ಗುಜರಾತ್ ಮೊರ್ಬಿ​​ ಸೇತುವೆಯಂತೆ ನಿಜಾಮರ ಕಾಲದ ಈ ಸೇತುವೆಯೂ ಯಾವಾಗ ಕುಸಿಯುತ್ತದೋ ಎಂಬ ಆತಂಕ ಯಾದಗಿರಿ ಜನಕ್ಕೆ

| Updated By: ಸಾಧು ಶ್ರೀನಾಥ್​

Updated on: Dec 01, 2022 | 5:09 PM

ಯಾದಗಿರಿ ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಇದೇ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ವಾಹನಗಳು ಇದೇ ಸೇತುವೆಯ ಮೇಲೆ ಸಂಚರಿಸುತ್ತವೆ. ಜಿಲ್ಲೆಯ ಎಲ್ಲಾ ಉನ್ನತಮಟ್ಟದ್ದ ಅಧಿಕಾರಿಗಳು ಹಾಗೂ ಶಾಸಕರು ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಾರೆ.

ಗುಜರಾತ್ ಮೊರ್ಬಿ​​ ಸೇತುವೆಯಂತೆ ನಿಜಾಮರ ಕಾಲದ ಈ ಸೇತುವೆಯೂ ಯಾವಾಗ ಕುಸಿಯುತ್ತದೋ  ಎಂಬ ಆತಂಕ ಯಾದಗಿರಿ ಜನಕ್ಕೆ
ನಿಜಾಮರ ಕಾಲದ ಈ ಸೇತುವೆ ಯಾವಾಗ ಕುಸಿಯುತ್ತದೋ ಎಂಬ ಆತಂಕ ಯಾದಗಿರಿ ಜನಕ್ಕೆ
Follow us on

ಆ ಸೇತುವೆ ಹೈದ್ರಾಬಾದ್ ನಿಜಾಮರ (Historical nizam) ಕಾಲದಲ್ಲಿ ನಿರ್ಮಾಣಗೊಂಡ ಸೇತುವೆಯಾಗಿದೆ. ಜೊತೆಗೆ ವಿಜಯಪುರ-ಹೈದ್ರಾಬಾದ ಮಧ್ಯ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಕೂಡ ಹೌದು. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ (yadagiri bridge) ಆ ಜಿಲ್ಲೆಯ ಸಂಪರ್ಕ ವ್ಯವಸ್ಥೆಯನ್ನ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಆದ್ರೆ ಶತಮಾನಗಳ ಹಿಂದೆ ನಿರ್ಮಿಸಿಲಾಗಿದ್ದ ಐತಿಹಾಸಿಕ ಸೇತುವೆ ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದಂಚಿನಲ್ಲಿದೆ. ನಿತ್ಯ ಸೇತುವೆ ಮೇಲೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಚರಿಸಿದರೂ ಕಂಡೂಕಾಣದಂತೆ ಕುಳಿತಿದ್ದು ವಾಹನ ಸವಾರರಲ್ಲಿ ಆತಂಕ ಉಂಟು ಮಾಡುವಂತೆ ಮಾಡಿದ್ದೆ…

ಶಿಥಿಲಾವಸ್ಥೆಗೆ ಬಂದಿದೆ ಹೈದ್ರಾಬಾದ್ ನಿಜಾಮರ ಕಾಲದ ಆ ಸೇತುವೆ… ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯದಂಚಿನಲ್ಲಿದೆ ಶತಮಾನಗಳ ಸೇತುವೆ.. ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸಿದರೂ ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.. ಯಸ್ ಈ ದೃಶ್ಯಾವಳಿಗಳು ಕಂಡುಬಂದಿರುವುದು ಯಾದಗಿರಿ (yadagiri) ಜಿಲ್ಲಾ ಕೇಂದ್ರದ ಹೊರ ಭಾಗದಲ್ಲಿ ಅಪಾಯದಂಚಿನಲ್ಲಿರುವ ಭೀಮಾ ಸೇತುವೆ ದೃಶ್ಯಗಳು..

ಹೌದು ಶತಮಾನಗಳ ಹಿಂದೆ ಹೈದ್ರಾಬಾದ್ ನಿಜಾಮರ ಆಳ್ವಿಕೆ ಸಮಯದಲ್ಲಿ ನಿರ್ಮಾಣವಾಗಿರುವ ಅತ್ಯಂತ ಪ್ರಮುಖ ಸೇತುವೆ ಈಗ ಅಪಾಯದಂಚಿನಲ್ಲಿದೆ. ವಿಜಯಪುರ-ಹೈದ್ರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕೆ ಶತಮಾನಗಳ ಹಿಂದೆ ಹೈದ್ರಾಬಾದಿನ ನಿಜಾಮರು ಭೀಮಾ ನದಿಗೆ ಅಡ್ಡಲಾಗಿದೆ ಸೇತುವೆಯನ್ನ ನಿರ್ಮಿಸಿದ್ದರು. ಜೊತೆಗೆ ಈ ಸೇತುವೆ ಸಿಮೆಂಟಿನ ಕಾಲಂ ರಹಿತವಾದ ಸೇತುವೆಯಾಗಿದೆ… ನಿರ್ಮಾಣವಾಗಿ ಶತಮಾನ ಕಳೆದಿದೆ. ಆದ್ರೆ ಈಗ ಇದೇ ಸೇತುವೆ ಅಪಾಯದಂಚಿನಲ್ಲಿದೆ..

ಇತಿಹಾಸ ಉಳ್ಳ ಸೇತುವೆ ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಅವನತಿಯ ಹಂತಕ್ಕೆ ಬಂದಿದೆ. ವಿಜಯಪುರ-ಹೈದ್ರಾಬಾದ ಮುಖ್ಯ ರಸ್ತೆಯಾಗಿದ್ದರಿಂದ ನಿತ್ಯ ಈ ಸೇತುವೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ ಆದ್ರೆ ಈಗ ವಾಹನ ಸವಾರರು ಸೇತುವೆ ಮೇಲೆ ಸಂಚಾರ ನಡೆಸಲು ಹಿಂದೇಟು ಹಾಕುವಂತಾಗಿದೆ. ಯಾಕಂದ್ರೆ ಸೇತುವೆ ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿದ್ದರಿಂದ ಸೇತುವೆ ಗೊಡೆಗಳ ಮೇಲೆ ಆಲದ ಗಿಡಗಳು ಬೆಳೆದಿವೆ. ಇವತ್ತು ಸಣ್ಣದಾಗಿರುವ ಆಲದ ಗಿಡಗಳು ನಾಳೆಯ ದಿನ ಮರವಾಗಿ ಬೆಳೆದು ಸೇತುವೆ ಕುಸಿಯುವುದಕ್ಕೆ ಕಾರಣವಾಗುತ್ತವೆ. ಇನ್ನು ಗಿಡಗಳು ಬೆಳೆದು ನಿಂತಿರುವ ಹಿನ್ನೆಲೆ ಗೊಡೆ ಸೀಳಿದ್ದರಿಂದ ಸಾಕಷ್ಟು ಆತಂಕ ಸೃಷ್ಟಿಯಾಗಿದೆ ಎನ್ನುತ್ತಾರೆ ವಾಹನ ಸವಾರ ಪ್ರಭ.

ಇನ್ನು ಸೇತುವೆಯ ಎರಡೂ ಬದಿಯಲ್ಲಿ ಗಿಡಗಳು ಬೆಳೆದಿವೆ. ಸಿಮೆಂಟ್ ರಹಿತ ಸೇತುವೆಯಾಗಿದ್ದರಿಂದ ಕಲ್ಲುಗಳು ಸಡಿಲವಾಗುತ್ತಿವೆ. ಕೆಲ ಕಡೆ ಗೋಡೆಯ ಕಲ್ಲುಗಳು ಸರಿದಿದ್ದರಿಂದ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಇನ್ನೊಂದು ವಿಶೇಷ ಅಂದ್ರೆ ಯಾದಗಿರಿ ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಇದೇ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ವಾಹನಗಳು ಇದೇ ಸೇತುವೆಯ ಮೇಲೆ ಸಂಚರಿಸುತ್ತವೆ.

ಜಿಲ್ಲೆಯ ಎಲ್ಲಾ ಉನ್ನತಮಟ್ಟದ್ದ ಅಧಿಕಾರಿಗಳು ಹಾಗೂ ಶಾಸಕರು ಇದೇ ಸೇತುವೆ ಮೇಲೆ ಸಂಚಾರ ನಡೆಸುತ್ತಾರೆ. ಆದ್ರೆ ಇವರ ಕಣ್ಣಿಗೆ ಇನ್ನೂ ಕಾಣಿಸುತ್ತಿಲ್ವಾ ಎಂಬುದು ವಾಹನ ಸವಾರರ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ, ಸಚಿವರು ಬರ್ತಾಯಿದ್ದಾರೆ ಅಂತಾ ಗೊತ್ತಾದ್ರೆ ಸಾಕು ಮೇಲಿನ ಗಿಡಗಳನ್ನ ಸಣ್ಣದಾಗಿ ಕಟ್ ಮಾಡಲಾಗುತ್ತೆ. ಆದ್ರೆ ಸಂಪೂರ್ಣವಾಗಿ ಬುಡ ಸಮೇತ ಗಿಡಗಳನ್ನ ಕಿತ್ತೆಸೆಯುತ್ತಿಲ್ಲ. ಸಣ್ಣದಾಗಿ ಮೇಲಿಂದ ಗಿಡಗಳನ್ನ ಕಟ್ ಮಾಡಿದ್ದರಿಂದ ಪ್ರಮುಖರು ಸಂಚರಿಸುವಾಗ ಗೋಡೆಗಳ ಮೇಲೆ ಗಿಡಗಳು ಇಲ್ಲ ಎನ್ನುವಂತೆ ಭಾಸವಾಗುತ್ತದೆ.

ಆದ್ರೆ ಪ್ರತಿ ಬಾರಿ ಮೇಲಿಂದಾನೆ ಗಿಡಗಳನ್ನ ಕಟ್ ಮಾಡುತ್ತಿದ್ದ ಕಾರಣಕ್ಕೆ ಬೇರುಗಳು ಆಳಕ್ಕೆ ಇಳಿದಿವೆ.. ಹೀಗಾಗಿ ಆಳಕ್ಕೆ ಇಳಿದಿರುವ ಬೇರುಗಳಿಂದ ಸೇತುವೆ ಬಿರುಕು ಬಿಡುವ ಹಂತಕ್ಕೆ ಬಂದಿದೆ. ಕೆಲ ಕಡೆ ಸಣ್ಣದಾಗಿ ಬಿರುಕು ಕೂಡ ಬಿಟ್ಟಿದೆ. ಇದರಿಂದ ಶತಮಾನದ ಸೇತುವೆ ಬೀಳುವ ಆತಂಕ ಸ್ಥಳೀಯರಿಗೆ ಕಾಡ್ತಾಯಿದೆ. ಇನ್ನು ಪ್ರತಿ ವರ್ಷ ಸೇತುವೆ ದುರಸ್ಥಿಗಾಗಿ ಸಾಕಷ್ಟು ಅನುದಾನ ಬರುತ್ತೆ.

ಆದ್ರೆ ಅಧಿಕಾರಿಗಳು ಅನುದಾನ ಯಾವ ಜಾಗದಲ್ಲಿ, ಯಾವ ಬಾಬತ್ತಿನಲ್ಲಿ ಖರ್ಚು ಮಾಡುತ್ತಾರೋ ಆ ದೇವರಿಗೆ ಗೊತ್ತಿರುವ ವಿಷಯ. ಇನ್ನು ಈ ಸೇತುವೆ ಏನಾದ್ರು ಕುಸಿದು ಬಿದ್ರೆ ಗುಜರಾತ್ ನಲ್ಲಿ ಕುಸಿತು ಬಿದ್ದ ತೂಗು ಸೇತುವೆಯ ಹಾಗೆ ದೊಡ್ಡ ಅನಾಹುತ ಸಂಭವಿಸಬಹುದು ಅಂತಾರೆ ವಕೀಲಕರಾದ ಸಾಲೋಮನ್ ಅಲ್ಫರ್ಡ್.

ಒಟ್ನಲ್ಲಿ ಶತಮಾನಗಳ ಸೇತುವೆ ಅವನತಿ ಕಾಣುವ ಮೊದಲೆ ಅಧಿಕಾರಿಗಳು ಅದನ್ನು ಉಳಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ವಾಹನ ಸವಾರರ ಹಿತವನ್ನ ಕಾಪಾಡಬೇಕಾದ್ರೆ ಸೇತುವೆಯ ಗೋಡೆಗಳ ಮೇಲೆ ಬೆಳೆದು ನಿಂತಿರುವ ಆಲದ ಗಿಡಗಳನ್ನ ಬುಡ ಸಮೇತ ಕಿತ್ತು ಹಾಕಿ, ಸೇತುವೆ ದುರಸ್ಥಿಗೆ ಕ್ರಮಕೈಗೊಳ್ಳಬೇಕಾಗಿದೆ. (ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ)

ರಾಜ್ಯದ ಇತರೆ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ