿ ಹೂತಿಟ್ಟು ಕಳೆದ 5 ದಿನಗಳಿಂದ ನರಸಿಂಹಮೂರ್ತಿ ನಾಪತ್ತೆಯಾಗಿದ್ದಾನೆ. ಗ್ರಾಮಕ್ಕೆ ಎಸಿ ಸೋಮಪ್ಪ ಖಡಕೋಳ ಹಾಗೂ ತಹಶೀಲ್ದಾರ್ ವಿಶ್ವನಾಥ, ಮಧುಗಿರಿ DySP ಪ್ರವೀಣ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಈಗ ಮನೆಯಲ್ಲಿ ಹೂತಿಟ್ಟಿದ್ದ ಶವವನ್ನು ಪೊಲೀಸರು ಹೊರತೆಗೆದು ಪೋಸ್ಟ್‌ಮಾರ್ಟಂಗೆ ಕಳಿಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿ ನರಸಿಂಹಮೂರ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಂಜುನಾಥ ಹಾಗೂ ಸತೀಶ್ ಎಂಬ ಇಬ್ಬರು ಸಹೋದರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ: ವರ್ಷಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?