ಬೆಂಗಳೂರು: ಇಂದಿನಿಂದ ರಾಜ್ಯದೆಲ್ಲೆಡೆ ಹಲವು ಷರತ್ತುಗಳೊಂದಿಗೆ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ರಾಜ್ಯಾದ್ಯಂತ ಮದ್ಯಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿ ಮಾಡ್ತಿದ್ದಾರೆ. ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿರುವ ಟಾನಿಕ್ ಲಿಕ್ಕರ್ ಶಾಪ್ ಮುಂದೆ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.
ಟಾನಿಕ್ ಸಿಬ್ಬಂದಿ ಮದ್ಯ ಪ್ರಿಯರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡುತ್ತಿದ್ದಾರೆ. ಅಲ್ಲದೆ ಹೆಣ್ಮಕ್ಳೇನ್ ಕಮ್ಮಿನಾ ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದಾರೆ. ಯುವಕರು, ಗಂಡಸರ ಜೊತೆ ಕ್ಯೂ ನಲ್ಲಿ ನಿಂತು ಎಣ್ಣೆ ಖರೀದಿಸುತ್ತಿದ್ದಾರೆ. ಶೇಷಾದ್ರಿಪುರಂನ ಬಾರ್ನಲ್ಲಿ ಅಜ್ಜಿಯೊಬ್ಬರು 4 ಕ್ವಾರ್ಟರ್ ಎಣ್ಣೆ ಖರೀದಿಸಿ ಫುಲ್ ಖುಷ್ ಆಗಿದ್ದಾರೆ. ಶಿವಮೊಗ್ಗದಲ್ಲಿ 96 ವರ್ಷದ ಅಜ್ಜಿ ಸರತಿ ಸಾಲಿನಲ್ಲಿ ನಿಂತು ಎಣ್ಣೆ ಖರೀದಿಸಿದ್ದಾರೆ.
Published On - 11:22 am, Mon, 4 May 20