ಯಾದಗಿರಿ, ನ.04: FDA ಪರೀಕ್ಷೆ ಅಕ್ರಮದ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ. ಕಲಬುರಗಿ ಹಾಗೂ ಯಾದಗಿರಿಯಲ್ಲಿ ಇಂದು ಕೆಪಿಎಸ್ಸಿಯ ಸಿ ಗ್ರೂಪ್ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಗೆ ಕಟ್ಟುನಿಟ್ಟಿನ ತಪಾಸಣೆ ಮೂಲಕ ಪರೀಕ್ಷಾರ್ಥಿಗಳನ್ನ ಒಳಗೆ ಬಿಡಲಾಗಿದೆ (KPSC Exam). ಯಾದಗಿರಿಯಲ್ಲಿ ಪರೀಕ್ಷಾ ಸಮಯದ ಒಂದೂವರೆ ಗಂಟೆ ಮೊದಲೇ ಪೊಲೀಸರು ಪರೀಕ್ಷಾರ್ಥಿಗಳ ತಪಾಸಣೆ ಮಾಡಿದ್ದಾರೆ. ಪರೀಕ್ಷಾರ್ಥಿಗಳ ಕಿವಿ ಓಲೆ, ಚೈನ್, ಕಾಲುಂಗುರ ಸೇರಿದಂತೆ ಎಲ್ಲವನೂ ತೆಗೆಸಿದ್ದಾರೆ. ಒಬ್ಬೊಬ್ಬ ಪರೀಕ್ಷಾರ್ಥಿಯನ್ನ ನಾಲ್ಕು ಭಾರೀ ಪರೀಶಿಲನೆ ನಡೆಸಿದ್ದಾರೆ.
ಯಾದಗಿರಿಯ ಒಟ್ಟು ಐದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದೆ. 1 ಡಿವೈಎಸ್ಪಿ, 2 ಸಿಪಿಐ, 6 ಪಿಎಸ್ಐ ಸೇರಿ ನೂರಕ್ಕೂ ಅಧಿಕ ಪೊಲೀಸ್ ಪೇದೆಗಳ ನಿಯೋಜನೆ ಮಾಡಲಾಗಿದ್ದು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ತಪಾಸಣೆ ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ.
ಇನ್ನು ಕಲಬುರಗಿಯಲ್ಲಿ ಇಂದು ಸಾಮಾನ್ಯ ಕನ್ನಡ ಪರೀಕ್ಷೆ ನಡೆಯುತ್ತಿದ್ದು ಒಂದು ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಬಂದವರ ತಪಾಸಣೆ ಮಾಡಿ ಒಳಗೆ ಬಿಡಲಾಗಿದೆ. ಒಬ್ಬೊಬ್ಬ ಪರೀಕ್ಷಾರ್ಥಿಗಳನ್ನ 4 ಬಾರಿ ತಪಾಸಣೆ ಮಾಡಲಾಗುತ್ತಿದೆ. ಕಲಬುರಗಿಯಲ್ಲಿ 11 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದು ಯಾವುದೇ ಅಕ್ರಮ ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: FDA Exam Scam: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಚುಕೋರನೇ ಎಫ್‌ಡಿಎ ಅಕ್ರಮಕ್ಕೂ ಕಿಂಗ್‌ಪಿನ್!
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ FDA ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕಳೆದ ವರ್ಷ ನಡೆದ 545 ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಸದ್ದು ಮಾಡಿದ ರೀತಿಯಲ್ಲೇ ಇತ್ತೀಚೆಗೆ ನಡೆದ KEA, FDA ನೇಮಕಾತಿ ಪರೀಕ್ಷೆ ಅಕ್ರಮ ಕೂಡ ಭಾರೀ ಸದ್ದು ಮಾಡ್ತಿದೆ. KEA ನಡೆಸಿದ FDA ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಏಸಗುತ್ತಿದ್ದ ಅಭ್ಯರ್ಥಿಗಳನ್ನು ಕಲಬುರಗಿ ಮತ್ತು ಯಾದಗಿರಿ ಪೊಲೀಸರು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ 5 ಜನ ಅಭ್ಯರ್ಥಿಗಳು ಸೇರಿ 12 ಕ್ಕೂ ಹೆಚ್ಚು ಜನರನ್ನ ಪೊಲೀಸರು ಕಂಬಿ ಹಿಂದೆ ತಳ್ಳಿ ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಇನ್ನೂ ಬಿಜೆಪಿ, ಸಿಬಿಐ ತನಿಖೆ ಪಟ್ಟು ಹಿಡಿದಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಬಿಜೆಪಿ ಸರ್ಕಾರ ಅಂತಾ ಮತ್ತೆ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಬಿಜೆಪಿ ಸರ್ಕಾರ, ಮಂತ್ರಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳೆ ಶಾಮಿಲಾಗಿದ್ರು. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಉನ್ನತ ಅಧಿಕಾರಿಗಳೇ ಜೈಲಿಗೆ ಹೋಗಿದ್ರು. ಆದ್ರೆ ನಮ್ಮ ಸರ್ಕಾರದಲ್ಲಿ FDA ಪರೀಕ್ಷೆ ನಡೆದಿದೆ. ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರಿಂದಲೇ ಅಕ್ರಮ ಮಾಡಿದವರನ್ನ ತಕ್ಷಣ ಅರೆಸ್ಟ್ ಮಾಡಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಎಸ್ಐ ತನಿಖೆ ಯಾಕೆ ಸಿಬಿಐಗೆ ಬಿಜೆಪಿ ಸರ್ಕಾರ ನೀಡಲಿಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ. ಪೊಲೀಸರು ಕಿಂಗ್ ಪಿನ್ ಆರ್ ಡಿ ಪಾಟೀಲ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಅಲ್ಲದೆ ಪೊಲೀಸರು ಕಟ್ಟು ನಿಟ್ಟಾಗಿ ತನಿಖೆ ನಡೆಸುತ್ತಿದ್ದಾರೆ. ಸಧ್ಯಕ್ಕೆ ಕೇಸ್ ಸಿಬಿಐ ಗೆ ನೀಡುವ ಅಗತ್ಯ ಇಲ್ಲ. ಅವಶ್ಯಕತೆ ಬಿದ್ರೆ ಸಿಬಿಐಗೆ ನೀಡುತ್ತೇವೆ. ಅಕ್ರಮದಲ್ಲಿ ಯಾರೇ ಭಾಗಿಯಾದ್ರು ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ