ಯಾದಗಿರಿ: ಪ್ರಾಣ ಬಿಟ್ಟೇವು, ದೂರವಾಗಲಾರೆವು ಎಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣು

| Updated By: ವಿವೇಕ ಬಿರಾದಾರ

Updated on: Feb 18, 2023 | 1:03 PM

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾದಗಿರಿ: ಪ್ರಾಣ ಬಿಟ್ಟೇವು, ದೂರವಾಗಲಾರೆವು ಎಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣು
ಪ್ರೇಮಿಗಳು (ಎಡಚಿತ್ರ) ಪೊಲೀಸ್​ ಠಾಣೆ (ಬಲಚಿತ್ರ)
Follow us on

ಯಾದಗಿರಿ: ಯೌವನದಲ್ಲಿ ಮೂಡಿದ ಮೊದಲ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಮೊದಲ ಪ್ರೀತಿ ನಿಜವಾದ ಪ್ರೀತಿಯಾಗಿದ್ದರೇ ಎಂದಿಗೂ ದೂರವಾಗುವುದಿಲ್ಲ, ದೂರ ಮಾಡಲು ಪ್ರಯತ್ನಪಟ್ಟರೇ ಪ್ರಾಣ ಬಿಡುತ್ತಾರೆ ಹೊರತು, ಪ್ರೀತಿಸಿದ ಪ್ರಿಯತಮೆ, ಪ್ರಿಯಕರನನ್ನು ಎಂದಿಗೂ ದೂರ ಮಾಡಲು ಆಗುವುದಿಲ್ಲ. ಅದೆಷ್ಟೋ ಪ್ರೇಮಿಗಳು (Lovers) ತಮ್ಮನ್ನು, ಒಂದಾಗಲು ಸಮಾಜ, ಕುಟುಂಬ ಬಿಡಲಿಲ್ಲವೆಂದು ಪ್ರಾಣ ಕಳೆದುಕೊಂಡಿದ್ದನ್ನು ಇತಿಹಾಸ ಪುಟಗಳಲ್ಲಿ ಓದಿದ್ದೇವೆ, ನಮ್ಮ ಸುತ್ತಮುತ್ತ ಅನೇಕ ಘಟನೆಗಳನ್ನು ಕಂಡಿದ್ದೇವೆ ಹಾಗೂ ಕೇಳಿದ್ದೇವೆ. ಇದರಂತೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುವರ್ಣ(20) ಹಾಗೂ ಈಶಪ್ಪ(22) ಮೃತ ದುರ್ದೈವಿಗಳು.

ಈಶಪ್ಪ ಮತ್ತು ಸುವರ್ಣ ಕಳೆದ ಐದಾರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಬೇರೆ ಯುವಕನ ಜೊತೆ ಸುವರ್ಣಳ ವಿವಾಹವಾಗಿತ್ತು. ಸುವರ್ಣ ಬೆಂಗಳೂರು ನಗರದಲ್ಲಿ ಪತಿ ಜೊತೆ ವಾಸವಿದ್ದಳು. ನಿನ್ನೆ (ಫೆ.17) ಪತಿಗೆ ತಿಳಿಸದೇ ಹುರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಇಂದು (ಫೆ.18) ಅದೇನಾಯಿತು ಏನೋ ಬೆಳಿಗ್ಗೆ ವಿಷ ಸೇವಿಸಿ ಸುವರ್ಣ ಮತ್ತು ಈಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Sat, 18 February 23