ಮದ್ಯದ ಅಂಗಡಿ ತೆರೆಯಲು ಭರ್ಜರಿ ತಯಾರಿ, ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ರಾಜ್ಯದ ಅನೇಕ ಕಡೆ ಭರ್ಜರಿ ತಯಾರಿ ನಡೆದಿದೆ. ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಪೂಜೆ ಮಾಡಿ ಅಂಗಡಿ ತೆರೆಯೋಕೆ ರೆಡಿಯಾಗಿದ್ದಾರೆ. ಎಣ್ಣೆಪ್ರಿಯರು‌ ಮದ್ಯದಂಗಡಿ ಮುಂದೆ ಕ್ಯೂ‌ ನಿಂತಿದ್ದಾರೆ. ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಮದ್ಯ ಮಾರಾಟಗಾರರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಏಪ್ರಿಲ್ 1ರಿಂದ ಮದ್ಯದ ಮೇಲಿನ ತೆರಿಗೆ ಶೇ.6ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ ಏಪ್ರಿಲ್ […]

ಮದ್ಯದ ಅಂಗಡಿ ತೆರೆಯಲು ಭರ್ಜರಿ ತಯಾರಿ, ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ
sadhu srinath

|

May 04, 2020 | 7:46 AM

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ರಾಜ್ಯದ ಅನೇಕ ಕಡೆ ಭರ್ಜರಿ ತಯಾರಿ ನಡೆದಿದೆ. ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಪೂಜೆ ಮಾಡಿ ಅಂಗಡಿ ತೆರೆಯೋಕೆ ರೆಡಿಯಾಗಿದ್ದಾರೆ. ಎಣ್ಣೆಪ್ರಿಯರು‌ ಮದ್ಯದಂಗಡಿ ಮುಂದೆ ಕ್ಯೂ‌ ನಿಂತಿದ್ದಾರೆ.

ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಮದ್ಯ ಮಾರಾಟಗಾರರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಏಪ್ರಿಲ್ 1ರಿಂದ ಮದ್ಯದ ಮೇಲಿನ ತೆರಿಗೆ ಶೇ.6ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ ಏಪ್ರಿಲ್ 1ಕ್ಕೂ ಮೊದಲೇ ಮದ್ಯ ಖರೀದಿ ಹಿನ್ನೆಲೆಯಲ್ಲಿ ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲು ಸೂಚನೆ ನೀಡಲಾಗಿದೆ.

ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ: ಗದಗ ಜಿಲ್ಲೆಯ ವೈನ್ ಶಾಪ್​ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಸಿಎಲ್-2 55 & MSIL 15 ಮದ್ಯ ದಂಗಡಿ ಇಂದು ತೆರೆಯಲಿವೆ. ನೂಕು ನುಗ್ಗಲು, ಗದ್ದಲ, ಗಲಾಟೆ ಆಗದಂತೆ ಅಂಗಡಿ ಮಾಲೀಕರು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಅಂತರ, ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ ನೀಡಲಾಗುತ್ತೆ. CL-2 & MSILಮಾಲೀಕರಿಂದ ಎಲ್ಲಾ ಭದ್ರತೆ ವ್ಯವಸ್ಥೆ ಕಾರ್ಯ ನಡೆದಿದೆ. ಮಾಲೀಕರು ಕೂಡ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ತಯಾರಿ ನಡೆದಿದೆ.

ಮದ್ಯದ ಅಂಗಡಿ ಮುಂದೆ ಮದ್ಯ ಪ್ರಿಯರ ಕ್ಯೂ: ಇಂದಿನಿಂದ ಮದ್ಯದ ಅಂಗಡಿಗಳು ಓಪನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆ ಮದ್ಯದಂಗಡಿ ಎದುರು ಮದ್ಯ ಖರೀದಿಗೆ ಸರತಿಸಾಲಿನಲ್ಲಿ ಮದ್ಯ ಪ್ರಿಯರು ಕ್ಯೂ ನಿಂತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada