ಸೀತಾಫಲ ಹಣ್ಣಿನ ತವರು ಜಿಲ್ಲೆ ಯಾದಗಿರಿಯಲ್ಲಿ 2 ತಿಂಗಳ ಕಾಲ ಗ್ರಾಹಕರು-ಮಾರಾಟಗಾರರಿಗೆ ಸುಗ್ಗಿ ಸಂಭ್ರಮ, ಒಂದು ನೋಟ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Nov 06, 2023 | 12:55 PM

ವಿಶೇಷ ಅಂದ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೀತಾಫಲ ಹಣ್ಣಿನ ತವರು ಎಂದು ಯಾದಗಿರಿ ಜಿಲ್ಲೆ ಪ್ರಸಿದ್ಧ. ಇಲ್ಲಿಯ ರುಚಿರುಚಿ ಸ್ವಾದಿಷ್ಟ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ವರ್ಷದಲ್ಲಿ 2 ತಿಂಗಳ ಅವಧಿಯಲ್ಲಿ ಸಿಗುವ ಮತ್ತು ಹೆಚ್ಚು ದಿನ ಶೇಖರಿಸಲಾಗದ ಕಾರಣ ಮತ್ತು ಕೇವಲ 4 ರಿಂದ 5 ದಿನಗಳ ವರೆಗೆ ಈ ಸೀತಾಫಲ ಬಾಳುವುದರಿಂದ ಹಣ್ಣನ್ನು ಇಷ್ಟಪಡುವ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಸುಗ್ಗಿಯ ಸಂಭ್ರಮವಾಗಿದೆ.

ಸೀತಾಫಲ ಹಣ್ಣಿನ ತವರು ಜಿಲ್ಲೆ ಯಾದಗಿರಿಯಲ್ಲಿ 2 ತಿಂಗಳ ಕಾಲ ಗ್ರಾಹಕರು-ಮಾರಾಟಗಾರರಿಗೆ ಸುಗ್ಗಿ ಸಂಭ್ರಮ, ಒಂದು ನೋಟ ಇಲ್ಲಿದೆ
ಸೀತಾಫಲ ಹಣ್ಣಿನ ತವರು ಜಿಲ್ಲೆ ಯಾದಗಿರಿಯಲ್ಲಿ 2 ತಿಂಗಳ ಕಾಲ ಗ್ರಾಹಕರು-ಮಾರಾಟಗಾರರಿಗೆ ಸುಗ್ಗಿ ಸಂಭ್ರಮ
Follow us on

ಅದು ಸೀತೆಯ ಹೆಸರಿನೊಂದಿಗೆ ನಂಟು ಹೊಂದಿದ ಸೀತಾಫಲ ಹಣ್ಣು. ಬೀಜಗಳು ಜಾಸ್ತಿ, ತಿನ್ನಲು ತುಸು ಕಸರತ್ತು ಮಾಡಬೇಕೆನ್ನುವ ಹೊರತಾಗಿ ಸೀತಾಫಲ ಸಿಹಿಯ ಜೊತೆ ಸ್ವಾದಿಷ್ಟ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಬಹಳಷ್ಟು ರೋಗಗಳಿಗೆ ರಾಮಬಾಣದಂತಿರುವ ಸೀತಾಫಲ ಹಣ್ಣು ಕೇವಲ ಎರಡು ತಿಂಗಳ ಮಾತ್ರ ಸಿಗುವ ಕಾರಣ ಜನ ಮುಗಿಬಿದ್ದು ಖರೀದಿ ಮಾಡ್ತಾರೆ. ಅಷ್ಟಕ್ಕೂ ಸೀಲಾಫಲ ಹಣ್ಣಿನ (custard apple sales) ತವರೂರು ಯಾವುದು ಅಂತೀರಾ ಈ ಸ್ಟೋರಿ ನೋಡಿ. ಮುಗಿಬಿದ್ದು ಖರೀದಿಯಲ್ಲಿ ತೊಡಗಿರು ಜನ… ಎರಡು ತಿಂಗಳು ಸೀಜನ್ ಮುಗಿದ್ರೆ ಮತ್ತೆ ವರ್ಷವಿಡೀ ಕಾಯಬೇಕು ಅಂತಾ ಆತುರ ಆತುರದಲ್ಲಿ ಖರೀದಿ ಮಾಡ್ತಾಯಿರುವ ಜನ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಗಿರಿನಾಡು ಯಾದಗಿರಿ (yadgir) ಜಿಲ್ಲೆಯಲ್ಲಿ.. ಹೌದು ನಗರದ ಹಳೆ ಬಸ್ ನಿಲ್ದಾಣ ಮುಂದೆ ಹಾಗೂ ಹತ್ತಿಕುಣಿ ಕ್ರಾಸ್ ಬಳಿಯ ರಸ್ತೆ ಈ ಎರಡು ತಿಂಗಳಗಳ ಕಾಲ ಸೀತಾಫಲ ಹಣ್ಣುಗಳ ಮಾರಕಟ್ಟೆಯಾಗಲಿದೆ.

ಇನ್ನೂ ವಿಶೇಷ ಅಂದ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೀತಾಫಲ ಹಣ್ಣಿನ ತವರು ಎಂದು ಯಾದಗಿರಿ ಜಿಲ್ಲೆ ಪ್ರಸಿದ್ಧ. ಇಲ್ಲಿಯ ರುಚಿರುಚಿ ಸ್ವಾದಿಷ್ಟ ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ವರ್ಷದಲ್ಲಿ 2 ತಿಂಗಳ ಅವಧಿಯಲ್ಲಿ ಸಿಗುವ ಮತ್ತು ಹೆಚ್ಚು ದಿನ ಶೇಖರಿಸಲಾಗದ ಕಾರಣ ಮತ್ತು ಕೇವಲ 4 ರಿಂದ 5 ದಿನಗಳ ವರೆಗೆ ಈ ಸೀತಾಫಲ ಬಾಳುವುದರಿಂದ ಹಣ್ಣನ್ನು ಇಷ್ಟಪಡುವ ಗ್ರಾಹಕರಿಗೂ ಮತ್ತು ಮಾರಾಟಗಾರರಿಗೂ ಸುಗ್ಗಿಯ ಸಂಭ್ರಮವಾಗಿದೆ.

ಗುಡ್ಡಗಾಡು ಪ್ರದೇಶ ಹೊಂದಿರುವ ಯಾದಗಿರಿ ಜಿಲ್ಲೆ ಗುಡ್ಡಗಾಡು ಪ್ರದೇಶದಲ್ಲಿ ಹಳ್ಳಿ ಜನ ಸೀತಾಫಲ ಹಣ್ಣಗಳನ್ನು ತಂದು ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ. ನಗರದ ಪ್ರದೇಶದ ಜನ ಎರಡು ತಿಂಗಳ ಈ ಸೀತಾಫಲ ಸೀಜನ್ ಸಖತ್ ಎಂಜಾಯ್ ಮಾಡುತ್ತಾರೆ. ಕೇವಲ ಎರಡೇ ತಿಂಗಳುಗಳು ಮಾತ್ರ ಸಿಗುವ ಕಾರಣ ಮಿಸ್ ಮಾಡದೆ ಸೀತಾಫಲ ಹಣ್ಣಿನ ಸವಿಯನ್ನ ಸವಿಯುತ್ತಾರೆ.. ಇನ್ನು ಈ ವರ್ಷವಂತೂ ಮುಂಗಾರು ಮಳೆ ಅಬ್ಬರಿಸಿರುವ ಕಾರಣ ಸೀತಾಫಲ ಹಣ್ಣುಗಳ ಉತ್ಪಾದನೆ ಕೂಡ ಹೆಚ್ಚಾಗಿದೆ. ಜಿಲ್ಲೆಯ ನಗರ ಪ್ರದೇಶದ ಜನ ಮಾತ್ರ ವರ್ಷ ಈ ಎರಡು ತಿಂಗಳು ಸೀತಾಫಲ ಹಣ್ಣು ಮಿಸ್ ಮಾಡ್ದೆ ಸವಿಯುತ್ತಾರೆ. ಇನ್ನು ಬೇರೆ ಊರಲ್ಲಿರುವ ನೆಂಟರು ಇಷ್ಟಪಟ್ಟು ಕೇಳುವುದರಿಂದ ಯಾದಗಿರಿ ಜನ ಬೇರೆ ಊರುಗಳಿಗೆ ಪಾರ್ಸಲ್ ಸಹ ಕಳುಹಿಸಿ ಕೊಡುತ್ತಾರೆ.

ಇನ್ನು ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಯಾದಗಿರಿ ತಾಲೂಕುಗಳ ಬೆಟ್ಟಗುಡ್ಡಗಳು ಸೇರಿಯೇ ಯಾದಗಿರಿ ಜಿಲ್ಲೆ ಗಿರಿನಾಡು ಎಂದು ಕರೆಸಿಯಿಸಿಕೊಂಡಿದೆ. ಹಚ್ಚ ಹಸುರಿನ ಗಿರಿಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಸೀತಾಫಲದ 2 ತಿಂಗಳ ಸುಗ್ಗಿ ಈ ಭಾಗದ ಅನೇಕ ಬಡ ಕುಟುಂಬಗಳಗೆ ತಕ್ಕ ಮಟ್ಟಿನ ಆದಾಯ ಮೂಲವಾಗಿದೆ. ವಿಶೇಷವಾಗಿ ಯಾದಗಿರಿ ತಾಲೂಕಿನ ಹತ್ತಿಕುಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ.

ಹೀಗಾಗಿ ಜನ ಬೆಳಗ್ಗೆ ಎದ್ರೆ ಸಾಕು ಕೈಯಲ್ಲಿ ಚೀಲ ಹಿಡಿದುಕೊಂಡು ಅರಣ್ಯ ಪ್ರದೇಶದ ಒಳಗೆ ಹೊಕ್ಕರೆ ಚೀಲ ತುಂಬಿಕೊಂಡೆ ಹೊರ ಬರ್ತಾರೆ.. ಇನ್ನು ಸೀತಾಫಲ ಹಣ್ಣುಗಳು ತಿನ್ನುವುದಕ್ಕೆ ರೂಚಿಯಾಗಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಣ್ಣುಗಳು. ಈಗ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳು ಕೆಮಿಕಲ್ ಮಿಶ್ರಿತವಾಗಿರುತ್ತೆ. ಆದ್ರೆ ಸೀತಾಫಲ ಮಾತ್ರ ಗುಡ್ಡಗಾಡು ಪ್ರದೇಶದಲ್ಲಿ ಸಿಗುವ ಕಾರಣ, ಯಾವುದೇ ಕೆಮಿಕಲ್ ಮಿಶ್ರಣದ ಆತಂಕವಿಲ್ಲ.

ಇನ್ನು ಸೀತಾಫಲ ಬೆಳೆಯುವುದಕ್ಕೆ ಗಿಡಗಳಿಗೆ ನೀರು ಹಾಕುವುದಿಲ್ಲ, ಗೊಬ್ಬರ ಹಾಕುವುದಿಲ್ಲ, ನ್ಯಾಚೂರಲ್ ಆಗಿ ಬೆಳೆಯುವಂತಹ ಹಾಗೂ ಧಾರಾಳವಾಗಿ ಸಿಗುವಂತಹ ಹಣ್ಣಾಗಿದೆ. ಯಾದಗಿರಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೀತಾಫಲ ಹಣ್ಣು ಸಿಗುವ ಕಾರಣ ಮುಂಬೈ, ಹೈದ್ರಾಬಾದ್, ಪುಣೆ ಸೇರಿದಂತೆ ನಾನಾ ಕಡೆ ರಫ್ತಾಗುತ್ತದೆ. ಇದಕ್ಕಾಗಿ ಸೀತಾಫಲ ಹಣ್ಣಿಗೆ ಎರಡು ತಿಂಗಳ ಕಾಲ ಸಾಕಷ್ಟು ಡಿಮ್ಯಾಂಡ್ ಇದೆ. ಸೀತಾಫಲ್ ಹಣ್ಣುಗಳು ಬಹುತೇಕ ರೋಗಗಳಿಗೆ ರಾಮಬಾಣ ಅಂತಾರೆ ಪರಿಸರ ಪ್ರೇಮಿಗಳು.

ಒಟ್ನಲ್ಲಿ ಯಾದಗಿರಿ ಜಿಲ್ಲೆಯ ಬೆಟ್ಟಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲ ಸಿಹಿಸಿಹಿ. ಸೀತಾಫಲ ಹಣ್ಣು ಯಾರೂ ಸಾಂಪ್ರದಾಯಿಕವಾಗಿ ಬಿತ್ತಿ ಬೆಳೆಯುವ ಹಣ್ಣಲ್ಲವಾದರೂ ವರ್ಷದಲ್ಲಿ ಕೇವಲ 2 ತಿಂಗಳ ಸೀತಾಫಲ ಸುಗ್ಗಿ, ಇಲ್ಲಿಯ ಅನೇಕ ಬಡಜನರಿಗೆ ತಕ್ಕ ಮಟ್ಟಿನ ಆದಾಯ ಮೂಲವಾಗಿದೆ. ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಯಾರಿಗಾದರೂ ಸೀತಾಫಲ ಹಣ್ಣಿನ ರೂಚಿ ನೋಡಬೇಕಾದ್ರೆ ಒಮ್ಮೆ ಗಿರಿನಾಡು ಯಾದಗಿರಿಗೆ ಭೇಟಿ ನೀಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ