National Farmers Day 2020 | ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಸಂರಕ್ಷಣಾ ಕಾಯ್ದೆಯ ಕರಡು ಹೀಗಿದೆ

ಈಗಾಗಲೇ ಅಸ್ತಿತ್ವದಲ್ಲಿರುವ 1966ರ ಬೀಜ ಸಂರಕ್ಷಣಾ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ಮಸೂದೆ ಮೂಲಕ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರದ ನಿರ್ಧಾರದ ಪರ-ವಿರೋಧದ ಚರ್ಚೆಗಳು ಗರಿಗೆದರಿದವು.

National Farmers Day 2020 | ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಸಂರಕ್ಷಣಾ ಕಾಯ್ದೆಯ ಕರಡು ಹೀಗಿದೆ
ಸಾಂದರ್ಭಿಕ ಚಿತ್ರ
Follow us
sandhya thejappa
|

Updated on:Dec 24, 2020 | 9:17 AM

ಬೆಂಗಳೂರು: ದೇಶದ ಬೆನ್ನೆಲುಬು ರೈತರಿಗೆ ನೆರವಾಗುವ ದೃಷ್ಟಿಕೋನದಲ್ಲಿ ಹಲವು ಕಾಯ್ದೆಗಳು ಜಾರಿಗೆ ಬರುತ್ತಾ ಇರುತ್ತದೆ. ಕೆಲವೊಂದು ಕಾಯ್ದೆಗಳು ವಿಶ್ವಾಸಾರ್ಹವಾದರೇ ಇನ್ನು ಕೆಲವು ಕಾಯ್ದೆಗಳು ಹಲವು ಚರ್ಚೆಗಳಿಗೆ ಹಾಗೂ ಹೋರಾಟಕ್ಕೆ ಕಾರಣವಾಗುತ್ತದೆ. ಇಂತಹದೊಂದು ಚರ್ಚೆಯ ಸಾಲಿನಲ್ಲಿ ಬೀಜ ಸಂರಕ್ಷಣಾ ಕಾಯ್ದೆಯು ಇದೆ.

ಈಗಾಗಲೇ ಅಸ್ತಿತ್ವದಲ್ಲಿರುವ 1966ರ ಬೀಜ ಸಂರಕ್ಷಣಾ ಕಾಯ್ದೆಯ ಕೆಲ ಅಂಶಗಳಿಗೆ ತಿದ್ದುಪಡಿ ಮಸೂದೆ ಮೂಲಕ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರದ ನಿರ್ಧಾರದ ಪರ-ವಿರೋಧದ ಚರ್ಚೆಗಳು ಗರಿಗೆದರಿದವು. ಅಲ್ಲದೇ ಕೇಂದ್ರ ಸರ್ಕಾರ ರೂಪಿಸಿರುವ 2019ರ ಬೀಜ ಮಸೂದೆ ಕರಡನ್ನು ಕಾಯ್ದೆಯಾಗಿ ಜಾರಿಯಾಗದಂತೆ ತಡೆಯಲು ದೇಶದಾದ್ಯಂತ ರೈತ ಸಂಘಟನೆಗಳು ಹಾಗು ಇತರ ನಾಯಕರು ಒತ್ತಾಯಿಸುತ್ತಿದ್ದಾರೆ.

ಏನಿದು ಬೀಜ ಸಂರಕ್ಷಣಾ ಕಾಯಿದೆ? ಸದ್ಯ ಬಿತ್ತನೆ ಬೀಜಗಳ ದರದ ಮೇಲೆ ಕಂಪನಿಗಳ ಹಿಡಿತವಿದೆ. ಇದರಿಂದ ರೈತರಿಗೆ ಆಗುವ ಸಮಸ್ಯೆಗಳು ಒಂದೆರಡಲ್ಲ. ಉತ್ತಮ ಬೀಜದ ಕೊರತೆ, ಬೆಲೆ ಹೆಚ್ಳಳ, ಏಕಸ್ವಾಮ್ಯ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಬೀಜ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಿತ್ತನೆ ಬೀಜಗಳ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಗದಿತ ಬೆಲೆ ಹೇರಲು ಅವಕಾಶವಿರುತ್ತದೆ.

ನೋಂದಣಿ ಅನಿವಾರ್ಯ ಕಳಪೆ ಬೀಜಗಳನ್ನು ಮಾರಾಟವಾಗದಂತೆ ತಡೆದಾಗ ರೈತರ ಬೆಳೆಗೆ ಸಿಗಬೇಕಾದ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಾದವೊಂದು ಚಾಲ್ತಿಯಲ್ಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಮಾರುಕಟ್ಟೆಗೆ ತರುವ ಎಲ್ಲ ತಳಿ ಅಥವಾ ಹೈಬ್ರೀಡ್​ ಬೀಜಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕೆಂದು ಕೇಂದ್ರ ಸರ್ಕಾರ ರೂಪಿಸಿರುವ ಈ ಬೀಜ ಸಂರಕ್ಷಣಾ ಮಸೂದೆಯ ಕರಡು ತಿಳಿಸುತ್ತದೆ.

ಕೇಂದ್ರಕ್ಕೆ ಪತ್ರ ಈ ಕಾಯ್ದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಿದೆ ಹೊರತು ರೈತರಿಗೆ ಸಿಗಬೇಕಾದ ಅನುಕೂಲಗಳು ಯಾವುದು ಇಲ್ಲ. ರೈತರನ್ನು ಲೂಟಿ ಮಾಡಲು ಈ ಕಾಯ್ದೆ ಅನುವು ಮಾಡುತ್ತದೆ. ಇದರಿಂದ ಕೇಂದ್ರ ಸರ್ಕಾರ ರೂಪಿಸಿರುವ 2019ರ ಬೀಜ ಮಸೂದೆ ಕರಡನ್ನು ಕಾಯ್ದೆಯಾಗಿ ಜಾರಿಯಾಗದಂತೆ ತಡೆಯಬೇಕೆಂದು ವಿರೋಧ ಪಕ್ಷದ ನಾಯ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮೊದಲೇ ತಿಳಿಸಿದಂತೆ ಇದಕ್ಕೆ ಸಂಬಂಧಿಸಿದ ಕಾಯ್ದೆ ಜಾರಿಯಲ್ಲಿದೆ. ಇದರನ್ವಯ ದೇಶದಾದ್ಯಂತ ಯಾವುದೇ ಕೃಷಿ ಸಂಬಂಧಿತ ಬೀಜಗಳನ್ನು ಮಾರಾಟ ಮಾಡುವ ಮೊದಲು ಅದನ್ನು ಪರೀಕ್ಷೆ ಮಾಡಿ ಆ ಬಳಿಕೆ ಮಾರಾಟಕ್ಕೆ ಅವಕಾಶವನ್ನು ನೀಡಲಾಗುತ್ತದೆ. ಯಾವುದೇ ವಿಧದ ಬೀಜಗಳು ಅಥವಾ ಹೈಬ್ರೀಡ್ ಬೀಜಗಳ ಸರಣಿಯಲ್ಲಿ ಲೋಪಗಳು ಕಂಡುಬಂದರೆ ಅದನ್ನು ಮಾರಾಟ ಮಾಡದಂತೆ ತಡೆಹಿಡಿಯಲಾಗುತ್ತದೆ ಎಂದು ಸ್ಪಷ್ಟವಾಗಿದೆ.

ಕಬ್ಬು ಬೆಳೆಗಾರರಿಗೆ ₹3,500 ಕೋಟಿ ಸಬ್ಸಿಡಿ: ಕೇಂದ್ರ ಅನುಮೋದನೆ

Published On - 5:23 pm, Wed, 23 December 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್