3ನೇ ಹಂತದ ಲಾಕ್ಡೌನ್: ಸಿಲಿಕಾನ್ ಸಿಟಿಯಲ್ಲಿ ಏನಿರುತ್ತೆ & ಏನಿರಲ್ಲ?
ಬೆಂಗಳೂರು: 40 ದಿನಗಳು.. ರಾಜ್ಯ ರಾಜಧಾನಿಯೇ ಸ್ತಬ್ಧವಾಗಿತ್ತು.. ಗಲ್ಲಿ ಗಲ್ಲಿಯೂ ಬಂಧಿಯಾಗಿತ್ತು.. ಬೀದಿ ಬೀದಿಯೂ ಖಾಕಿ ಕಣ್ಗಾವಲಲ್ಲಿ ಬಿಗಿಯಾಗಿತ್ತು. ಆದ್ರೆ 40 ದಿನಗಳ ವನವಾಸಕ್ಕೆ ತೆರೆ ಬಿದ್ದಿದೆ. ಗೃಹಬಂಧನಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇದ್ರಿಂದ ಬೆಂಗ್ಳೂರಿಗೆ ಮರುಜೀವ ಬಂದಂತಾಗಿದೆ. ಸಂಕೋಲೆಯಿಂದ ಹೊರಬಂದಿರೋ ಜನ ನಿಟ್ಟುಸಿರು ಬಿಡ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದ್ದು, ಇಂದಿನಿಂದ ಬೆಂಗ್ಳೂರಲ್ಲಿ ಹೊಸ ಚಟುವಟಿಕೆಗಳು ಅರಂಭವಾಗಲಿವೆ. ಬೆಂಗಳೂರಿನ ಗ್ರೀನ್ಜೋನ್ಗಳಲ್ಲಿ ಕೊಂಚ ರಿಲೀಫ್! ಮಹಾಮಾರಿ ಹಾವಳಿಗೆ ಬೆಂಗ್ಳೂರು ಅಕ್ಷರಶಃ ನಲುಗಿ ಹೋಗಿದೆ. ಕಿಲ್ಲರ್ ಕೊಟ್ಟ ಹೊಡೆತಕ್ಕೆ […]
ಬೆಂಗಳೂರು: 40 ದಿನಗಳು.. ರಾಜ್ಯ ರಾಜಧಾನಿಯೇ ಸ್ತಬ್ಧವಾಗಿತ್ತು.. ಗಲ್ಲಿ ಗಲ್ಲಿಯೂ ಬಂಧಿಯಾಗಿತ್ತು.. ಬೀದಿ ಬೀದಿಯೂ ಖಾಕಿ ಕಣ್ಗಾವಲಲ್ಲಿ ಬಿಗಿಯಾಗಿತ್ತು. ಆದ್ರೆ 40 ದಿನಗಳ ವನವಾಸಕ್ಕೆ ತೆರೆ ಬಿದ್ದಿದೆ. ಗೃಹಬಂಧನಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇದ್ರಿಂದ ಬೆಂಗ್ಳೂರಿಗೆ ಮರುಜೀವ ಬಂದಂತಾಗಿದೆ. ಸಂಕೋಲೆಯಿಂದ ಹೊರಬಂದಿರೋ ಜನ ನಿಟ್ಟುಸಿರು ಬಿಡ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದ್ದು, ಇಂದಿನಿಂದ ಬೆಂಗ್ಳೂರಲ್ಲಿ ಹೊಸ ಚಟುವಟಿಕೆಗಳು ಅರಂಭವಾಗಲಿವೆ.
ಬೆಂಗಳೂರಿನ ಗ್ರೀನ್ಜೋನ್ಗಳಲ್ಲಿ ಕೊಂಚ ರಿಲೀಫ್! ಮಹಾಮಾರಿ ಹಾವಳಿಗೆ ಬೆಂಗ್ಳೂರು ಅಕ್ಷರಶಃ ನಲುಗಿ ಹೋಗಿದೆ. ಕಿಲ್ಲರ್ ಕೊಟ್ಟ ಹೊಡೆತಕ್ಕೆ ಹಿಂಡಿ ಹಿಪ್ಪೆಯಾಗಿದೆ. ನಗರದ 149 ಮಂದಿಯ ದೇಹ ಹೊಕ್ಕಿರೋ ಹೆಮ್ಮಾರಿಯಿಂದ ಇಡೀ ಜಿಲ್ಲೆ ರೆಡ್ ಜೋನ್ ಆಗಿದೆ. ಆದ್ರೆ ಸರ್ಕಾರ ಕಂಟೇನ್ಮೆಂಟ್ ಜೋನ್ಗಳಲ್ಲಿ ಸಂಪೂರ್ಣ ನಿರ್ಬಂಧ ಹೇರಿದೆ. ಹೀಗಾಗಿ 21 ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟೆಚ್ಚರ ಮುಂದುವರಿಯುತ್ತಿದ್ದು, 177 ಗ್ರೀನ್ಜೋನ್ಗಳಿಗೆ ಸ್ವಲ್ಪ ಸಡಿಲಿಕೆ ಸಿಗ್ತಿದೆ.
ಬೆಂಗಳೂರಲ್ಲಿ ಏನಿರುತ್ತೆ? ಇನ್ನು ಇಂದಿನಿಂದ ಬೆಂಗಳೂರಲ್ಲಿ ಎಲ್ಲಾ ರೀತಿಯ ಅಂಗಡಿಗಳು ಓಪನ್ ಆಗಲಿವೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6.30ರವರೆಗೆ ಅನುಮತಿ ನೀಡಲಾಗಿದೆ. ಬಟ್ಟೆ, ಪಾತ್ರೆ, ಚಿನ್ನ ಮತ್ತು ಬೆಳ್ಳಿ ಅಂಗಡಿ, ಸಿಮೆಂಟ್ ಅಂಗಡಿ ಓಪನ್ ಆಗಲಿವೆ. ಫ್ಲಂಬಿಂಗ್ ಮಳಿಗೆ, ಕೈಗಾರಿಕಾ ವಲಯಗಳು ಪುನಾರಂಭವಾಗಲಿವೆ. ಐಟಿ-ಬಿಟಿ ಕಂಪನಿಗಳು ಸಹ ಇಂದು ಕೆಲಸ ಶುರು ಮಾಡಲಿವೆ.
ಇನ್ನು ಇಷ್ಟೆಲ್ಲಾ ರಿಲೀಫ್ ಕೊಟ್ಮೇಲೆ ಮತ್ತಷ್ಟು ಟೈಟ್ ಸೆಕ್ಯೂರಿಟಿ ಇರಲೇಬೇಕಾಗುತ್ತದೆ. ಹೀಗಾಗಿ ಕಮಿಷನರ್ ಭಾಸ್ಕರ್ರಾವ್ ಹಲವು ಖಡಕ್ ಸೂಚನೆಗಳನ್ನ ಕೊಟ್ಟಿದ್ದಾರೆ. ಆ ಸೂಚನೆಗಳೇನು ಅಂತಾ ನೋಡೋದಾದ್ರೆ..
ಖಾಕಿ ಖಡಕ್ ಎಚ್ಚರಿಕೆ! ಪ್ರತಿ ಗ್ರಾಹಕರ ಮೇಲೆ ಅಂಗಡಿಯವರು ನಿಗಾ ವಹಿಸಬೇಕು, ಇಲ್ಲದಿದ್ರೆ ಅಂಗಡಿ ಓಪನ್ ಮಾಡೋಕೆ ಅನುಮತಿ ನೀಡಲ್ಲ. ಸಂಜೆ 7 ಗಂಟೆ ನಂತ್ರ ಕರ್ಫ್ಯೂ ಜಾರಿಯಲ್ಲಿರುತ್ತೆ. ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಿ ರೋಡಿಗೆ ಬಂದ್ರೆ ದಂಡ ಹಾಕಲಾಗುತ್ತೆ, ಜೊತೆಗೆ ಅನಗತ್ಯವಾಗಿ ಓಡಾಡಿದ್ರೆ ಕ್ರಮ ಕೈಗೊಳ್ತಾರೆ.
ಇನ್ನು ಐಡಿ ಕಾರ್ಡ್ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಇದಿಷ್ಟೇ ಅಲ್ಲದೆ, ಮದ್ಯದಂಗಡಿ ಎದುರು ಬ್ಯಾರಿಕೇಡ್ ಹಾಕಿರ್ತಾರೆ. ಖಾಸಗಿ ಭದ್ರತೆ, ಸಿಸಿಟಿವಿ, ಡಿವಿಆರ್ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಐಪಿಸಿ 188 ಸೆಕ್ಷನ್ , NDMA 51ರ ಅಡಿ ಕೇಸ್ ದಾಖಲಾಗುತ್ತೆ ಅಂತಾ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ರು.
ಐದು ಜಿಲ್ಲೆಗಳಿಗೂ ಒಂದೇ ಅನುಮತಿ ಪತ್ರ! ಇನ್ನು, ಅಂತರ್ ಜಿಲ್ಲಾ ಪ್ರಯಾಣದ ಮಾರ್ಗಸೂಚಿ ಬಿಡುಗಡೆ ಮಾಡಿರೋ ರಾಜ್ಯ ಸರ್ಕಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರವನ್ನ ಒಂದೇ ಜಿಲ್ಲೆಯಾಗಿ ಪರಿಗಣನೆ ಮಾಡಿದೆ. ಈ ಜಿಲ್ಲೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆ ತನಕ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಹಾಗೇ, ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಇರಬೇಕು ಎಂದು ತಿಳಿಸಿದೆ.
ಒಟ್ನಲ್ಲಿ, ಕೊರೊನಾದಿಂದ ಬದುಕೇ ನಲುಗಿ ಹೋಗಿದೆ. ಆದ್ರೆ, ಇಂದಿನಿಂದ ಅನೇಕ ನಿಯಮಗಳು ಸಡಿಲಗೊಳ್ಳುತ್ತಿವೆ. ಹೀಗಾಗಿ, ಎಚ್ಚರಿಕೆಯಿಂದ ಹೆಜ್ಜೆ ಇಟ್ಟು, ಜೀವನ ಆರಂಭಿಸಬೇಕಿದೆ.
Published On - 7:00 am, Mon, 4 May 20