ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವಿಲ್ಲ, ತಾಲಿಬಾನ್ ಸರ್ಕಾರವಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ, ತಾಲಿಬಾನ್ ಸರ್ಕಾರವಿದೆ. ರಾಜದ್ಯದಲ್ಲಿ ಹಿಂದೂಗಳು ರಾತ್ರಿ ವೇಳೆ ಸುತ್ತಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ಇದೀಗ ಹಿಂದೂಗಳ ಹಬ್ಬ ಗಣೇಶ ಚತುರ್ಥಿಗೂ ಪೊಲೀಸರ ಅನುಮತಿಬೇಕೆಂದು ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವಿಲ್ಲ, ತಾಲಿಬಾನ್ ಸರ್ಕಾರವಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 16, 2023 | 9:23 PM

ವಿಜಯಪುರ, ಸೆಪ್ಟೆಂಬರ್​​ 16: ರಾತ್ರಿ ವೇಳೆ ಹಿಂದೂಗಳು ಸುತ್ತಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿಲ್ಲ, ತಾಲಿಬಾನ್ ಸರ್ಕಾರವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ವಾಗ್ದಾಳಿ ಮಾಡಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಾರ್ವಜನಿಕ ಗಣೇಶನ ಪ್ರತಿಷ್ಟಾಪಿಸುವ ಮಂಡಳಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ಮೈಸೂರಿನಲ್ಲಿ ಕೊಲೆಯಾಯಿತು, ಶಿವಮೊಗ್ಗದಲ್ಲಿ ಗಲಾಟೆಯಾಯಿತು ಎಂದು ಹೇಳಿದ್ದಾರೆ.

ಗಣೇಶ ಹಬ್ಬಕ್ಕೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ನಮ್ಮ ಸಭೆಗೆ ಪೊಲೀಸರು ಬಂದಿದ್ದಾರೆ. ಗಜಾನನ ಮಹಾಮಂಡಳಿ ಸಭೆಗೆ ಪೊಲೀಸರು ಆಗಮಿಸಿ ಸಮಸ್ಯೆ ಆಲಿಸಿದ್ದರು. ಇದಕ್ಕೆಲ್ಲ ನಮ್ಮ ಕಾರ್ಯಕರ್ತರು ಭಯಪಡಬೇಡಿ.​ ಮುಂದಿನ 6 ತಿಂಗಳಲ್ಲಿ ಮತ್ತೆ ಪೊಲೀಸರು ಹಿಂದೂಗಳ ಸಭೆಗೆ ಬಂದು ಸಮಸ್ಯೆ ಆಲಿಸುತ್ತಾರೆ. ಆ ಮೂಲಕ ಇನ್ನಾರು ತಿಂಗಳಲ್ಲಿ ಸರ್ಕಾರ ಬದಲಾಗುತ್ತೆ ಎಂದು ಪುನರುಚ್ಚರಿಸಿದರು.

ಇದನ್ನೂ ಓದಿ: ಕರುಣಾನಿಧಿ ತಳಿಯೇ ದೇಶಕ್ಕೆ, ಧರ್ಮಕ್ಕೆ ನಿಷ್ಠೆ ಇಲ್ಲದ ವಿಷದ ಹಾವು; ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಗಣೇಶೋತ್ಸವದಿಂದ ಅನ್ನೋದನ್ನ ಮರೀಬಾರದು. ಗಣೇಶ ಹಬ್ಬ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತೆ ಎಂದಿದ್ದಾರೆ.

ಈ ಬಾರಿ ಸಿದ್ದೇಶ್ವರ ದೇವಸ್ಥಾನದ ಬಳಿ ಪ್ರತಿಷ್ಟಾಪಿಸುವ ಗಜಾನನ ಮಹಾಮಂಡಳದ ಗಣಪನ ವೇದಿಕೆಗೆ ಸನಾತನ ಹಿಂದೂ ವೇದಿಕೆ ಎಂದು ಹೆಸರಿಡಲಾಗುತ್ತಿದೆ. ಇದೇ ವೇಳೆ ಈ ಬಾರಿಯ ಗನೇಶೋತ್ಸವಕ್ಕಾಗಿ ಗಜಾನನ ಮಹಾಮಂಡಳದ ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಸಿದ್ದರಾಮಯ್ಯ ಪರ ಬ್ಯಾಟಿಂಗ್

ಸಿದ್ದರಾಮಯ್ಯ ಸಂವಿಧಾನಾತ್ಮಕನಾಗಿ ಸಿಎಂ ಆಗಿದ್ದಾರೆ. ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅವರು ಆ ಪಕ್ಷಕ್ಕೆ ದುಡಿದಿದ್ದಾರೆ, ಸಿಎಂ ಆಗುವ ಯೋಗ್ಯತೆ, ಅರ್ಹತೆ ಇದೆ. ಹೀಗಾಗಿ ಸಿಎಂ ಆಗಿದ್ದಾರೆ. ಹೊಟ್ಟೆ ಕಿಚ್ಚು ಪಟ್ಟರೆ ಆಗೋದು ಏನಿದೆ. ನಿಮ್ಮ ಯೋಗ್ಯತೆ ಏನಿದೆ ಅಂತ ಅಳೆದುಕೊಳ್ಳಿ ಎಂದು ಹರಿಪ್ರಸಾದ್​​ಗೆ ಯತ್ನಾಳ್ ಟಾಂಗ್ ನೀಡಿದ್ದರು.

ಇದನ್ನೂ ಓದಿ: ಬರ ಪರಿಹಾರ, ಘೋಷಣೆ ಬಗ್ಗೆ ಮಾನದಂಡಗಳ ಸಮಸ್ಯೆ: ಕೇಂದ್ರದ ಬರ ನಿರ್ವಹಣೆ ಕೈಪಿಡಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್​​

ಸಿದ್ದರಾಮಯ್ಯ ರಾಜ್ಯದ ಹಿರಿಯ ನಾಯಕರು. ಅವರದೇ ಆದ ವರ್ಚಸ್ಸು ಇದೆ. ಅವರಿಗೆ ಯೋಗ್ಯತೆ ಇದೆ. ನಾಡಿನ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಮಜಾವಾದಿ ಅಂತ ಅವರು ಮಾತನಾಡಿಕೊಳ್ಳಲಿ. ಆದರೆ ನಾನು ಅದರ ಬಗ್ಗೆ ಮಾತನಾಡಲ್ಲ. ರಾಜ್ಯದ ಜನ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾನು ಗೌರವ ಕೊಡುತ್ತೇನೆ. ಮಜಾವಾದಿ ಅಂತ ಸಿದ್ದರಾಮಯ್ಯ ಹೆಸರು ಹೇಳದ ಹರಿಪ್ರಸಾದ್ ಹೇಳೋದಾದರೆ ಪೂರ್ತಿ ಹೇಳಲಿ. ಅರ್ಧಂಬರ್ಧ ಯಾಕೆ ಹೇಳಬೇಕು ಎಂದು ಯತ್ನಾಳ್ ಪ್ರಶ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:22 pm, Sat, 16 September 23