ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಿದರೆ ಮನೆಗಳ ಮೇಲೆ ಬುಲ್ಡೋಜರ್ ಓಡಿಸುತ್ತೇವೆ: ಬಸನಗೌಡ ಯತ್ನಾಳ್

|

Updated on: Oct 04, 2023 | 5:04 PM

ಹಿಂದೆ ಶಿವಮೊಗ್ಗದಲ್ಲಿ ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆಯಾದಾಗ ನಾಲ್ವರನ್ನು ಎನ್ ಕೌಂಟರ್ ಮಾಡಿಸಿ ಮುಗಿಸಿ ಅಂತ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರಿಗೆ ಹೇಳಿದ್ದೆ, ಆದರೆ ಅವರು ತನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಯತ್ನಾಳ್ ಹೇಳಿದರು.

ಯಾದಗಿರಿ: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil Yatnal) ಇದ್ದಲ್ಲಿ ವಿವಾದಾತ್ಮಕ ಭಾಷಣ (controversial speech) ಮತ್ತು ಪ್ರಚೋದನಕಾರಿ ಹೇಳಿಕೆಗಳು (provocative statements) ಇರಬೇಕು, ಇಲ್ಲದೇ ಹೋದರೆ ಅದು ಅವರ ಭಾಷಣ ಅನಿಸಲಾರದು. ಕಳೆದ ರಾತ್ರಿ ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮಾತಾಡಿದ ಅವರು ಶಿವಮೊಗ್ಗ ಗಲಭೆ ವಿಷಯವನ್ನು ಪ್ರಸ್ತಾಪಿಸಿದರು. ಹಿಂದೆ ಶಿವಮೊಗ್ಗದಲ್ಲಿ ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆಯಾದಾಗ ನಾಲ್ವರನ್ನು ಎನ್ ಕೌಂಟರ್ ಮಾಡಿಸಿ ಮುಗಿಸಿ ಅಂತ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರಿಗೆ ಹೇಳಿದ್ದೆ, ಆದರೆ ಅವರು ತನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಯತ್ನಾಳ್ ಹೇಳಿದರು. ಅದನ್ನು ಮಾಡಿದ್ದರೆ ಶಿವಮೊಗ್ಗದಲ್ಲಿ ಮತ್ಯಾವತ್ತೂ ಗಲಭೆಗಳು ನಡೆಯುತ್ತಿರಲಿಲ್ಲ ಎಂದ ಅವರು ಸಿದ್ದರಾಮಯ್ಯ ಸರ್ಕಾರ ಬಹಳ ದಿನ ಇರಲ್ಲ, ಮುಂದೆ ಬಿಜೆಪಿ ಸರ್ಕಾರ ಬಂದೇ ಬರುತ್ತದೆ, ಆಗ ಗಣಪತಿ ವಿಸರ್ಜನೆ ಸಮಯದಲ್ಲಿ ಕಲ್ಲು ತೂರಾಟ ಏನಾದರೂ ನಡೆಸಿದರೆ ಅವರ ಮನೆಗಳ ಮೇಲೆ ಬುಲ್ಡೋಜರ್ ಓಡಿಸುತ್ತೇವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ ಮಾಡಿ

Published On - 10:54 am, Wed, 4 October 23

Follow us on